ಬನಶಂಕರಿಯ ವಿದ್ಯುತ್ ಚಿತಾಗಾರದ ಸಿಬ್ಬಂದಿ ಹೊರ ಆವರಣದಲ್ಲಿ ಪಿಪಿಇ ಕಿಟ್ ಹಾಗೂ ಗ್ಲೌಸ್ ಎಸೆಯುವ ಮೂಲಕ ತಮ್ಮ ಬೇಜವಾಬ್ದಾರಿ ಪ್ರದರ್ಶನ| ಪಿಪಿಇ ಕಿಟ್ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದ ಪಾಲಿಕೆ ಅಥವಾ ಚಿತಾಗಾರದ ಉಸ್ತುವಾರಿಗಳು|
ಬೆಂಗಳೂರು(ಏ.18): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿದ್ಯುತ್ ಚಿತಾಗಾರಗಳಲ್ಲಿ ಮೃತದೇಹ ಅಂತ್ಯಸಂಸ್ಕಾರದ ವೇಳೆ ಚಿತಾಗಾರದ ಸಿಬ್ಬಂದಿ ಹಾಗೂ ಮೃತರ ಕಡೆಯವರು ಧರಿಸುವ ಪಿಪಿಇ ಕಿಟ್ ಹಾಗೂ ಗ್ಲೌಸ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವ ಘಟನೆ ಮರುಕಳಿಸುತ್ತಿವೆ.
ಬನಶಂಕರಿಯ ವಿದ್ಯುತ್ ಚಿತಾಗಾರದ ಸಿಬ್ಬಂದಿ ಶುಕ್ರವಾರವೂ ಪಿಪಿಇ ಕಿಟ್ ಹಾಗೂ ಗ್ಲೌಸ್‌ಗಳನ್ನು ಚಿತಾಗಾರದ ಹೊರ ಆವರಣದಲ್ಲಿ ಬಿಸಾಡಿದ್ದರು. ಶನಿವಾರವೂ ಸಹ ತಮ್ಮ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ.
undefined
ಲಾಕ್‌ಡೌನ್ ಕೊರೊನಾಗಿಂತಲೂ ಭೀಕರವಾದುದು; ಸರ್ಕಾರದ ಕಿವಿಹಿಂಡಿದ ಕಾಂಗ್ರೆಸ್
ಕೋವಿಡ್ ಮೃತರ ಅಂತ್ಯಸಂಸ್ಕಾರದ ವೇಳೆ ಪೂಜೆ ಸಲ್ಲಿಸಲು ಕುಟುಂಬದ ಸದಸ್ಯರು ಪಿಪಿಇ ಕಿಟ್ ಧರಿಸುತ್ತಿದ್ದಾರೆ. ಅಂತ್ಯಕ್ರಿಯೆ ಮುಗಿದ ಬಳಿಕ ಚಿತಾಗಾರದ ಆವರಣದಲ್ಲಿ ಪಿಪಿಇ ಕಿಟ್, ಗ್ಲೌಸ್ ಕಳಚಿ ಎಸೆದು ಹೋಗುತ್ತಿದ್ದಾರೆ. ಪಾಲಿಕೆ ಅಥವಾ ಚಿತಾಗಾರದ ಉಸ್ತುವಾರಿಗಳು ಈ ಪಿಪಿಇ ಕಿಟ್ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸದ ಪರಿಣಾಮ ಇದು ಮರುಕಳಿಸುತ್ತಿದೆ.