ನಾಲ್ವರ ಜೀವ ಉಳಿಸಿದ ಮೃತ ಎಂಜಿನಿಯರ್‌

Kannadaprabha News   | Asianet News
Published : Mar 12, 2021, 12:13 PM ISTUpdated : Mar 13, 2021, 04:33 PM IST
ನಾಲ್ವರ ಜೀವ ಉಳಿಸಿದ ಮೃತ ಎಂಜಿನಿಯರ್‌

ಸಾರಾಂಶ

ಎಂಜಿನಿಯರ್ ಓರ್ವರು ನಾಲ್ವರ ಜವ ಉಳಿಸಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತರಾದ ಇವರ ದೇಹದ ಅಂಗಾಂಗಗಳನ್ನ ದಾನ ಮಾಡಿ ಹಲವರ ಜೀವ ಉಳಿಸಿದ್ದಾರೆ. 

ಮೈಸೂರು (ಮಾ.12): ಅಪಘಾತದಲ್ಲಿ ಮೃತಪಟ್ಟಎಂಜಿನಿಯರ್‌ ನಾಲ್ವರಿಗೆ ಜೀವದಾನ ಮಾಡಿದ್ದಾರೆ. ಚಂದನ್‌ ಮಲ್ಲಪ್ಪ (28) ಮೃತ ಎಂಜಿನಿಯರ್‌. ಅಪಘಾತದಲ್ಲಿ ಗಾಯಗೊಂಡಿದ್ದ ಇವರು ನಾಲ್ವರಿಗೆ ತಮ್ಮ ಅಂಗಾಂಗ ದಾನ ಮಾಡುವ ಮೂಲಕ ಅವರ ಜೀವ ರಕ್ಷಿಸಿದ್ದಾರೆ. 

ಹೃದಯದ ಕೊಳವೆ, ಎರಡು ಕಿಡ್ನಿ, ಒಂದು ಲಿವರ್‌ ದಾನ ಮಾಡಿದ್ದಾರೆ. ಭಾನುವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಚಂದನ್‌ ಅವರನ್ನು ಮೈಸೂರಿನ ಅಪೋಲೋ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

'ಅಂಗಾಂಗ ದಾನ ಮಾಡ್ತೇನೆ' ಬಿಗ್‌ಬಿ ಘೋಷಣೆ, ಮೆಚ್ಚುಗೆಗಳ ಮಹಾಪೂರ .

ಎರಡು ದಿನಗಳ ಕಾಲ ಕೃತಕ ಉಸಿರಾಟದಲ್ಲಿ ಇರಿಸಲಾಗಿತ್ತು. ಬಳಿಕ ಚಿಕಿತ್ಸೆಗೆ ಸ್ಪಂದಸದೆ ಅವರು ಮೃತರಾದರು. ಮೆದುಳು ನಿಷ್ಕಿ್ರಯಗೊಂಡಿದ್ದರಿಂದ ಏಕಕಾಲಿಕ ಕಿಡ್ನಿ, ಮೇದೋಜ್ಞೀರಕ ಗ್ರಂಥಿ ಮತ್ತು ಯಕೃತ್ತು ಅಪೋಲೊ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಒಂದು ಕಿಡ್ನಿಯನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ, ಹಾಟ್ಸ್‌ ವಾಲ್ಮ್‌ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾನ ಮಾಡಲಾಗಿದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!