'ನನ್ನ ಸಾವಿಗಾಗಿ ಕಾಯುತ್ತಿದ್ದಾರೆ'; ಆರೋಗ್ಯದ ಕುರಿತು ಮಹತ್ವದ ಅಪ್‌ಡೇಟ್‌ ಕೊಟ್ಟ ಬಸನಗೌಡ ಪಾಟೀಲ ಯತ್ನಾಳ್

Published : Nov 29, 2026, 11:50 AM IST
Basangouda Patil Yatnal

ಸಾರಾಂಶ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮ ಆರೋಗ್ಯದ ಬಗ್ಗೆ ಹಬ್ಬಿರುವ ವದಂತಿಗಳನ್ನು ತಳ್ಳಿಹಾಕಿದ್ದು, ಕೇವಲ ಟೈಫಾಯಿಡ್ ಜ್ವರದಿಂದ ವಿಶ್ರಾಂತಿ ಪಡೆದಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರಾಜ್ಯದ ಬರ ಪರಿಹಾರಕ್ಕಾಗಿ ಬಿಜೆಪಿ ಸಂಸದರು ಪ್ರಧಾನಿ ಮೋದಿಯವರನ್ನು ಭೇಟಿಯಾಗಬೇಕೆಂದು ಸಲಹೆ ನೀಡಿದ್ದಾರೆ.

ವಿಜಯಪುರ: ನಾನು ಆರಾಮಾಗಿಯೇ ಇದ್ದೇನೆಯ ಟೈಫರ್ಡ್ ಬಾಧಿಸಿತ್ತು. ಇದು ಸಾಮಾನ್ಯವಾದ ಜ್ವರ. ಅದಕ್ಕಾಗಿ ವಿಶ್ರಾಂತಿ ಪಡೆದುಕೊಂಡಿರುವೆ. ನನಗೇನೂ ಹಾರ್ಟ್ ಅಟ್ಯಾಕ್ ಆಗಿಲ್ಲ, ಪ್ಯಾರಾಲಿಸಿಸ್ ಆಗಿಲ್ಲ. ನಾನು ಯಾವಾಗ ಸಾಯುತ್ತೇನೆ. ನಾವು ಯಾವಾಗ ಶಾಸಕನಾಗಬೇಕೆಂದು ವಿರೋಧಿಗಳು ಕಾಯುತ್ತಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಆರೋಗ್ಯದ ಕುರಿತು ಊಹಾಪೋಹ ಹಬ್ಬಿಸಿದವರ ಕುರಿತು ಕಿಡಿ ಕಾರಿದರು.

ಜ್ವರ ಬಾಧಿಸಿತ್ತು, ವಿಶ್ರಾಂತಿ ಪಡೆದಿರುವೆ

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೇನೂ ಹಾರ್ಟ್ ಆಟ್ಯಾಕ್ ಆಗಿದೆಯಾ? ಅಥವಾ ಕೈ ಕಾಲು ಮುರಿದಿದೆಯೋ?, ಎಲ್ಲವೂ ಸರಿಯಾಗಿದೆಯಲ್ಲವೇ? ಆರೋಗ್ಯ ತಪಾಸಣೆ ವೇಳೆ ಟೈಫರ್ಡ್ ಎಂದು ರಿಪೋರ್ಟ್ ಹಾಗೂ ಇನ್ನೊಂದು ಕಡೆ ಜ್ವರ ಎಂದು ಬಂದಿತ್ತು. ಹೀಗಾಗಿ ನಾಲ್ಕೈದು ದಿನ ರೆಸ್ಟ್ ಮಾಡಿದ್ದೆ. ಬಿಟ್ಟು ಬಿಟ್ಟು ಜ್ವರ ಬರುತ್ತಿದ್ದ ಕಾರಣ ಸಂಪೂರ್ಣವಾಗಿ ವಿಶ್ರಾಂತಿ ಪಡೆದುಕೊಂಡಿರುವೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಯತ್ನಾಳ ಇಸ್ ಗ್ರೇಟ್ ಲೀಡರ್‌

