ಪಾಲಿಕೆ ವಿದ್ಯಾರ್ಥಿಗಳಿಗೆ ಸ್ವೆಟರ್‌ ಭಾಗ್ಯವಿಲ್ಲ: ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಮಕ್ಕಳಿಗೆ ಸ್ವೆಟರ್‌ ಕೊಡದ ಬಿಬಿಎಂಪಿ

By Kannadaprabha News  |  First Published Feb 4, 2023, 9:01 AM IST

ಶೈಕ್ಷಣಿಕ ವರ್ಷ ಮುಕ್ತಾಯವಾಗುವುದಕ್ಕೆ ಇನ್ನೆರಡು ತಿಂಗಳು ಬಾಕಿ ಇದ್ದರೂ ಬಿಬಿಎಂಪಿಯ ಶಾಲಾ- ಕಾಲೇಜಿನ ಬಹುತೇಕ ವಿದ್ಯಾರ್ಥಿಗಳಿಗೆ ಸ್ವೆಟರ್‌ ಭಾಗ್ಯ ಇಲ್ಲ. ಇನ್ನು ಸ್ವೆಟರ್‌ ಖರೀದಿಗೆ ಪೋಷಕರ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದಾಗಿ ಹೇಳಿದ ಮೊತ್ತವೂ ಸಿಕ್ಕಿಲ್ಲ. 


ಬೆಂಗಳೂರು (ಫೆ.04): ಶೈಕ್ಷಣಿಕ ವರ್ಷ ಮುಕ್ತಾಯವಾಗುವುದಕ್ಕೆ ಇನ್ನೆರಡು ತಿಂಗಳು ಬಾಕಿ ಇದ್ದರೂ ಬಿಬಿಎಂಪಿಯ ಶಾಲಾ- ಕಾಲೇಜಿನ ಬಹುತೇಕ ವಿದ್ಯಾರ್ಥಿಗಳಿಗೆ ಸ್ವೆಟರ್‌ ಭಾಗ್ಯ ಇಲ್ಲ. ಇನ್ನು ಸ್ವೆಟರ್‌ ಖರೀದಿಗೆ ಪೋಷಕರ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದಾಗಿ ಹೇಳಿದ ಮೊತ್ತವೂ ಸಿಕ್ಕಿಲ್ಲ. ಪಾಲಿಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವರ್ಷಕ್ಕೆ ಎರಡು ಜೊತೆ ಸ್ವೆಟರ್‌ ವಿತರಣೆ ಮಾಡಲಾಗುತ್ತದೆ. ಈ ವರ್ಷ ಸ್ವೆಟರ್‌ ಖರೀದಿಯಲ್ಲಾದ ವಿಳಂಬದಿಂದ ಈವರೆಗೆ ಮಕ್ಕಳಿಗೆ ಸ್ವೆಟರ್‌ ವಿತರಣೆ ಸಾಧ್ಯವಾಗಿಲ್ಲ. 

ಇನ್ನು, ಮಕ್ಕಳ ಫೋಷಕರಿಗೆ ಸ್ವೆಟರ್‌ ಹಣವನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದಾಗಿ ಬಿಬಿಎಂಪಿ ಆಯುಕ್ತರು ಆದೇಶಿಸಿದ್ದರು. ಆ ಹಣದಲ್ಲಿ ಸ್ವೆಟರ್‌ ಖರೀದಿಗೆ ಸೂಚಿಸಲಾಗಿತ್ತು. ಆ ಹಣವೂ ಎಲ್ಲರಿಗೂ ಈವರೆಗೆ ತಲುಪಿಲ್ಲ. ಬಿಬಿಎಂಪಿಯ ನರ್ಸರಿ ಶಾಲೆಯಿಂದ ಪಿಯು ಕಾಲೇಜಿನವರೆಗೆ ಇರುವ 23 ಸಾವಿರ ಮಕ್ಕಳ ಪಾಲಕರ ಬ್ಯಾಂಕ್‌ ಖಾತೆ ಹಣ ಪಾವತಿಸಲು ಮುಖ್ಯ ಲೆಕ್ಕಾಧಿಕಾರಿ ಕಚೇರಿಗೆ ಸೂಚನೆಯನ್ನೂ ನೀಡಲಾಗಿತ್ತು.

