ಪಾವಗಡ ಕ್ಷೇತ್ರದ ಸಮಗ್ರ ಪ್ರಗತಿಗೆ ಒತ್ತು: ಶಾಸಕ ವೆಂಕಟೇಶ್‌ ಭರವಸೆ

By Kannadaprabha News  |  First Published May 29, 2023, 5:59 AM IST

ಕೆಪಿಸಿಸಿ ಪ್ರಣಾಳಿಕೆಯ ಆಂಶ ಹಾಗೂ ತಂದೆ ಮಾಜಿ ಸಚಿವ ವೆಂಕಟರಮಣಪ್ಪರ ಅವಧಿಯಲ್ಲಿ ಕೈಗೊಂಡ ಜನಪರ ಯೋಜನೆಗಳ ಪ್ರಗತಿ ಹಿನ್ನೆಲೆ ತಾಲೂಕಿನಲ್ಲಿ ನಿರೀಕ್ಷೆಗೆ ಮೀರಿ ಕಾಂಗ್ರೆಸ್‌ ಪರ ಮತದಾನವಾಗಿದ್ದು ಇಲ್ಲಿನ ಎಲ್ಲಾ ಸಮುದಾಯಗಳ ಬೆಂಬಲದ ಮೇರೆಗೆ ಹೆಚ್ಚು ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಗಿದೆ. ತಾಲೂಕಿನ ಜನತೆಯ ಸಹಕಾರ ಎಂದೂ ಮರೆಯಲಾರೆ, ಕ್ಷೇತ್ರದ ಪ್ರಗತಿಗೆ ವಿಶೇಷ ಒತ್ತು ನೀಡಿ ಕೆಲಸ ಮಾಡುವುದಾಗಿ ಇಲ್ಲಿನ ನೂತನ ಶಾಸಕ ಎಚ್‌.ವಿ.ವೆಂಕಟೇಶ್‌ ಹೇಳಿದರು


  ಪಾವಗಡ:  ಕೆಪಿಸಿಸಿ ಪ್ರಣಾಳಿಕೆಯ ಆಂಶ ಹಾಗೂ ತಂದೆ ಮಾಜಿ ಸಚಿವ ವೆಂಕಟರಮಣಪ್ಪರ ಅವಧಿಯಲ್ಲಿ ಕೈಗೊಂಡ ಜನಪರ ಯೋಜನೆಗಳ ಪ್ರಗತಿ ಹಿನ್ನೆಲೆ ತಾಲೂಕಿನಲ್ಲಿ ನಿರೀಕ್ಷೆಗೆ ಮೀರಿ ಕಾಂಗ್ರೆಸ್‌ ಪರ ಮತದಾನವಾಗಿದ್ದು ಇಲ್ಲಿನ ಎಲ್ಲಾ ಸಮುದಾಯಗಳ ಬೆಂಬಲದ ಮೇರೆಗೆ ಹೆಚ್ಚು ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಗಿದೆ. ತಾಲೂಕಿನ ಜನತೆಯ ಸಹಕಾರ ಎಂದೂ ಮರೆಯಲಾರೆ, ಕ್ಷೇತ್ರದ ಪ್ರಗತಿಗೆ ವಿಶೇಷ ಒತ್ತು ನೀಡಿ ಕೆಲಸ ಮಾಡುವುದಾಗಿ ಇಲ್ಲಿನ ನೂತನ ಶಾಸಕ ಎಚ್‌.ವಿ.ವೆಂಕಟೇಶ್‌ ಹೇಳಿದರು.

ಬೆಂಗಳೂರಿಗೆ ತೆರಳಿ ನೂತನ ಸಚಿವರಿಗೆ ಶುಭಕೋರಿ ಪಾವಗಡಕ್ಕೆ ವಾಪಸ್ಸಾಗುತ್ತಿದ್ದಂತೆ, ಇಲ್ಲಿನ ಕಾಂಗ್ರೆಸ್‌ ಕಚೇರಿಯ ಬಳಿ ಸುತ್ತುವರಿದ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಪುಷ್ಟಾಮಾಲೆಯೊಂದಿಗೆ ಅವರನ್ನು ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.

Latest Videos

undefined

ಬಳಿಕ ಪಟ್ಟಣದ ಪ್ರವಾಸಿ ಮಂದಿರದ ಬಳಿ ತಾ.ಭೋವಿ ಹಾಗೂ ಇತರೆ ಸಮಾಜದ ಮುಖಂಡರು ನೂತನ ಶಾಸಕರಿಗೆ ಹೂವುಗುಜ್ಜ ನೀಡಿ ಸನ್ಮಾನಿಸುವ ಮೂಲಕ ಶುಭಾಶಯ ಕೋರಿದರು.

ಈ ವೇಳೆ ಮಾತನಾಡಿದ ಶಾಸಕ ಎಚ್‌.ವಿ.ವೆಂಕಟೇಶ್‌ ಎಐಸಿಸಿ ರೂವಾರಿಗಳಾದ ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷರಾದ ರಾಹುಲ್‌ಗಾಂಧಿ ಕೈಗೊಂಡ ಭಾರತ್‌ ಜೋಡೋ ಕಾರ್ಯಕ್ರಮ ರಾಜ್ಯದಲ್ಲಿ ಅತ್ಯಂತ ಪ್ರಭಾವ ಬೀರಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಿದ್ದಪಡಿಸಿದ್ದ ಪ್ರಣಾಳಿಕೆಯ ಗ್ಯಾರಂಟಿಗಳಿಗೆ ಜನತೆ ಸ್ಪಂದಿಸಿದ್ದಾರೆ.

