ಮಾಜಿ ಶಾಸಕರ ಪುತ್ರ ನಿಧನ : ತಿಂಗಳ ಅಂತರದಲ್ಲಿ ಇಬ್ಬರು ಮಕ್ಕಳು ಸಾವು

Kannadaprabha News   | Asianet News
Published : Oct 01, 2020, 02:08 PM IST
ಮಾಜಿ ಶಾಸಕರ ಪುತ್ರ ನಿಧನ :  ತಿಂಗಳ ಅಂತರದಲ್ಲಿ ಇಬ್ಬರು ಮಕ್ಕಳು ಸಾವು

ಸಾರಾಂಶ

ಮಾಜಿ ಶಾಸಕರ ಪುತ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಿಂಗಳಾಂತರದಲ್ಲಿ ಇಬ್ಬರು ಮಕ್ಕಳು ಮರಣ ಹೊಂದಿದ್ದಾರೆ

ತಿಪಟೂರು (ಅ.01) : ತಾಲೂಕಿನ ಮಾಜಿ ಶಾಸಕ ಎಸ್‌.ಪಿ. ಗಂಗಾಧರಪ್ಪನವರ ಕಿರಿಯ ಪುತ್ರ ಕೊಬ್ಬರಿ ವರ್ತಕ ಲೋಕೇಶ್‌(55) ಹೃದಯಾಘಾತದಿಂದ ಬುಧವಾರ ಕೊನೆಯುಸಿರೆಳೆದರು.

ಎದೆನೋವು ಕಾಣಿಸಿಕೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಅಸುನೀಗಿದರು. ಅವರಿಗೆ ಮೂವರು ಪುತ್ರಿಯರು, ಒರ್ವ ಪುತ್ರ ಇದ್ದಾರೆ. ಮಾಜಿ ಶಾಸಕ ಗಂಗಾಧರಪ್ಪನವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಪುತ್ರ ಮಹದೇವಪ್ಪ ನಿಧನರಾಗಿ ತಿಂಗಳು ತುಂಬಿಲ್ಲ. ಈಗ ಕಿರಿಯ ಪುತ್ರ ಲೋಕೇಶ್‌ ಸಹ ನಿಧನರಾಗಿದ್ದಾರೆ.

ಭಟ್ಕಳ: ಮಾಸ್ಕ್‌ನಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿ ಬಂಧನ ..

ಲೋಕೇಶ್‌ ನಿಧನಕ್ಕೆ ಸಚಿವ ಮಾಧುಸ್ವಾಮಿ, ಮಾಜಿ ಶಾಸಕ ಬಿ. ನಂಜಾಮರಿ, ಬಿಜೆಪಿ ಮುಖಂಡ ಲೋಕೇಶ್ವರ, ಎಪಿಂಸಿ ಅಧ್ಯಕ್ಷ ದಿವಾಕರ್‌, ವೀರಶೈವ ಸಮಾಜದ ತಾ ಅಧ್ಯಕ್ಷ ಎಂ. ಆರ್‌. ಸಂಗಮೇಶ್‌, ಕಲ್ಪತರು ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಕಾರ್ಯದರ್ಶಿ ಕೆ.ಪಿ. ರುದ್ರಮುನಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಹೆಚ್‌.ಬಿ. ದಿವಾಕರ್‌, ವಿನಾಯಕ ಸೊಸೈಟಿ ಅಧ್ಯಕ್ಷ ಕೆ.ಆರ್‌. ಅರುಣ್‌ಕುಮಾರ್‌, ಕಿರುತೆರೆ ನಟ ದಯಾನಂದ ಸಾಗರ್‌ ಸೇರಿದಂತೆ ಬೆಲಗೂರು ವಂಶಸ್ಥರು ಸಂತಾಪ ಸೂಚಿಸಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!