Tap to resize

Latest Videos

‘ಬಿ ಖಾತಾ ಆಸ್ತಿ ‘ಎ’ ಖಾತಾಗೆ ಸಿಎಂ ಬೊಮ್ಮಾಯಿ ಮರುಜೀವ: ಯೋಜನೆ ಅನುಷ್ಠಾನಕ್ಕೆ ಸಿದ್ಧತೆ

ಮೊದಲ ಹಂತದಲ್ಲಿ ಬಿಬಿಎಂಪಿ 13 ಸಾವಿರ ಮಕ್ಕಳ ಪಾಲಕರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದೆ. ಈ ಪೈಕಿ 1,140 ಮಕ್ಕಳ ಪಾಲಕರ ಬ್ಯಾಂಕ್‌ ಖಾತೆಗೆ ಎರಡು ಬಾರಿ ಹಣ ಪಾವತಿಸಲಾಗಿದೆ. ಹೀಗಾಗಿ ಅಷ್ಟುಮಕ್ಕಳ ಪಾಲಕರ ಖಾತೆಗೆ ಹಣ ಪಾವತಿಯನ್ನು ಹಿಂಪಡೆದು ತಡೆಹಿಡಿಯಲಾಗಿದೆ. ಆ ಬಗ್ಗೆ ಪರಿಶೀಲಿಸಿದಾಗ 1,140 ಮಕ್ಕಳ ಪಾಲಕರ ಇಬ್ಬರು ಅಥವಾ ಮೂವರು ಮಕ್ಕಳು ಬಿಬಿಎಂಪಿ ಶಾಲೆಯಲ್ಲಿಯೇ ವ್ಯಾಸಂಗ ಮಾಡುತ್ತಿರುವುದರಿಂದ ಒಂದೇ ಖಾತೆಗೆ ಎರಡೆರಡು ಬಾರಿ ಹಣ ಪಾವತಿಸಿರುವುದು ಪತ್ತೆಯಾಗಿದೆ. ಈ ಗೊಂದಲದಿಂದಾಗಿ ಅಷ್ಟು ಮಕ್ಕಳ ಪಾಲಕರಿಗೆ ಹಣ ಪಾವತಿ ವಿಳಂಬವಾಗಿದೆ.

ಇನ್ನು ಉಳಿದ 5 ಸಾವಿರ ಮಕ್ಕಳ ಪಾಲಕರ ಬ್ಯಾಂಕ್‌ ಖಾತೆ ವಿವರ ಸಮರ್ಪಕವಾಗಿರದ ಕಾರಣ ಹಣ ವರ್ಗಾವಣೆ ಆಗಿಲ್ಲ. ಅಲ್ಲದೇ ಇನ್ನೂ ಐದು ಸಾವಿರ ವಿದ್ಯಾರ್ಥಿಗಳ ಫೋಷಕರಿಗೆ ಸ್ವೆಟರ್‌ ಹಣ ಜಮಾ ಮಾಡುವುದಕ್ಕೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕಿದೆ.

ಬಿಬಿಎಂಪಿ ಕಚೇರಿಯಲ್ಲಿ ಮತ್ತೊಂದು ಪಾರ್ಕಿಂಗ್‌: ಮುಖ್ಯ ಆಯುಕ್ತರ ಸೂಚನೆ

ಬಿಬಿಎಂಪಿ ಶಾಲಾ ಮಕ್ಕಳಿಗೆ ಸ್ವೆಟರ್‌ ಖರೀದಿಗಾಗಿ ಪಾಲಕರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ. 23 ಸಾವಿರ ಮಕ್ಕಳ ಪೈಕಿ ಈಗಾಗಲೆ 13 ಸಾವಿರ ಮಕ್ಕಳ ಪಾಲಕರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆಗೊಂಡಿದೆ. ಉಳಿದವರಿಗೆ ಶೀಘ್ರವಾಗಿ ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸುತ್ತೇವೆ.
-ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತ, ಬಿಬಿಎಂಪಿ.

click me!