ಜನಸಾಮಾನ್ಯರ ಉತ್ತಮ ಬದುಕು ಹಾಗೂ ರಾಜ್ಯದ ಪ್ರಗತಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಹೆಚ್ಚು ಬೆಂಬಲ ವ್ಯಕ್ತವಾಗಿದ್ದು, ಯಾವುದೇ ಗೊಂದಲಗಳಿಲ್ಲದೇ ಸಚಿವ ಸಂಪುಟ ರಚನೆಯಾಗಿ ನೂತನ ಸರ್ಕಾರ ಜಾರಿಗೆ ಬಂದಿದೆ. ಜನತೆಯ ನಿರೀಕ್ಷೆಯಂತೆ ರಾಜ್ಯದ ಪ್ರಗತಿಗೆ ನೂತನ ಸಚಿವರು ಅದ್ಯತೆ ನೀಡಲಿರುವುದಾಗಿ ಹೇಳಿದರು.

ಕಾಂಗ್ರೆಸ್‌ನ ಗ್ಯಾರಂಟಿ ಮತ್ತು ತಂದೆ ವೆಂಕಟರಮಣಪ್ಪ ಅವರು ಶಾಸಕ ಹಾಗೂ ಸಚಿವರಾಗಿದ್ದ ವೇಳೆ ತಾಲೂಕಿನ ಪ್ರಗತಿಗೆ ವಿಶೇಷ ಒತ್ತು ನೀಡಿದ್ದಾರೆ. ಅವರ ಸೇವೆ ಹಾಗೂ ಪ್ರಗತಿ ಹಿನ್ನಲೆಯಲ್ಲಿ ತಾ.ಕಾಂಗ್ರೆಸ್‌ ಸದೃಢವಾಗಿರುವುದು ಸಾಬೀತಾಗಿದೆ. ಎಲ್ಲಾ ಸಮಾಜದಿಂದ ಕಾಂಗ್ರೆಸ್‌ ಪರ ಮತದಾನವಾದ ಹಿನ್ನೆಲೆಯಲ್ಲಿ ಹೆಚ್ಚಿನ ಮತಗಳಿಂದ ಗೆಲ್ಲಲು ಸಾಧ್ಯವಾಗಿದ್ದು, ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಿದ ಇಲ್ಲಿನ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಬಾರಿಯಾಗಿದ್ದೇನೆ. ಕಾಂಗ್ರೆಸ್‌ ಪರ ಮತದಾನ ಮಾಡಿದ ಕ್ಷೇತ್ರದ ಎಲ್ಲಾ ಮತದಾರರಿಗೆ ಕೃತಜ್ಞತೆ ಸಲ್ಲಿಸಲಿದ್ದು, ನನ್ನ ಮೇಲೆ ಮಹತ್ತರ ಜವಾಬ್ದಾರಿ ಇದೆ. ಜನತೆಯ ನಿರೀಕ್ಷೆಯಂತೆ ಕೆಲಸ ಮಾಡುವ ಇಚ್ಚೆ ಹೊಂದಿದ್ದೇನೆ. ಮೊದಲು ಉದ್ಯೋಗ ಸೃಷ್ಟಿಯಾಗಬೇಕು. ಗಾರ್ಮೆಂಟ್ಸ್‌ ಇತರೆ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಿದ್ದೇನೆ. ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ

ಸ್ವ ಉದ್ಯೋಗಕ್ಕಾಗಿ ಡಿಪ್ಲೋಮಾ ಪ್ಯಾರಮೆಡಿಕಲ್‌ ಇತರೆ ತಾಂತ್ರಿಕ ಕಾಲೇಜುಗಳ ಸ್ಥಾಪನೆ, ಶಾಲಾ ಕಾಲೇಜುಗಳ ನಿರ್ಮಾಣ ವಸತಿ ಶಾಲೆಗಳ ಮಂಜುರಾತಿ ಸೇರಿದಂತೆ ನಗರದಲ್ಲಿ ಬೈಪಾಸು ರಸ್ತೆ ನಿರ್ಮಾಣ ಹಾಗೂ ಕುಡಿವ ನೀರು ನೀರಾವರಿ ಯೋಜನೆಗಳ ಪ್ರಗತಿ ಆಗಬೇಕು. ಇತರೆ ಜನಪರ ಪ್ರಗತಿಯ ಚಿಂತನೆ ಕೈಗೊಂಡಿದ್ದು ಸರ್ಕಾರದ ಜತೆ ಚರ್ಚಿಸಿ ಈಡೇರಿಸುವ ಹೊಣೆ ನನ್ನ ಮೇಲಿದೆ ಎಂದರು.

ಇದೇ ವೇಳೆ ತಾ.ಕಾಂಗ್ರೆಸ್‌ ನಗರಾಧ್ಯಕ್ಷ ಸುದೇಶ್‌ಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಮೂರ್ತಿ, ಮಾಜಿ ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ, ತಾಲೂಕು ಭೋವಿ ಸಮಾಜದ ಅಧ್ಯಕ್ಷ ಬಂಗಾರಪ್ಪ, ಮಾಜಿ ಪುರಸಭೆ ಸದಸ್ಯ ನಾಗೇಶ್‌, ಎಸ್‌ಸಿ ಘಟಕದ ಅಧ್ಯಕ್ಷ ಚಿನ್ನಮ್ಮನಹಳ್ಳಿ ಶ್ರೀರಾಮ್‌, ವಕೀಲ ವೆಂಕಟಸ್ವಾಮಿ, ಗುಟ್ಟಹಳ್ಳಿ ಪಾತನ್ನ, ಕುಮಾರಸ್ವಾಮಿ ಬಡಾವಣೆಯ ರಾಮಚಂದ್ರಪ್ಪ

ಇತರೆ ಆನೇಕ ಮಂದಿ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರಿದ್ದರು.

click me!