ಜಿಲ್ಲಾ ಕೇಂದ್ರದಲ್ಲಿ ಸೋಮವಾರ ವಿಶ್ವ ಮಣ್ಣಿನ ದಿನಾಚರಣೆ ಪ್ರಯುಕ್ತ ಇಶಾ ¶ೌಂಡೇಷನ್‌ನ ನೂರಾರು ಸ್ವಯಂ ಸೇವಕರು ಮಣ್ಣಿಗಾಗಿ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಮಣ್ಣು ಉಳಿಸಿ ಅಭಿಯಾನ ಕುರಿತು ಅರಿವು ಮೂಡಿಸಿದರು.
ಚಿಕ್ಕಬಳ್ಳಾಪುರ (ಡಿ.06) : ಜಿಲ್ಲಾ ಕೇಂದ್ರದಲ್ಲಿ ಸೋಮವಾರ ವಿಶ್ವ ಮಣ್ಣಿನ ದಿನಾಚರಣೆ ಪ್ರಯುಕ್ತ ಇಶಾ ಫೌಂಡೇಷನ್‌ನ ನೂರಾರು ಸ್ವಯಂ ಸೇವಕರು ಮಣ್ಣಿಗಾಗಿ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಮಣ್ಣು ಉಳಿಸಿ ಅಭಿಯಾನ ಕುರಿತು ಅರಿವು ಮೂಡಿಸಿದರು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ (Soil) ಉಳಿಸಿ ಅಭಿಯಾನಕ್ಕೆ ಜಿಪಂ ಸಿಇಒ ಪಿ.ಶಿವಶಂಕರ್ ಚಾಲನೆ ನೀಡಿ ಪ್ರತಿಯೊಬ್ಬರು ಮಣ್ಣಿನ ಸಂರಕ್ಷಣೆಗೆ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಇಶಾ ¶ೌಂಡೇಷನ್‌ನ ಮಣ್ಣು ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
undefined
ಮಣ್ಣಿನ ಮಾಲಿನ್ಯ ತಡೆಗಟ್ಟಿ
ರಾಸಾಯನಿಕಗಳ ಬಳಕೆಯಿಮದ ನಮ್ಮ ಕೃಷಿ ಭೂಮಿ (Earth) ಸತ್ವ ಕಳೆದುಕೊಳ್ಳುತ್ತಿದೆ. ಇದರಿಂದ ಭವಿಷ್ಯದ ದಿನಗಳಲ್ಲಿ ಕೃಷಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಣ್ಣು ಉಳಿದರೆ ಮಾತ್ರ ಭೂಮಿ ಮೇಲೆ ಮನುಷ್ಯ ಉಳಿಯಲು ಸಾಧ್ಯ, ಮಣ್ಣು ಸಂರಕ್ಷಣೆ ಅತಿ ಮುಖ್ಯವಾಗಿದೆ. ಮಣ್ಣಿನ ಮಾಲಿನ್ಯ ತಡೆಯುವುದು ಬಹಳ ಅಗತ್ಯವೆಂದು ಈ ವೇಳೆ ಜಿಪಂ ಸಿಇಒ ಪಿ.ಶಿವಶಂಕರ್ ಪ್ರತಿಪಾದಿಸಿದರು.
ವಿಶ್ವ ಮಣ್ಣಿನ ದಿನದಂದು ಇಶಾ ಸ್ವಯಂ ಸೇವಕರು ಹಾಗು ನಗರದ ವಿವಿಧ ಶಾಲಾ ಕಾಲೇಜುಗಳ ಮಕ್ಕಳು ಸರ್ ಎಂ ವಿ ಸ್ಟೇಡಿಯಂ ನಿಂದ ಮೆರವಣಿಗೆ ಹೊರಟು, ನಗರಸಭೆ ಬಳಿ ಇರುವ ಟೌನ್ ಹಾಲ್ ಮೂಲಕ ಗಂಗಮ್ಮ ಗುಡಿ ರಸ್ತೆಯ ಮೂಲಕ ಕೋರ್ಚ್ ಕಾಂಪ್ಲೆಕ್ಸ… ನಿಂದ ಶಿಡ್ಲಘಟ್ಟ- ಸರ್ ಎಂ ವಿ ಸ್ಟೇಡಿಯಂ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಮಣ್ಣು ಉಳಿಸಿ ಅಭಿಯಾನದಲ್ಲಿ ಇನ್ನೂ ಹೆಚ್ಚು ಜನ ಭಾಗವಹಿಸಬೇಕೆಂಬುದರ ಬಗ್ಗೆ ಅರಿವು ಮೂಡಿಸಿದರು.
