ಕಡಿದು ಹಾಕಿದ್ದ ಆಲದ ಮರಕ್ಕೆ ಮರು ಜೀವ ನೀಡಿದ ಪರಿಸರ ಪ್ರೇಮಿ

By Suvarna News  |  First Published May 27, 2022, 1:48 PM IST

* ಕಡಿದು ಹಾಕಿದ ಆಲದ ಮರಕ್ಕೆ ಮರು ಜೀವ ನೀಡಿದ ಪರಿಸರ ಪ್ರೇಮಿ!
* 30 ವರ್ಷದ ಆಲದ ಮರ ಬೇರು ಸಮೇತ ನೆಟ್ಟ ಪರಿಸರ ಪ್ರೇಮಿ
* 6 ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ಆಲದ ಮರಕ್ಕೆ ಮರುಜೀವ!


ವರದಿ : ಜಗನ್ನಾಥ ‌ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು, (ಮೇ.27):
ಜಿಲ್ಲೆಯ ಸಿಂಧನೂರು ತಾಲೂಕಿನ ಏಳುರಾಗಿ ಕ್ಯಾಂಪ್ ‌ನಲ್ಲಿ ರೈತ ತನ್ನ ಜಮೀನಿನಲ್ಲಿ ಇದ್ದ 30-40 ವರ್ಷದ ಹಳೆಯ ಆಲದ ಮರವನ್ನು ಕಡಿದಿದ್ದು, ಅದಕ್ಕೆ ಇದೀಗ ಪರಿಸರ ಪ್ರೇಮಿ ಮರು ಜೀವ ನೀಡಿದ್ದಾರೆ.

 ಜಮೀನು ಸಮತಟ್ಟು ಮಾಡಲು‌ ಆಲದ ಮರವನ್ನು ಬುಡಸಮೇತ ನಾಶ ಮಾಡಲು ಮುಂದಾಗಿದ್ರು.  30 ವರ್ಷದ ಆಲದ ಮರವನ್ನು ‌ನೋಡಿದ ವನಸಿರಿ ತಂಡ‌‌ ಆಲದ ಮರವನ್ನು ಪರಿಶೀಲನೆ ಮಾಡಿ ಮತ್ತೆ ಆಲದ ಮರಕ್ಕೆ ಮರು ಜೀವ ನೀಡುವ ಕುರಿತು ಮರಗಳ ಬಗ್ಗೆ ಸಂಶೋಧನೆ ‌ನಡೆಸಿದ ಸಂಶೋಧಕರಿಗೆ,ವಿಜ್ಞಾನಿಗಳ ಬಳಿ ಮಾಹಿತಿ ಪಡೆದರು.

Latest Videos

undefined

ಆ ಬಳಿಕ ಆಲದ ಮರದ ಬೇರುಗಳಲ್ಲಿರುವ ನೀರಿನ ಅಂಶಗಳನ್ನು ಪರಿಗಣಿಸಿ ಆಲದ ಮರವನ್ನು ಬೇರೆ ಸ್ಥಳಕ್ಕೆ ಬೇರು ಸಮೇತ ಸ್ಥಳಾಂತರಿಸಿದರೆ ಈ ಮರಕ್ಕೆ ಮರು ಜೀವ ಕಲ್ಪಿಸಬಹುದು ಎಂದು ಭಾವಿಸಿ ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ನೇತೃತ್ವದಲ್ಲಿ ಆಲದ ಮರದ ಸ್ಥಳಾಂತರ ‌ಕಾರ್ಯ ನಡೆಯಿತು. ಸಿಂಧನೂರಿನ ನೀರಾವರಿ ಇಲಾಖೆ ಅಧಿಕಾರಿಗಳ ಸೂಚನೆಯಂತೆ ಇಲಾಖೆಯ ಸ್ಥಳದಲ್ಲಿ ಆಲದ ಮರವನ್ನು ನೆಟ್ಟಿದ್ದಾರೆ.

Old Banyan Tree ನೆಲಕ್ಕುರಳಿದ 100 ವರ್ಷ ಹಳೆ ಆಲದ ಮರಕ್ಕೆ ಪುನರ್ಜನ್ಮ, ಪರಿಸರ ಪ್ರೇಮಿಗಳ ಕಾರ್ಯಕ್ಕೆ ಮೆಚ್ಚುಗೆ!

 ಬುಡ ಸಮೇತ ಆಲದ ಮರ ಸ್ಥಳಾಂತರ ಕಾರ್ಯ: 

ರೈತ ಜಮೀನು ಸಮತಟ್ಟು ಮಾಡಲು ಆಲದ ಮರವನ್ನು ಬೇರು ಸಮೇತ ಕಿತ್ತಿಬಿಸಾಕಿದ ಇದನ್ನು ಗಮನಿಸಿದ ಪರಿಸರ ಪ್ರೇಮಿಗಳು ಆಲದ ಮರಕ್ಕೆ ಮರು ಜೀವ ನೀಡಲು ತೀರ್ಮಾನಿಸಿದರು. ಅದರಂತೆ ಏಳುರಾಗಿ ಕ್ಯಾಂಪ್ ನಿಂದ ಆಲದ ಮರವನ್ನು ಸಿಂಧನೂರು ಪಟ್ಟಣದ ಬಳಿಯ ನೀರಾವರಿ ಇಲಾಖೆಯ ಜಾಗಕ್ಕೆ ತರಲು ಹರಸಾಹಸ ಪಟ್ಟರು. ವನಸಿರಿ ತಂಡದ ಸದಸ್ಯರು ವನಸಿರಿ ವೃಕ್ಷರಥಗಳು ಮತ್ತು ಜೆಸಿಬಿ,ಕ್ರೇನ್,ಟ್ರಾಕ್ಟರ್ ಗಳ ಸಹಾಯದಿಂದ ಸತತ 6 ಗಂಟೆಗಳ ‌ನಿರಂತರ ಕಾರ್ಯಾಚರಣೆ ನಡೆಸಿ ಬೇರು ಸಮೇತ ಆಲದ ಮರವನ್ನು ಟ್ಯಾಂಕರ್ ಗೆ ಶಿಫ್ಟ್ ಮಾಡಿ 2 ಕಿ.ಮೀ‌‌. ಸಾಗಾಟ ಮಾಡಿ ಆಲದ ಮರಕ್ಕೆ ಮರುಜೀವ ನೀಡಲಾಯ್ತು.

