ರಾಜ್ಯದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿರುವ ಪಂಚರತ್ನ ಯೋಜನೆಯು ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಇದರಲ್ಲಿ ಯಾವುದೇ ಜಾತಿ ಇಲ್ಲ, ಧರ್ಮ ಇಲ್ಲ.
ಶಿರಾ : ರಾಜ್ಯದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿರುವ ಪಂಚರತ್ನ ಯೋಜನೆಯು ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಇದರಲ್ಲಿ ಯಾವುದೇ ಜಾತಿ ಇಲ್ಲ, ಧರ್ಮ ಇಲ್ಲ. ಈ ನಾಡಿನ ಪ್ರತಿ ಕುಟುಂಬಕ್ಕೆ ಈ ಕಾರ್ಯಕ್ರಮ ತಲುಪುತ್ತವೆ. ಪಂಚರತ್ನ ಕಾರ್ಯಕ್ರಮದಿಂದ ನಾಡಿನ ಪ್ರತಿಯೊಂದು ಕುಟುಂಬದ ಎಲ್ಲಾ ಸಮಾಜದ ಬಂಧುಗಳು ನೆಮ್ಮದಿಯ ಬದುಕುವ ಕಾರ್ಯಕ್ರಮ ಕೊಡುವುದು ಈ ಪಂಚರತ್ನ ಕಾರ್ಯಕ್ರಮದ ಉದ್ದೇಶ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಾವಗಡ ತಾಲೂಕಿನಿಂದ ಪಂಚರತ್ನ ಯಾತ್ರೆಯು ಶಿರಾ ತಾಲೂಕಿನ ಚಿರತಹಳ್ಳಿ ಗೇಟ್‌ಗೆ ಆಗಮಿಸಿದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಜಗತ್ತು ಪಂಚಭೂತಗಳಿಂದ ಸೃಷ್ಟಿಯಾಗಿದೆ. ಅದೇ ರೀತಿಯಲ್ಲಿ ನಮ್ಮ ದೇಹ ಇಷ್ಟುಬಲಯುತವಾಗಿರಲು ಪಂಚೇಂದ್ರಿಯಗಳು ಕಾರಣ. ಅದೇ ರೀತಿ ರಾಜ್ಯದ ಜನತೆಯ ಅಭ್ಯುದಯಕ್ಕೆ ಪಂಚರತ್ನ ಯೋಜನೆ ಜಾರಿ ತರಲಾಗುವುದು ಎಂದರು.
undefined
ಮದಲೂರು ಕೆರೆಗೆ ನೀರು ಹರಿಸಲು ಆದೇಶ ಮಾಡಿದ್ದು ನಾನು: 2006ರಲ್ಲಿ ಎನ್.ಸತ್ಯನಾರಾಯಣ ಅವರಿಗೆ ಮದಲೂರು ಕೆರೆಗೆ ನೀರು ಕೊಡುವುದಾಗಿ ಹೇಳಿದ್ದೆ. 2006ನೇ ಡಿ.26 ರಂದು ಮದಲೂರು ಕೆರೆಗೆ ನೀರು ತುಂಬಿಸುವುದಾಗಿ ಆದೇಶ ಮಾಡಿದ್ದೇ. ಬಿ ಜೆ ಪಿ ಯವರು ಈಗ ಬಂದು ಸುಳ್ಳುಹೇಳಿಕೊಂಡು ನೀರು ಹರಿಸಿದ್ದು ನಾವೇ ಎಂದು ಹೇಳುತ್ತಿದ್ದಾರೆ. ಜೆಡಿಎಸ್ ಸರ್ಕಾರ ಮಾಡಿದ್ದ ಕೆಲಸಗಳನ್ನು ಬಿಜೆಪಿಯವರು ನಾವೇ ಮಾಡಿದ್ದು ಎಂದು ಹೇಳುತ್ತಿದ್ದಾರೆ ಎಂದರು.
ಕುಮಾರಣ್ಣನಿಗೆ 500 ಕೆಜಿ ಸೇಬಿನ ಹಾರ: ಶಿರಾ ತಾಲೂಕಿನ ಚಿರತಹಳ್ಳಿ ಗೇಟ್‌ಗೆ ಪಂಚರತ್ನ ರಥಯಾತ್ರೆ ಆಗಮಿಸಿದ ನಂತರ ಜೆಡಿಸ್ ಕಾರ್ಯಕರ್ತರು, ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಕೋರಿದರು. ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಲಾಯಿತು.
