ಹಾಸನ: ಮಲಗಿದ ವೇಳೆ ಕಚ್ಚಿದ ನಾಗರ ಹಾವು, ಆಟೋ ಚಾಲಕನ ಸಾವು

By Kannadaprabha News  |  First Published Oct 20, 2024, 8:47 AM IST

ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು, ಮಲಗಲು ಮೊದಲ ಮಹಡಿಗೆ ಹೋಗಿದ್ದಾರೆ. ನಾಗರ ಹಾವು ಕಾಲಿಗೆ ಕಚ್ಚಿದರೂ ಅರಿವಿಲ್ಲದೆ ಹಾಗೆಯೇ ಮಲಗಿದ್ದು, ಬೆಳಿಗ್ಗೆ 8 ಗಂಟೆ ಆದರೂ ರೂಂನ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡ ಪತ್ನಿ ಬಾಗಿಲು ತೆಗೆದಾಗ ಸಾವನ್ನಪ್ಪಿರುವ ಬಗ್ಗೆ ತಿಳಿದಿದೆ.


ಹಾಸನ(ಅ.20):  ಮನೆಯ ಮೊದಲ ಮಹಡಿಯಲ್ಲಿ ಮಲಗಿದ್ದ ವೇಳೆ ನಾಗರ ಹಾವೊಂದು ಕಚ್ಚಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಬೂವನಹಳ್ಳಿಯಲ್ಲಿ ಮನೆಯೊಂದರಲ್ಲಿ ನಡೆದಿದೆ.

ಗುರು (ಪಪ್ಪಣಿ) ಎಂಬ ೪೦ ವರ್ಷದ ವ್ಯಕ್ತಿ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ ದರ್ದೈವಿ. ಮೂಲತಃ ಚನ್ನರಾಯಪಟ್ಟಣ ತಾಲೂಕಿನ ತಾಲೂಕಿನ ನಲ್ಲೂರು ಗ್ರಾಮದವರಾಗಿದ್ದು, ಕಳೆದ ೧೦ ವರ್ಷಗಳಿಂದ ಹಾಸನದ ಬೂವನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು, ಮಲಗಲು ಮೊದಲ ಮಹಡಿಗೆ ಹೋಗಿದ್ದಾರೆ. ನಾಗರ ಹಾವು ಕಾಲಿಗೆ ಕಚ್ಚಿದರೂ ಅರಿವಿಲ್ಲದೆ ಹಾಗೆಯೇ ಮಲಗಿದ್ದು, ಬೆಳಿಗ್ಗೆ ೮ ಗಂಟೆ ಆದರೂ ರೂಂನ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡ ಪತ್ನಿ ಬಾಗಿಲು ತೆಗೆದಾಗ ಸಾವನ್ನಪ್ಪಿರುವ ಬಗ್ಗೆ ತಿಳಿದಿದೆ.

Tap to resize

Latest Videos

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ದಿನಗಣನೆ; ಹಾಸನ ಜಿಲ್ಲಾಡಳಿತದಿಂದ ಭರದ ಸಿದ್ಧತೆ

ಕಾಲಿಗೆ ಕಚ್ಚಿರುವ ಹಾವು ಅದೇ ಕೊಠಡಿಯಲ್ಲಿ ಅವಿತುಕೊಂಡಿತ್ತು. ನಂತರ ಹಾವು ಹಿಡಿಯುವವರನ್ನು ಕರೆಯಿಸಿ ಹಿಡಿದು ಆ ಹಾವನ್ನು ರಕ್ಷಣೆ ಮಾಡಲಾಗಿದೆ. ಇವರಿಗೆ ಇಬ್ಬರು ಮಕ್ಕಳಿದ್ದು, ಕಳೆದ ೧೦ ವರ್ಷದಿಂದ ವಾಸವಿದ್ದು ಆಟೋ ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದ ಇವರು ಶುಕ್ರವಾರ ರಾತ್ರಿ ಮದ್ಯಪಾನ ಮಾಡಿ ಬಂದಿದ್ದು, ಅವರನ್ನು ಪತ್ನಿ ಪಕ್ಕದ ರೂಮಿನಲ್ಲಿ ಮಲಗುವಂತೆ ಹೇಳಿದ್ದರು. ಆದರೇ ಇವರು ಈ ವೇಳೆ ಮೊದಲ ಮಹಡಿಯ ಮಂಚದ ಮೇಲೆ ಮಲಗಿದ್ದರು ಆ ವೇಳೆ ನಾಗರಹಾವು ಕಚ್ಚಿದೆ.

click me!