'ಕಾಂಗ್ರೆಸ್‌ನಲ್ಲಿ ಗುಂಪುಗಳಿದ್ದು ನಡುವೆ ಭಾರೀ ವೈರತ್ವವಿದೆ'

By Suvarna NewsFirst Published Aug 6, 2021, 2:54 PM IST
Highlights
  •  ಕಾಂಗ್ರೆಸ್ ಒಂದು ಆಂತರಿಕ ಗೊಂದಲದ ಗೂಡಾಗಿದೆ. ಪರಮೇಶ್ವರ್, ಸಿದ್ದರಾಮಯ್ಯ ಡಿಕೆಶಿ ಎಂದು ಪಕ್ಷದಲ್ಲಿ ಬೇರೆ ಬೇರೆ ಗುಂಪುಗಳಿವೆ
  • ಕಾಂಗ್ರೆಸ್ ಈ ಗುಂಪುಗಳು ಪರಸ್ಪರ ವೈರತ್ವ ಸಾಧಿಸುತ್ತಿದೆ
  • ರಾಜ್ಯದ ನೂತನ ಸಚಿವ ಸುನಿಲ್ ಕುಮಾರ್ ಕಾರ್ಕಳ ಹೇಳಿಕೆ

 ಉಡುಪಿ (ಆ.06):  ಕಾಂಗ್ರೆಸ್ ಒಂದು ಆಂತರಿಕ ಗೊಂದಲದ ಗೂಡಾಗಿದೆ. ಪರಮೇಶ್ವರ್, ಸಿದ್ದರಾಮಯ್ಯ ಡಿಕೆಶಿ ಎಂದು ಪಕ್ಷದಲ್ಲಿ ಬೇರೆ ಬೇರೆ ಗುಂಪುಗಳಿವೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಬೆಳ್ಮಣ್‌ಗೆ  ಇಂದು ಭೇಟಿ ನೀಡಿದ ವೇಳೆ ಮಾತನಾಡಿದ ನೂತನ ಸಚಿವ ಸುನಿಲ್ ಕುಮಾರ್ ಕಾಂಗ್ರೆಸ್‌ನಲ್ಲಿ ಬೇರೆ ಬೇರೆ ಬಣಗಳಾಗಿದೆ. ಕಾಂಗ್ರೆಸ್ ಈ ಗುಂಪುಗಳು ಪರಸ್ಪರ ವೈರತ್ವ ಸಾಧಿಸುತ್ತಿದೆ. ಗೊಂದಲ ಆಗಾಗ ಒಂದೊಂದೇ ಬಹಿರಂಗ ಆಗುತ್ತಿದೆ ಎಂದರು.  

ಇನ್ನು ಜಮೀರ್ ಅಹಮದ್ ಮನೆ ಮೇಲೆ ED ದಾಳಿ ಪ್ರಕರಣ ಆಂತರಿಕ ಗೊಂದಲದ ಒಂದು ಭಾಗ ಎಂದು ಸುನಿಲ್ ಕುಮಾರ್ ಹೇಳಿದರು. 

ನನ್ನ ನೋಡಲು ಬರುವವರು ಒಂದು ಕನ್ನಡ ಪುಸ್ತಕ ತನ್ನಿ : ಸಚಿವ ಸುನಿಲ್ ಕುಮಾರ್

ಇನ್ನು  ಹಾಲಾಡಿಯವರಿಗೆ ಸಚಿವ ಸ್ಥಾನ ಸಿಗದ ಬಗ್ಗೆ ಮಾತನಾಡಿದ ಸುನಿಲ್ ಕುಮಾರ್ ಅವರಿಗೆ ಪಕ್ಷ ಗೌರವ ಕೊಟ್ಟಿದೆ. ಬಿಜೆಪಿ ಹಾಲಾಡಿಯವರನ್ನು ಖಂಡಿತ ಗುರುತಿಸುತ್ತದೆ.  ಶ್ರೀನಿವಾಸ ಶೆಟ್ಟರಿಗೆ ಇನ್ನಷ್ಟು ಗೌರವ ಸಿಗಬೇಕು ಎಂಬ ನಿರೀಕ್ಷೆ ಸಹಜ. ಸಚಿವನಾಗಿ ನಾನು ಮಾಡುವ ಕೆಲಸಕ್ಕೆ ಶ್ರೀನಿವಾಸ್ ಶೆಟ್ಟಿ ಅವರ ಬೆಂಬಲ ಬೇಕು.  ಸಚಿವ ಶ್ರೀನಿವಾಸ ಪೂಜಾರಿ, ಅಂಗಾರ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ ಎಂದರು.

ವಿಜಯೇಂದ್ರ ವಿಚಾರ : ವಿಜಯೇಂದ್ರ ಗೆ ಸೂಕ್ತಸ್ಥಾನಮಾನದ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು. 

ಇನ್ನು  ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆಯೂ ಮಾತನಾಡಿದ ಸುನಿಲ್ ಕುಮಾರ್ ನಳೀನ್ ಕುಮಾರ್ ಕಟೀಲ್ ಅವರೇ ನಮ್ಮ ಅಧ್ಯಕ್ಷರು. ಅದರಲ್ಲಿ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದರು. 

click me!