ಹುಂಜನಾಳು ಗ್ರಾಮದಲ್ಲಿ ವಾಸ್ತವ್ಯ: ಪಂಚರತ್ನ ಯಾತ್ರೆಯು ಶಿರಾ ತಾಲೂಕಿನ ಚಿರತಹಳ್ಳಿ ಗೇಟ್‌ನಿಂದ ಪ್ರಾರಂಭಗೊಂಡು ಬರಗೂರು ಗ್ರಾಮದಲ್ಲಿ ಸಮಾವೇಶ ನಡೆಸಿ ನಂತರ ಶಿರಾ ನಗರಕ್ಕೆ ಆಗಮಿಸಿ ನಂತರ ತಾಲೂಕಿನ ಹುಂಜನಾಳು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದು, ಡಿ.6ರಂದು ಗುಬ್ಬಿ ತಾಲೂಕನ್ನು ಪ್ರವೇಶಿಸಲಿದೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್.ಆರ್.ಗೌಡ, ತಾಪಂ ಮಾಜಿ ಅಧ್ಯಕ್ಷ ಸತ್ಯಪ್ರಕಾಶ್, ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಮುಖಂಡರಾದ ಕಲ್ಕೆರೆ ರವಿ ಕುಮಾರ್, ಶ್ರೀರಾಮೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್, ನಗರಸಭೆ ಅಧ್ಯಕ್ಷ ಬಿ. ಅಂಜಿನಪ್ಪ, ಜಿ.ಪಂ. ಮಾಜಿ ಸದಸ್ಯ ರಾಮಕೃಷ್ಣ, ತಾ ಪಂ ಮಾಜಿ ಉಪಾಧ್ಯಕ್ಷ ರಂಗನಾಥ್ ಗೌಡ, ಬಿ.ಆರ್.ನಾಗಭೂಷಣ್, ರವಿಶಂಕರ್, ರಾಮು, ತಾಪಂ ಮಾಜಿ ಅಧ್ಯಕ್ಷ ನಿಡ ಗಟ್ಟೆ ಚಂದ್ರ ಶೇಖರ್, ಡಿಎನ್ ಪರಮೇಶ್ ಗೌಡ, ಭೂಪ್ಪಣ್ಣ, ಬೀರ ಲಿಂಗೇಗೌಡ, ಕೃಷ್ಣೇ ಗೌಡ, ಚಂಪಕ ಮಾಲ, ಮುದ್ದು ಕೃಷ್ಣೇಗೌಡ, ಮಂಜು ನಾಥ್ ಪಾಟೇಲ್, ರಹಮಾತ್ ಉಲ್ಲಾ, ದೊಡ್ಡ ಬಾಣಗೆರೆ ಈರಣ್ಣ, ಸುರೇಶ್, ತನುಜ್ ಗೌಡ, ಮನು, ಈರಣ್ಣ, ಬಿಸಿಎಂಡಿ. ಈರಣ್ಣ, ಸಣ್ಣೀರಪ್ಪ, ಸತೀಶ್ ಕುಮಾರ್, ರಂಗಸ್ವಾಮಿ ರಾಜಣ್ಣ.ಜಿ, ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿರುವ ಪಂಚರತ್ನ ಯೋಜನೆಯು ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ.
ನಾಡಿನ ಪ್ರತಿ ಕುಟುಂಬಕ್ಕೆ ಈ ಕಾರ್ಯಕ್ರಮ ತಲುಪುತ್ತವೆ. ಪಂಚರತ್ನ ಕಾರ್ಯಕ್ರಮದಿಂದ ನಾಡಿನ ಪ್ರತಿಯೊಂದು ಕುಟುಂಬದ ಎಲ್ಲಾ ಸಮಾಜದ ಬಂಧುಗಳು ನೆಮ್ಮದಿಯ ಬದುಕುವ ಕಾರ್ಯಕ್ರಮ ಕೊಡುವುದು ಈ ಪಂಚರತ್ನ ಕಾರ್ಯಕ್ರಮದ ಉದ್ದೇಶ