Bengaluru: ಅರ್ಧ ವರ್ಷ ಕಳೆದರೂ ಬಿಬಿಎಂಪಿಯ ಮಕ್ಕಳಿಗೆ ಶೂ, ಸಾಕ್ಸ್‌ ಸಿಕ್ಕಿಲ್ಲ!

By Kannadaprabha News  |  First Published Oct 20, 2024, 9:37 AM IST

ಶೈಕ್ಷಣಿಕ ಸಾಲಿನ ಅರ್ಧ ವರ್ಷ ಮುಕ್ತಾಯಗೊಂಡರೂ ಬಿಬಿಎಂಪಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶ್ಯೂ ಮತ್ತು ಸಾಕ್ಸ್‌ ವಿತರಣೆ ಆಗಿಲ್ಲ. ಬಿಬಿಎಂಪಿಯ ಶಾಲಾ-ಕಾಲೇಜುಗಳಲ್ಲಿ ಸುಮಾರು 24 ಸಾವಿರ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ.


ಬೆಂಗಳೂರು (ಅ.20): ಶೈಕ್ಷಣಿಕ ಸಾಲಿನ ಅರ್ಧ ವರ್ಷ ಮುಕ್ತಾಯಗೊಂಡರೂ ಬಿಬಿಎಂಪಿಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶ್ಯೂ ಮತ್ತು ಸಾಕ್ಸ್‌ ವಿತರಣೆ ಆಗಿಲ್ಲ. ಬಿಬಿಎಂಪಿಯ ಶಾಲಾ-ಕಾಲೇಜುಗಳಲ್ಲಿ ಸುಮಾರು 24 ಸಾವಿರ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸಮವಸ್ತ್ರ, ಪುಸಕ್ತ, ನೋಟ್‌ ಬುಕ್‌, ಶ್ಯೂ, ಸಾಕ್ಸ್‌ ವಿತರಣೆ ಮಾಡಲಾಗುತ್ತದೆ. ಶ್ಯೂ-ಸಾಕ್ಸ್‌ ಹೊರತು ಪಡಿಸಿ ಉಳಿದೆಲ್ಲವೂ ವಿತರಣೆ ಆಗಿದೆ. ಆದರೆ, ಶ್ಯೂ ಸಾಕ್ಸ್ ವಿತರಣೆ ಮಾತ್ರ ಆಗಿಲ್ಲ.

ಈ ಹಿಂದಿನ ವರ್ಷಗಳಲ್ಲಿ ಸರ್ಕಾರದ ಅಂಗ ಸಂಸ್ಥೆಗಳಲ್ಲಿ ಒಂದಾದ ಲಿಡ್ಕರ್‌ಗೆ (ಡಾ। ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ) ಶ್ಯೂ- ಸಾಕ್ಸ್ ವಿತರಣೆಯ ಗುತ್ತಿಗೆ ನೀಡಲಾಗುತ್ತಿತ್ತು. ಶ್ಯೂ- ಸಾಕ್ಸ್‌ ವಿತರಣೆಯಲ್ಲಿ ವಿಳಂಬದ ಹಿನ್ನೆಲೆಯಲ್ಲಿ ಖಾಸಗಿ ಗುತ್ತಿಗೆದಾರರಿಗೆ ಈ ಬಾರಿ ವಿತರಣೆಯ ಗುತ್ತಿಗೆ ನೀಡಲಾಗಿತ್ತು.

Latest Videos

undefined

ಗುತ್ತಿಗೆ ಪಡೆದ ಸಂಸ್ಥೆಗೆ ಕಳೆದ ಆಗಸ್ಟ್‌ನಲ್ಲಿಯೇ ಬಿಬಿಎಂಪಿಯಿಂದ ಕಾರ್ಯಾದೇಶ ನೀಡಿ, 45 ದಿನದಲ್ಲಿ ಬಿಬಿಎಂಪಿಯ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕೆಂದು ಸೂಚಿಸಲಾಗಿತ್ತು. ನೀಡಲಾದ ಕಾಲಾವಧಿ ಮುಕ್ತಾಯವಾಗಿದೆ. ಆದರೆ, ಗುತ್ತಿಗೆ ಪಡೆದ ಸಂಸ್ಥೆ ವಿತರಣೆ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಶಿಕ್ಷಣ ವಿಭಾಗದಿಂದ ನೋಟಿಸ್‌ ಜಾರಿಗೊಳಿಸಲಾಗಿದೆ. ಜತೆಗೆ, ವಿಳಂಬ ಧೋರಣೆ ಹಿನ್ನೆಲೆಯಲ್ಲಿ ಗುತ್ತಿಗೆ ಮೊತ್ತದ ಶೇ.2 ರಷ್ಟು ದಂಡ ವಿಧಿಸುವುದಾಗಿ ಸೂಚಿಸಲಾಗಿದೆ.

ಮುಡಾ ರೇಡ್‌: ವೈಟ್ನರ್‌ ಹಾಕಿ ತಿದ್ದಿದ ಸಿಎಂ ಪತ್ನಿ ಪತ್ರದ ಮೂಲ ಪ್ರತಿ ಇ.ಡಿ. ವಶಕ್ಕೆ!

ಈ ಕುರಿತು ಶುಕ್ರವಾರ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಕಳೆದ ವರ್ಷವೂ ಶ್ಯೂ ಮತ್ತು ಸಾಕ್ಸ್‌ ವಿತರಣೆ ವಿಳಂಬವಾಗಿತ್ತು. ಹಾಗಾಗಿ, ಖಾಸಗಿ ಗುತ್ತಿಗೆ ಸಂಸ್ಥೆಗೆ ನೀಡಲಾಗಿದೆ. ಗುತ್ತಿಗೆದಾರರಿಗೆ ಸೂಚನೆ ನೀಡಿ ತ್ವರಿತವಾಗಿ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

click me!