ಚಟುವಟಿಕೆ ಚುರುಕುಗೊಳ್ಳಬೇಕು
ಈ ವೇಳೆ ಇಶಾ ಸ್ವಯಂ ಸೇವಕರು ಮಾಹಿತಿ ನೀಡಿದರು. ಈಗಾಗಲೇ ಇಶಾ ¶ೌಂಡೇಷನ್ ಸಂಸ್ಥಾಪಕದರಾದ ಸದ್ಗುರು ಶ್ರೀ ಜಗ್ಗಿವಾಸುದೇವ್ ನೇತೃತ್ವದಲ್ಲಿ 81 ದೇಶಗಳ ಸರ್ಕಾರಗಳು , ಮಣ್ಣಿನ ಅಳಿವಿನ ಕುರಿತಾಗಿ ತುರ್ತಾಗಿ ಕಾರ್ಯನಿರ್ವಹಿಸುವಂತೆ ಕಾರ್ಯನೀತಿಗಳನ್ನು ರಚಿಸಲು ಮುಂದಾಗಿದ್ದಾರೆ. ಆದರೂ ಕೆಲಸದ ವೇಗವನ್ನು ಹೆಚ್ಚಿಸಲು ಜನರು ತಮ್ಮ ತಮ್ಮ ಪ್ರತಿನಿಧಿಗಳಲ್ಲಿ ಮಾತು - ಚರ್ಚೆಗಳನ್ನು ಆಡುವ ಮೂಲಕ ಇನ್ನು ಹೆಚ್ಚಾಗಿ ಭಾಗವಹಿಸಬೇಕು ಎಂದು ಮಣ್ಣು ಪಾದಯಾತ್ರೆಯ ಉದ್ದೇಶ ವಾಗಿತ್ತು ಎಂದರು.
ಸದ್ಗುರುಗಳು ತಮ್ಮ ಮಣ್ಣು ಉಳಿಸಿ ಅಭಿಯಾನದ ಆಕರ್ಷಣೆಯಾಗಿದ್ದ ಕಪ್ಪು ಕನ್ನಡಕ ಮತ್ತು ಬೈಕ್ ನಲ್ಲಿ ಬೆಂಗಳೂರಿನ ಬೀದಿಗಳಲ್ಲಿ ಕಾಣಿಸಿಕೊಂಡರು. ಇದು 27 ದೇಶಗಳಲ್ಲಿ 30,000 ಕಿಮೀ ಸವಾರಿಯ ಜೊತೆಗೆ 691 ಕಾರ್ಯಕ್ರಮಗಳನ್ನು ಕೇವಲ 100 ದಿನಗಳಲ್ಲಿ ನಡೆಸಿದ ಅವರ ಅತಿ-ಮಾನುಷ ಒಬ್ಬಂಟಿ ಮೋಟಾರ್ ಸೈಕಲ್ ಪ್ರಯಾಣದ ನೆನಪುಗಳನ್ನು ಮರುಕಳಿಸಿತು.
