ಚಿಕ್ಕಮಗಳೂರು: ಪಶ್ಚಿಮಘಟ್ಟದ ಸಾಲಿನಲ್ಲಿ ಜೀಪ್‌ ರೇಸ್‌, ಪರಿಸರಪ್ರೇಮಿಗಳ ತೀವ್ರ ಆಕ್ಷೇಪ

By Girish Goudar  |  First Published Aug 31, 2024, 9:56 PM IST

ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗದಿಂದ ಆಗಮಿಸಿದ್ದ ನೂರಾರು ಜೀಪುಗಳು, ಜಿಪ್ಪಿಗಳು ಮೂಡಿಗೆರೆ ತಾಲೂಕಿನ ಹೇರಿಕೆ ಸಮೀಪದ ಲಕ್ಷ್ಮೀ ಸರಸ್ವತಿ ಎಸ್ಟೇಟ್ ಭಾಗದಲ್ಲಿ ಆಫ್ ರೋಡ್ ಈವೆಂಟ್ ನಡೆಸಿದ್ದು ಕೆಲವು ಕಡೆ ಮೀಸಲು ಅರಣ್ಯ ಭಾಗದಲ್ಲಿಯೂ ಜೀಪುಗಳು ಓಡಾಟ ಕಂಡು ಬಂದಿದೆ. ಇದರ ಬಗ್ಗೆ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.31):  ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಲ್ಪಟ್ಟಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪಶ್ಚಿಮಘಟ್ಟದ ಸಾಲಿನಲ್ಲಿ ನೂರಾರು ಜೀಪುಗಳೊಂದಿಗೆ ಇಂದು(ಶನಿವಾರ) ಆಫ್ ರೋಡ್ ಇವೆಂಟ್ ನಡೆದಿರುವುದು ಪರಿಸರ ಪರಿಸರಾಸ್ತಕರ ಕೆಂಗಣ್ಣಿಗೆ ಗುರಿಯಾಗಿದೆ.

Tap to resize

Latest Videos

undefined

ಮೀಸಲು ಅರಣ್ಯ ಭಾಗದಲ್ಲಿಯೂ ಜೀಪುಗಳು ಓಡಾಟ ? 

ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗದಿಂದ ಆಗಮಿಸಿದ್ದ ನೂರಾರು ಜೀಪುಗಳು, ಜಿಪ್ಪಿಗಳು ಮೂಡಿಗೆರೆ ತಾಲೂಕಿನ ಹೇರಿಕೆ ಸಮೀಪದ ಲಕ್ಷ್ಮೀ ಸರಸ್ವತಿ ಎಸ್ಟೇಟ್ ಭಾಗದಲ್ಲಿ ಆಫ್ ರೋಡ್ ಈವೆಂಟ್ ನಡೆಸಿದ್ದು ಕೆಲವು ಕಡೆ ಮೀಸಲು ಅರಣ್ಯ ಭಾಗದಲ್ಲಿಯೂ ಜೀಪುಗಳು ಓಡಾಟ ಕಂಡು ಬಂದಿದೆ. ಇದರ ಬಗ್ಗೆ ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು ಕಾಡಾನೆಗಳ ಆವಾಸಸ್ಥಾನವಾಗಿದೆ ಜೊತೆಗೆ ವಿವಿಧ ಕಾಡು ಪ್ರಾಣಿಗಳ ಆವಾಸಸ್ಥಾನವಾಗಿದೆ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಏಕಕಾಲದಲ್ಲಿ ನೂರಾರು ವಾಹನಗಳು ಓಡಾಡುವುದರಿಂದ ಇಲ್ಲಿನ ಪರಿಸರದಲ್ಲಿ ಕಾಡಾನೆಗಳು ಭಯಭೀತರಾಗಿ ಗ್ರಾಮದ ಕಡೆ ಬರುವ ಸಾಧ್ಯತೆ ಹೆಚ್ಚಿದ್ದು ಜೊತೆಗೆ ಬೆಟ್ಟದ ಸವಕಳಿಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕಿಡಿಕಾರಿದ್ದಾರೆ. 

ಚಿಕ್ಕಮಗಳೂರು: ಜೋಳಿಗೆಯಲ್ಲಿ ಶವ ಹೊತ್ತು ತಂದ ಗ್ರಾಮಸ್ಥರು, ರಸ್ತೆ ಇಲ್ಲದೆ ಪರದಾಟ..!

ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ : 

ಮೋಜು-ಮಸ್ತಿನ ಇವೆಂಟ್ ಗಳನ್ನು ನಡೆಸಲು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಅನುಮತಿ ನೀಡಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿದ ಚಿಕ್ಕಮಗಳೂರು ಡಿ ಎಫ್ ಓ ರಮೇಶ್ ಬಾಬು ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಒಂದು ವೇಳೆ ಅರಣ್ಯ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ನಡೆಸಿರುವುದು ಕಂಡು ಬಂದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು. ಕೆಲವೇ ಜನರ  ಮೋಜುಮಸ್ತಿಗೆ ಕಾಡಾನೆಗಳ ಆವಾಸ ಸ್ಥಾನದಲ್ಲಿ ಇಂತಹ ರ್ಯಾಲಿಗಳನ್ನು ನಡೆಸುತ್ತಿರುವವರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಜನರ ಒತ್ತಾಯವಾಗಿದ್ದು  ಸೂಕ್ಷ್ಮ  ಪರಿಸರದಲ್ಲಿ ಏಕಕಾಲಕ್ಕೆ ನೂರಾರು ವಾಹನಗಳ ಜಾತ್ರೆ ನಡೆಸುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. 

ಇಂತಹ ಇವೆಂಟ್ ಗಳನ್ನು ನಡೆಸಲು ಎಸ್ಟೇಟ್ ಒಳಗೆ ಅವಕಾಶ ಕೊಟ್ಟಿರುವ ಮಾಲೀಕರ ಮೇಲೂ ಕ್ರಮ ಜರುಗಿಸಬೇಕು ಎಂದು ಪರಿಸರಪ್ರೇಮಿಗಳು ಆಗ್ರಹಿಸಿದ್ದಾರೆ.

click me!