ಎಸ್ಕೇಪ್‌ ಆಗಿದ್ದ ಪಿಎಸ್‌ಐ ಹಗರಣ ಕಿಂಗ್‌ಪಿನ್‌ ಪಾಟೀಲ್‌ ವಿಡಿಯೋ ಮೂಲಕ ಪ್ರತ್ಯಕ್ಷ

By Gowthami KFirst Published Jan 21, 2023, 12:58 PM IST
Highlights

ಸಿಐಡಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದ ಪೊಲೀಸ್‌ ಇಲಾಖೆಯ 545 ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಕಿಂಗ್‌ಪಿನ್  ಅಫಜಲ್ಪುರದ ಆರ್‌.ಡಿ.ಪಾಟೀಲ್‌  ಮಧ್ಯರಾತ್ರಿ 1:30 ಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ನಾನು ಎಲ್ಲೂ ಪರಾರಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾನೆ.

ಕಲಬುರಗಿ (ಜ.21): ಸಿಐಡಿ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದ ಪೊಲೀಸ್‌ ಇಲಾಖೆಯ 545 ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಕಿಂಗ್‌ಪಿನ್  ಅಫಜಲ್ಪುರದ ಆರ್‌.ಡಿ.ಪಾಟೀಲ್‌  ಮಧ್ಯರಾತ್ರಿ 1:30 ಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ನಾನು ಎಲ್ಲೂ ಪರಾರಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ನಾನು ಪರಾರಿ ಆಗಿಲ್ಲ, ಶೀಘ್ರ ನಿಮ್ಮ ಮುಂದೆ ಬರುವೆ. ಇ.ಡಿ ಹಾಗೂ ಸಿಐಡಿಯವರು 6 ಗಂಟೆಯಿಂದ 11 ಗಂಟೆಯವರೆಗೆ ವಿಚಾರಣೆ ಮಾಡಿದ್ದಾರೆ ಸಹಕಾರ ನೀಡಿದ್ದೇನೆ. ನಾನು ಮನೆಯಿಂದ ಹೋರಗಡೆ ಹೋದಾಗ ಏಕಮುಖಿಯಾಗಿ ಮಾಹಿತಿ ಪಡೆದ ಮಾಧ್ಯಮದ ಸ್ನೇಹಿತರು ನಾನು ಪರಾರಿಯಾಗಿದ್ದೇನೆ ಎಂದು ಸುದ್ದಿ ಮಾಡಿರುವುದು. ನಾನೆಲ್ಲೂ ಪಾರಾರಿಯಾಗಿಲ್ಲ. ಮಾಧ್ಯಮದವರು one side ವರದಿ ಮಾಡುತ್ತಿದ್ದಾರೆ, ಅವರಿಗೆ cid ಅಧಿಕಾರಿಗಳು ಹಾಗೆ ತಿಳಿದ್ದಾರೆ ಎಂದುಎಂದ ಆರ್ ಡಿ ಪಾಟೀಲ್ ಆರೋಪ ಮಾಡಿದ್ದಾನೆ.

ಚುನಾವಣೆಗೆ ನಿಲ್ಲುವ ಘೋಷಣೆ ಮಾಡಿದ ಪಾಟೀಲ್:
ಆಫ್ಜಲ್ಪುರ್ ಕ್ಷೇತ್ರದ ಜನ ಬಯಸಿದರೆ ಅಸೆಂಬ್ಲಿಯ ಚುನಾವಣೆಗೆ ನಿಲ್ಲುವೆ ಎಂದು ಘೋಷಿಸಿದ ಆರ್ ಡಿ ಪಾಟೀಲ್, ನಮಗೆ ಎಷ್ಟೆ ಕಷ್ಟಗಳು ಬಂದರು ಕೂಡಾ ಬೆದರದೆ ನಮ್ಮ ಜನ ಸೇವೆ ಮುಂದುವರೆಯುತ್ತೆ ಈ ಮೊದಲು ಎಲ್ಲಿಯು ಕೂಡಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆಂದು ಹೇಳಿಲ್ಲ ಸದ್ಯ ಕ್ಷೇತ್ರದ ಜನ ಬಯಸಿದರೆ ಬರುವ 2023ರ ವಿಧಾನ ಸಭೆಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ವಿಡಿಯೋದಲ್ಲಿ  ಹೇಳಿದ್ದಾನೆ.

ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಮಾತು ಕೇಳಿ ಸಹೋದರರು ಆದ ನಮ್ಮನ್ನ  ಈ ಪಿಎಸ್ಐ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದ ಆರ್ ಡಿ ಪಾಟೀಲ್. ಮಾಧ್ಯಮ ಮಿತ್ರರರು ಸುಖಾ ಸುಮ್ಮನೆ ನನ್ನ ಬಗ್ಗೆ ದಿನಕ್ಕೊಂದು ಏಕಮುಖಿಯವಾಗಿ ಹೇಳಿಕೆ ಪಡೆದು ಸುಳ್ಳು ಸುದ್ದಿಗಳು ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮದಲ್ಲಿ ಪ್ರಕಟಣೆ ಮಾಡುತ್ತಿದ್ದು ಇದಕ್ಕೆ ಕಿವಿಗೂಡಬೇಡಿ ಎಂದಿದ್ದಾನೆ.