ಕಡಿದು ಹಾಕಿದ ಆಲದ ಮರಕ್ಕೆ ಮರುಜೀವ!
ಕಡಿದು ಹಾಕಿದ 30 ವರ್ಷದ ಆಲದ ಮರಕ್ಕೆ ಮರುಜೀವ ನೀಡಲು ಪರಿಸರ ಪ್ರೇಮಿಗಳು 30 ಸಾವಿರ ಖರ್ಚು ಮಾಡಿ ಮರವನ್ನು ಬುಡ ಸಮೇತ ಸ್ಥಳಾಂತರ ನಡೆಸಿದ್ರು. ಈ ವೇಳೆ ಸಾರ್ವಜನಿಕರು ಕಡಿದು ಹಾಕಿದ ಮರಕ್ಕೆ ಮತ್ತೆ ನೆಡುವುದಕ್ಕಿಂತ 100 ಹೊಸ ಸಸಿಗಳು ಹಾಕಬಹುದು ಅಂತ ಹತ್ತಾರು ಸಂದೇಶಗಳು ನೀಡಲು ಮುಂದಾಗಿದ್ರು. ಇದಕ್ಕೆ ಕಿವಿಕೊಡದೇ ಪರಿಸರ ಪ್ರೇಮಿಗಳು ವಯಸ್ಸಾದ ಅಪ್ಪ- ಅಮ್ಮಗೆ ಅಪಘಾತಗಾಗಿ ಆಸ್ಪತ್ರೆಗೆ ದಾಖಲಾಗಿದ್ರೆ, ನಾವು ಅವರಿಗೆ ವಯಸ್ಸಿಗಾಗಿದೆ. ಅವರು ಆಸ್ಪತ್ರೆಯಲ್ಲಿ ಸತ್ತ ಹೋಗಲಿ ಎಂದು ಬಿಡುತ್ತೇವಾ? ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವರ ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅದೇ ರೀತಿಯಲ್ಲಿ ನಾವು ಈ ಆಲದ ಮರ ಉಳಿಸಿಕೊಳ್ಳಲು 30 ಸಾವಿರ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ರು.

 ನೆಟ್ಟಿದ ಆಲದ ಮರಕ್ಕೆ ತೆಂಗಿನಕಾಯಿ ಒಡೆದು ಪೂಜೆ: 

ಬೇರು ಸಮೇತ ತೆಗೆದುಕೊಂಡು ಬಂದು ಗುಂಡಿ ತೋಡಿ ನೆಟ್ಟ ನೆಲದ ಮರಕ್ಕೆ ವನಸಿರಿ ‌ಫೌಂಡೇಶನ್ ಸದಸ್ಯರು ಹಾಗೂ ನೀರಾವರಿ ಅಧಿಕಾರಿಗಳು ತೆಂಗಿನಕಾಯಿ ಒಡೆದು ಆಲದ ಮರಕ್ಕೆ ಹೂವಿನ ಹಾರಹಾಕಿ ಪೂಜೆ ಸಲ್ಲಿಸಿದರು. ಆ ಬಳಿಕ ಪರಿಸರ ಉಳಿಸಲು ‌ನಾವು- ನೀವೂ ಮುಂದಾಗೋಣ ಎಂದು ಸಂದೇಶ ಸಾರಿದರು.

ಇನ್ನೂ ಈ ವೇಳೆ ವನಸಿರಿ ಫೌಂಡೇಶನ್ ಗೌರವ ಅಧ್ಯಕ್ಷ ಶಂಕರಗೌಡ ಎಲೆಕೂಡ್ಲಿಗಿ, ಹಾಗೂ ವನಸಿರಿ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಅವಿನಾಶ್ ದೇಶಪಾಂಡೆ. ರಂಜಾನ್ ಸಾಬ್  TBP ಕ್ಯಾಂಪ್ ಎಸ್ ಡಿಎಂಸಿ ಅಧ್ಯಕ್ಷ ರಾಜು ಬಳಗಾನೂರು,ವನಸಿರಿ ತಾಲೂಕ ಅಧ್ಯಕ್ಷ ಮುದಿಯಪ್ಪ ಹೊಸಳ್ಳಿ ಕ್ಯಾಂಪ್. ಸದ್ದಾಮ್ ಹುಸೇನ್. ವಿರುಪಣ್ಣ.ಲಕ್ಷಣ ಕಲ್ಪವೃಕ್ಷ ಹಾಲಿನ ಅಂಗಡಿ ಮಾಲೀಕರು ಸೇರಿದಂತೆ ಹತ್ತಾರು ಜನ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.

click me!