ಕೊಪ್ಪಳ : ಪ್ರಸ್ತುತ ದಿನದಲ್ಲಿ ಮಣ್ಣಿನ ಆರೋಗ್ಯ ಕಾಪಾಡುವುದರಿಂದ ಮಾತ್ರ ಕೃಷಿಯಲ್ಲಿ ಪ್ರಗತಿ ಸಾಧಿಸಬಹುದಾಗಿದೆ ಎಂದು ರಾಯಚೂರು ಕೃಷಿ ವಿವಿ ವ್ಯವಸ್ಥಾಪನ ಮಂಡಳಿ ಸದಸ್ಯ ಮಹಾಂತೇಶ ಗೌಡ ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ರಾಯಚೂರು ಕೃಷಿ ವಿವಿ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿಕ ಸಮಾಜ, ಕೃಷಿ ತಂತ್ರಜ್ಞರ ಸಂಸ್ಥೆ ಸಹಯೋಗದಲ್ಲಿ ವಿಶ್ವ ಮಣ್ಣು ದಿನಾಚರಣೆ ಮತ್ತು ಕಿಸಾನ್ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಸ್ತರಣಾ ಮುಂದಾಳು ಡಾ. ಎಂ.ವಿ. ರವಿ ಮಾತನಾಡಿ, ವಿಶ್ವಸಂಸ್ಥೆಯು 2013ರಲ್ಲಿ ಮಣ್ಣಿನ ಆರೋಗ್ಯವನ್ನು ಮನಗಂಡು ವಿಶ್ವ ಮಣ್ಣು ದಿನಾಚರಣೆಯನ್ನು ಆಚರಿಸುವ ಕುರಿತು ನಿರ್ಣಯ ಕೈಗೊಂಡು, 2014ರ ಡಿ. 5ರಂದು ಮೊದಲ ಬಾರಿಗೆ ವಿಶ್ವದಾದ್ಯಂತ ಮಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾರಂಭಿಸಿತು. ಮಣ್ಣು ಮಾದರಿ ತೆಗೆಯುವ ವಿಧಾನವನ್ನು ಪೋಸ್ಟರ್ ಮೂಲಕ ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ವಿರೂಪಣ್ಣ ಹಳ್ಳಿಗುಡಿ ಮಾತನಾಡಿ, ಜಪಾನ್ ದೇಶದ ರೈತ ವಿಜ್ಞಾನಿ ಫೋಕೋ ವೋಕೋ ಅವರ ಕೃಷಿ ಪದ್ಧತಿಯನ್ನು ಅಳವಡಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು ಎಂದರು.
ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶಂಕರಪ್ಪ ಚೌಡಿ ಮಾತನಾಡಿ, ತಮ್ಮ ಹೊಲದಲ್ಲಿ ತಾವು ಮಾಡಿದ ಅನೇಕ ಪ್ರಯೋಗಗಳ ಬಗ್ಗೆ ಅಪಾರ ಅನುಭವವನ್ನು ಹಂಚಿಕೊಂಡರು.
ಸಹಾಯಕ ಕೃಷಿ ನಿರ್ದೇಶಕ ಜೀವನ್ ಸಾಹೇಬ್, ಕೃಷಿಯಲ್ಲಿ ಬಳಕೆಯಿರುವ ಅನೇಕ ಆ್ಯಪ್‌ಗಳ ಬಗ್ಗೆ ತಿಳಿಸಿದರಲ್ಲದೇ, ಬೆಳೆ ಪರಿವರ್ತನೆ ಮೂಲಕ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು. ಇಲಾಖೆಯಲ್ಲಿ ಲಭ್ಯವಿರುವ ಅನೇಕ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶಿವಣ್ಣ ಮೂಲಿಮನಿ, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಎಂ.ಬಿ. ಪಾಟೀಲ, ಸಂಪನ್ಮೂಲ ವ್ಯಕ್ತಿ ಮಲ್ಲಯ್ಯ ಹಿರೇಮಠ ಮಾತನಾಡಿದರು.
ದೇಸಿ ಕೃಷಿ ಸಂಚಾಲಕ ವಾಮನಮೂರ್ತಿ ಪುರೋಹಿತ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸುಮಾರು 70 ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.