ಪ್ರತಿಯೊಬ್ಬರೂ ರಾಷ್ಟ್ರೀಯತೆ ಅಳವಡಿಸಿಕೊಳ್ಳಿ- ಚೈತ್ರಾ ಕುಂದಾಪುರ

By Kannadaprabha NewsFirst Published Jun 11, 2023, 1:00 PM IST
Highlights

ದೇಶವೆಂದರೆ ತಾಯಿ ಭಾರತಿ, ದೇವರಿಗೆ ಸಮನಾದ ದೇಶವೆಂಬ ತಾಯಿ ರಕ್ಷಣೆಗೆ ಪ್ರತಿ ಭಾರತೀಯನೂ ಸಜ್ಜಾಗಬೇಕು, ರಾಜಕಾರಣಿ ಸೇರಿ ದೇಶದ ಪ್ರತಿಯೊಬ್ಬರೂ ರಾಷ್ಟ್ರೀಯತೆ ಅಳವಡಿಸಿಕೊಳ್ಳಬೇಕು ಎಂದು ಚಿಂತಕಿ ಕು. ಚೈತ್ರಾ ಕುಂದಾಪುರ ಹೇಳಿದರು.

ಗದಗ (ಜೂ.11): ದೇಶವೆಂದರೆ ತಾಯಿ ಭಾರತಿ, ದೇವರಿಗೆ ಸಮನಾದ ದೇಶವೆಂಬ ತಾಯಿ ರಕ್ಷಣೆಗೆ ಪ್ರತಿ ಭಾರತೀಯನೂ ಸಜ್ಜಾಗಬೇಕು, ರಾಜಕಾರಣಿ ಸೇರಿ ದೇಶದ ಪ್ರತಿಯೊಬ್ಬರೂ ರಾಷ್ಟ್ರೀಯತೆ ಅಳವಡಿಸಿಕೊಳ್ಳಬೇಕು ಎಂದು ಚಿಂತಕಿ ಕು. ಚೈತ್ರಾ ಕುಂದಾಪುರ(Chaitra kundapura) ಹೇಳಿದರು.

ಅವರು ಗದಗ ನಗರದಲ್ಲಿ ಆಯೋಜಿಸಿರುವ ಜನತಾ ಸದನದಲ್ಲಿ ರಾಷ್ಟ್ರೀಯತೆ ಕುರಿತು ಮಾತನಾಡಿದರು.

ರಾಜಕಾರಣ ಎನ್ನುವುದು ರಾಷ್ಟ್ರೀಯತೆಯಡಿ ಬರಬೇಕು, ದೇಶದ ಸಮಸ್ಯೆಯನ್ನು ದೇಶದೊಳಗೆ ಇತ್ಯರ್ಥಗೊಳಿಸಬೇಕು, ನಮ್ಮ ವ್ಯವಸ್ಥೆಯಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು, ದೇಶದ ಸಮಸ್ಯೆ ಮನೆಯ ಸಮಸ್ಯೆ ಎಂದು ಭಾವಿಸಿಕೊಳ್ಳಬೇಕು, ಸಮಸ್ಯೆ ಜತೆಗೆ ಪರಿಹಾರವನ್ನು ಕಂಡುಕೊಳ್ಳಬೇಕು, ನೂರಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು, ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳೊಣ, ಸಂವಿಧಾನದಲ್ಲಿ ಎಲ್ಲ ಸಮಸ್ಯೆಗೂ ಪರಿಹಾರವಿದೆ ಎಂದು ಹೇಳಿದರು.

ಹಿಂದೂಗಳೆಲ್ಲ ಒಂದಾಗುವ ಕಾಲ ಬಂದಿದೆ: ಚೈತ್ರಾ ಕುಂದಾಪುರ

ಬೌದ್ಧಿಕ ಶ್ರೀಮಂತವಾಗಿರುವ ಭಾರತಕ್ಕೆ ಬೇರೆ ದೇಶದವರ ಮಧ್ಯಸ್ಥಿಕೆ ಅವಶ್ಯಕತೆ ಇಲ್ಲ. ರಾಷ್ಟ್ರೀಯತೆ ಬಗ್ಗೆ ಮಕ್ಕಳಿಗೆ ಮೂಡಿಸಬೇಕು, ಪಾಶ್ಚಾತ್ಯೀಕರಣದಿಂದ ಹೊರಗೆ ಬರಬೇಕು, ಸಮಾಜ, ದೇಶದ ಬಗ್ಗೆ ಬಂದರೆ ಎಲ್ಲರೂ ಒಗ್ಗೂಡಬೇಕು ಎಂದರು.

ರಾಜಕಾರಣಿಗಳಿಗೆ ರಾಷ್ಟ್ರೀಯತೆ ಅಳವಡಿಸಿಕೊಳ್ಳದಿದ್ದರೆ ದೇಶದ ಅಪಾಯ ಸ್ಥಿತಿ ತಲುಪಿದರೂ ಅಚ್ಚರಿ ಪಡಬೇಕಿಲ್ಲ. ಇದಕ್ಕೆ ಅವಕಾಶ ಕೊಡದೇ ದೇಶದ ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಜಮ್ಮು ಕಾಶ್ಮೀರ ಸೇರಿ ದೇಶಕ್ಕೆ ಸಂಬಂಧಿಸಿದ ಪ್ರತಿ ವಿಷಯದಲ್ಲಿ ರಾಜಕಾರಣಿಗಳು ಒಂದಾಗಬೇಕು ಎಂದು ಹೇಳಿದರು. ವಂದೇ ಮಾತರಂ ಕಡ್ಡಾಯಗೊಳಿಸಿದರೂ ಅದನ್ನು ವಿರೋಧಿಸುವವರು ಇದ್ದಾರೆ, ದೇಶಕ್ಕೆ ಗೌರವ ಕೊಡದಿದ್ದರೆ ಹೇಗೆ? ಆದ್ದರಿಂದ ರಾಷ್ಟ್ರೀಯತೆ ಎಂಬ ಪರಿಕಲ್ಪನೆ ಅಳವಡಿಸಿಕೊಳ್ಳುವುದು ಅತ್ಯವಶ್ಯ ಎಂದರು. ಭಾರತಕ್ಕೆ ಸರಿಸಾಟಿ ಬೇರೊಂದು ದೇಶವಿಲ್ಲ. ದೇಶಕ್ಕೆ ಅಪಾಯ ಬಂದರೆ ಪ್ರತಿಯೊಬ್ಬರೂ ಸೈನಿಕರಾಗಬೇಕು. ಧರ್ಮಕ್ಕಿಂತ ದೇಶ ಮುಖ್ಯ ಎಂಬ ಭಾವ ಎಲ್ಲರಲ್ಲಿಯೂ ಮೂಡಬೇಕು ಎಂದರು.

ಜಗತ್ತಿನ ಅಳಿವು ಉಳಿವು ಹಣ್ಣಿನ ಮೇಲೆ ನಿಂತಿದೆ : ಚೈತ್ರಾ ಕುಂದಾಪುರ

click me!