ಸೈಯದ್‌ ಇಸಾಕ್‌ ಗ್ರಂಥಾಲಯಕ್ಕೆ ಬೆಂಗ್ಳೂರು ಪ್ರಕಾಶಕರ ಸಂಘ ನೆರವು

By Kannadaprabha NewsFirst Published Apr 18, 2021, 7:43 AM IST
Highlights

ಅಗ್ನಿ ದುರಂತದಿಂದ ನಾಶವಾದ ಮೈಸೂರಿನ ಸೈಯದ್‌ ಇಸಾಕ್‌ ನಿರ್ಮಿತ ಗ್ರಂಥಾಲಯ ಪುನಶ್ಚೇತನಕ್ಕಾಗಿ ಬೆಂಗಳೂರಿನ ‘ಕರ್ನಾಟಕ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘ’ವು ನೆರವು ನೀಡಲು ಮುಂದಾಗಿದೆ. 

ಬೆಂಗಳೂರು (ಏ.18):  ಕಿಡಿಗೇಡಿಗಳು ನಡೆಸಿದ ಅಗ್ನಿ ದುರಂತದಿಂದ ನಾಶವಾದ ಮೈಸೂರಿನ ಸೈಯದ್‌ ಇಸಾಕ್‌ ನಿರ್ಮಿತ ಗ್ರಂಥಾಲಯ ಪುನಶ್ಚೇತನಕ್ಕಾಗಿ ಬೆಂಗಳೂರಿನ ‘ಕರ್ನಾಟಕ ಕನ್ನಡ ಬರಹಗಾರ ಮತ್ತು ಪ್ರಕಾಶಕರ ಸಂಘ’ವು 10 ಸಾವಿರ ಸಹಾಯಧನ ಹಾಗೂ 5,000 ಕನ್ನಡ ಪುಸ್ತಕಗಳನ್ನು ಬಳುವಳಿಯಾಗಿ ನೀಡುತ್ತಿದೆ.

ಇಸಾಕ್‌ ಅವರು ಓದುವ ಸಂಸ್ಕೃತಿ ಬೆಳೆಸಲು ಸ್ವಹಿತಾಸಕ್ತಿಯಿಂದ ಸಾವಿರಾರು ಪುಸ್ತಕ ಸಂಗ್ರಹಿಸಿ ಗ್ರಂಥಾಲಯ ನಿರ್ಮಿಸಿದ್ದರು. ಆ ಗ್ರಂಥಾಲಯ ದುಷ್ಕರ್ಮಿಗಳಿಂದ ನಾಶವಾಗಿರುವ ಹಿನ್ನೆಲೆಯಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪ್ರಕಾಶಕರ ಸಂಘ ಗ್ರಂಥಾಲಯದ ಪುನಶ್ಚೇತನಕ್ಕೆ ಸಹಾಯ ಮಾಡುವುದು ತನ್ನ ಜವಾಬ್ದಾರಿ ಎಂದು ಭಾವಿಸಿತು.

ಮೈಸೂರಿನ ಇಸಾಕ್‌ ಲೈಬ್ರೆರಿಗೆ ಬೆಂಕಿ: ಆರೋಪಿ ಸೆರೆ ...

 ಈ ನಿಟ್ಟಿನಲ್ಲಿ ಸಂಘ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಕಾರ್ಯದರ್ಶಿ ಆರ್‌.ದೊಡ್ಡೇಗೌಡ ನೇತೃತ್ವದ ಇತ್ತೀಚೆಗೆ ನಡೆಸಿದ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

click me!