ಆದರೆ ಕೆಲವರು ನನ್ನ ಕುರಿತು ಚಿಂತೆ ಮಾಡುತ್ತಿದ್ದಾರೆ. ಅವರೆಲ್ಲ ಕಳ್ಳರು. ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ನಾನು ಮಾಡಿರುವ ಅಭಿವೃದ್ಧಿ ನೋಡಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ವಿಜಯಪುರ ಎಂದರೆ ರಾಜ್ಯದಲ್ಲಿ ಸಾಮಾನ್ಯ ಜನರು ಕೂಡ ಯತ್ನಾಳ ಎನ್ನುತ್ತಾರೆ. ಯತ್ನಾಳ ಇಸ್ ಗ್ರೇಟ್ ಲೀಡರ್‌ ಎನ್ನುತ್ತಾರೆ. ನನಗೆ ಜನರ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನವೇ ಶ್ರೀರಕ್ಷೆಯಾಗಿದೆ. ನಾನು ವಿರೋಧಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ನಮ್ಮ ಸಂಸದರು ಬಾಯಿ ಬಿಡುತ್ತಿಲ್ಲ

ಬರ ವಿಷಯವಾಗಿ ಕಾನೂನು ಹೋರಾಟ ಕೈಗೊಳ್ಳುವುದಾಗಿ ಸಿಎಂ ಡಿ.ಕೆ.ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದು ಮುಖ್ಯವಲ್ಲ. ನಮ್ಮ ನಾಡಿನ ಜನತೆ ಬಿಜೆಪಿಗೆ ಕೇಂದ್ರದಲ್ಲಿ ಅಧಿಕಾರ ನೀಡಿದ್ದಾರೆ. ಆದರೆ ನಮ್ಮ ಸಂಸದರು ಬಾಯಿ ಬಿಡುತ್ತಿಲ್ಲ ಇದು ದುರ್ದೈವದ ಸಂಗತಿ. ಬಿಜೆಪಿ ಸಂಸದರು ಕೂಡಲೇ ಪ್ರಧಾನಿ ಅವರನ್ನು ಭೇಟಿ ಮಾಡಬೇಕು. ನಮ್ಮ ರಾಜ್ಯದವರೇ ಆದ ಪ್ರಹ್ಲಾದ್ ಜೋಶಿ, ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಸಚಿವರಿದ್ದಾರೆ. ಇವರೆಲ್ಲರ ನೇತೃತ್ವದಲ್ಲಿ ಬಿಜೆಪಿ ಸಂಸದರ ನಿಯೋಗದೊಂದಿಗೆ ಮೋದಿ ಅವರನ್ನು ಭೇಟಿಯಾಗಬೇಕು. ನಾವು ಈ ಹಿಂದೆ ವಾಜಪೇಯಿಯವರು ಇದ್ದಾಗ ನಿಯೋಗದೊಂದಿಗೆ ತೆರಳಿ ಭೇಟಿಯಾಗುತ್ತಿದ್ದೆವು. ಈ ನಡೆ ಈಗಿನ ಬಿಜೆಪಿ ಸಂಸದರು ಅನುಸರಿಸರಿಸಲಿ. ಡಿ.ಕೆ.ಶಿವಕುಮಾರ ತಂಡ ಭೇಟಿಗೂ ಮುನ್ನವೇ ರಾಜ್ಯಕ್ಕೆ ಬರಬೇಕಾದ ಪರಿಹಾರ ಬಂದರೆ ಬಿಜೆಪಿಗೆ ಗೌರವ ಬರುತ್ತದೆ ಎಂದು ಯತ್ನಾಳ ಸಲಹೆ ನೀಡಿದರು.

PREV
Read more Articles on
click me!

Recommended Stories

ಆಶಾ ಕಾರ್ಯಕರ್ತೆಯರ ಧರಣಿಗೆ ಸಿಕ್ತು ಜಯ: ₹2,000 ಗೌರವಧನ ಹೆಚ್ಚಳಕ್ಕೆ 'ಲಿಖಿತ ಆದೇಶ' ಹೊರಡಿಸಿದ ಸರ್ಕಾರ!
Mandya: RTO ಅಧಿಕಾರಿಗಳ ಎಡವಟ್ಟಿಗೆ ಮೂವರು ಬಲಿ; ಟಿಪ್ಪರ್‌ಗೆ ಅಪ್ಪಳಿಸಿದ ಥಾರ್ ಜೀಪ್!