ನನ್ನ ಹಾಗೂ ನನ್ನ ಸಹೋದರ ಮಹಾಂತೇಶ ಪಾಟೀಲ್ ಅವರನ್ನು ರಾಜಕೀಯವಾಗಿ ಬೆಳೆಯಬಾರದು ಎನ್ನುವ ಉದ್ದೇಶದಿಂದ ಕೆಲ ರಾಜಕೀಯ ಕುತಂತ್ರಿಗಳು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದ ಆರ್ ಡಿ ಪಾಟೀಲ್ ಆರೋಪಿಸಿದ್ದಾನೆ.

ಘಟನೆ ಹಿನ್ನೆಲೆ: ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಅಫಜಲ್ಪುರದ ಆರ್‌.ಡಿ.ಪಾಟೀಲ್‌ ಜಾರಿ ನಿರ್ದೇಶನಾಲಯದ (ಇ.ಡಿ.) ಕೈಗೆ ಸಿಗದೆ ಪರಾರಿಯಾಗಿದ್ದಾನೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮತ್ತು ಸಿಐಡಿ ಅಧಿಕಾರಿಗಳ ನೋಟಿಸ್‌ಗೂ ಕ್ಯಾರೆ ಅನ್ನದ ಪಾಟೀಲ್‌ನನ್ನು ಗುರುವಾರ ಸಿಐಡಿ ಅಧಿಕಾರಿಗಳು ಬೇರೊಂದು ಪ್ರಕರಣದಲ್ಲಿ ಕಳೆದ ರಾತ್ರಿ ಬಂಧಿಸಿ ವಿಚಾರಣೆ ನಡೆಸಲು ದಾಳಿ ನಡೆಸಿದ ವೇಳೆ ಆರ್‌.ಡಿ.ಪಾಟೀಲ ಸಿಐಡಿ ಅಧಿಕಾರಿಗಳನ್ನು ತಳ್ಳಿ ಓಡಿ ಹೋಗಿದ್ದಾನೆ ಎಂದು  ಪ್ರಕರಣ ದಾಖಲಾಗಿತ್ತು.

PSI Recruitment Scam: ಅಕ್ರಮ ಆರೋಪಿ ಎಸ್‌ಐ ಹರೀಶ್‌ಗೆ ಜಾಮೀನು ನಿರಾಕರಣೆ

ತುಮಕೂರು ಕ್ಯಾತ್ಸಂದ್ರ ಠಾಣೆಯಲ್ಲಿ ದಾಖಲಾಗಿದ್ದ ಪಿಎಸ್ಸೈ ಅಕ್ರಮ ಪ್ರಕರಣದ ದೂರಿನ ಹಿನ್ನೆಲೆಯಲ್ಲಿ ಆರ್‌ಡಿ ಪಾಟೀಲ್‌ ವಿರುದ್ಧ ಅಲ್ಲಿನ ನ್ಯಾಯಾಲಯ ಬಂಧನ ವಾರಂಟ್‌ ಹೊರಡಿಸಿತ್ತು. ಇದರನ್ವಯ ಅಲ್ಲಿನ ಪೊಲೀಸ್‌ ತಂಡ ಪಾಟೀಲ್‌ ಬಂಧನಕ್ಕೆ ಕಲಬುರಗಿಗೆ ಆಗಮಿಸಿ ಆತನ ಮನೆಗೆ ದಾಳಿನಡೆಸಿತ್ತು.

PSI Recruitment Scam: ಪೊಲೀಸರ ತಳ್ಳಿ ಪಿಎಸ್‌ಐ ಹಗರಣ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಎಸ್ಕೇಪ್‌

ಇದೇ ವೇಳೆ ಇಲ್ಲಿನ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಆರ್‌ಡಿ ಪಾಟೀಲ್‌ ಮನೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸಿ ಹೊರ ಹೋದ ಬೆನ್ನಲ್ಲೆ, ಸಿಐಡಿ ಪೊಲೀಸರು ಆತನ ಬಂಧನಕ್ಕೆಂದು ತೆರಳಿದ್ದರು. ಆರ್‌ಡಿ ಪಾಟೀಲ್‌ ತನ್ನ ಬಂಧನ ವಾರಂಟ್‌ ಜೊತೆಗೆ ಬಂದಿರುವ ತುಮಕೂರು ಸಿಪಿಐ ಆನಂದ ಹಾಗೂ ತಂಡ ಮನೆಗೆ ಬರುತ್ತಲೇ ಅವರನ್ನು ತಳ್ಳಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದು, ಈತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

click me!