ಸಾವಿನಲ್ಲೂ ಸಾರ್ಥಕತೆ ಮೆರೆದ ಬಳ್ಳಾರಿಯ ಶತಾಯುಷಿ ಈರಮ್ಮ ದಾಸೋಹ ಮಠ

By Web Desk  |  First Published Feb 23, 2019, 3:40 PM IST

ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಶತಾಯುಷಿ ಶ್ರೀಮತಿ ಈರಮ್ಮ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.


ಬಳ್ಳಾರಿ, (ಫೆ.23): ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಶತಾಯುಷಿ ಶ್ರೀಮತಿ ಈರಮ್ಮ(105)  ದಾಸೋಹಮಠ ಇಂದು (ಶನಿವಾರ) ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಮರಣಾನಂತರ ತಮ್ಮ ದೇಹ ಹಾಗೂ ಕಣ್ಣುಗಳನ್ನು ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ವಿದ್ಯಾರ್ಥಿಗಳ ಅದ್ಯಯನ ಹಾಗೂ ರಿಸರ್ಚ್‌ಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ದಾನಮಾಡಿದ್ದಾರೆ.

Latest Videos

undefined

ಹಿರಿಯ ಸಾಹಿತಿ ಕೋ. ಚನ್ನಬಸಪ್ಪ ನಿಧನ

ಶ್ರೀಮತಿ ಈರಮ್ಮನವರು 28/3/1914 ರಂದು ರಾಯಚೂರು ಜಿಲ್ಲೆಯ ಮಟಮಾರಿಯಲ್ಲಿ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ್ದು, ಬಳ್ಳಾರಿ ಜಿಲ್ಲೆ ಹೊಸಪೇಟೆಯ ಶ್ರೀ ಚೋಳಯ್ಯ ಸ್ವಾಮಿಯವರನ್ನು ವಿವಾಹವಾಗಿದ್ದರು.

1975 ರಲ್ಲಿ ಪತಿ ಹಾಗೂ 2005ರಲ್ಲಿ  ಏಕಮಾತ್ರ  ಪುತ್ರ ಬಸವಲಿಂಗಯ್ಯನವರು ಮೃತಪಟ್ಟಿರುವದರಿಂದ ಪ್ರಸ್ತುತ ಬಳ್ಳಾರಿಯ ಸಂಜಯಗಾಂಧಿನಗರದಲ್ಲಿ ಸೊಸೆ ಹಾಗೂ ಮೊಮ್ಮಗನ ಕುಟುಂಬದೊಂದಿಗಿದ್ದರು.

ಶ್ರೀಮತಿ ಈರಮ್ಮನವರಿಗೆ ಐದು ಜನ ಮೊಮ್ಮಕ್ಕಳು ಹಾಗೂ ಒಂಬತ್ತು ಜನ ಮರಿ ಮೊಮ್ಮಕ್ಕಳಿದ್ದಾರೆ. ಹಿರಿಯ ಮೊಮ್ಮಗಳು ಡಾ. ಅಪೂರ್ವ ಹಿರೇಮಠ ಪ್ರಸ್ತುತ ಬಳ್ಳಾರಿಯಲ್ಲಿ ವೈದ್ಯಕೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ.

ಬಳ್ಳಾರಿಯಲ್ಲಿ ಇತ್ತಿಚೆಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಶ್ರೀಮತಿ ಈರಮ್ಮನವರಿಗೆ ಸನ್ಮಾನ ಮಾಡಲಾಗಿತ್ತು.

click me!