ಆಲ್ದೂರು ಸಮೀಪದ ಆಲ್ದೂರು ಪುರ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಬೀಟಮ್ಮ ಗ್ಯಾಂಗ್ 17 ಆನೆಗಳು ತೋಟದ ತುಂಬಾ ಓಡಾಡಿ ಸಾಕಷ್ಟು ದಾಂಧಲೆ ಮಾಡುತ್ತಿವೆ. ಬೀಟಮ್ಮ ಗ್ಯಾಂಗ್ ಹಾವಳಿಗೆ ಕಾಫಿ ಬೆಳೆ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ನ.09): ಜಿಲ್ಲೆಗೆ ಲಗ್ಗೆ ಇಟ್ಟಿರುವ ಕಾಡಾನೆಗಳನ ಹಿಂಡು ಬೀಟಮ್ಮ ಗ್ಯಾಂಗ್ ಹಾವಳಿಗೆ ಮಲೆನಾಡು ಕಂಗಾಲಾಗಿದೆ. ನಿತ್ಯ ಒಂದೊಂದು ತೋಟಕ್ಕೆ ದಾಂಗುಡಿ ಇಟ್ಡು ಗಲಾಟೆ ಮಾಡ್ರಿರೋದ್ರಿಂದ ಹಳ್ಳಿಗರು ಆತಂಕದಲ್ಲಿ ಬದುಕುವಂತಾಗಿದೆ. ಮುಂಜಾಗೃತ ಕ್ರಮವಾಗಿ ಅರಣ್ಯ ಇಲಾಖೆ ಆಲ್ದೂರು ಹೋಬಳಿಯ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಮೈಕ್ ಅನೌನ್ಸ್ ಮಾಡಿ ಎಚ್ಚರಿಕೆ ನೀಡಿದ್ದಾರೆ. ವಾಹನ ಸವಾರರು, ಕಾರ್ಮಿಕರು, ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.
ಕಾಫಿ ತೋಟದಲ್ಲು ದಾಂಧಲೆ :
ಆಲ್ದೂರು ಸಮೀಪದ ಆಲ್ದೂರು ಪುರ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಬೀಟಮ್ಮ ಗ್ಯಾಂಗ್ 17 ಆನೆಗಳು ತೋಟದ ತುಂಬಾ ಓಡಾಡಿ ಸಾಕಷ್ಟು ದಾಂಧಲೆ ಮಾಡುತ್ತಿವೆ. ಬೀಟಮ್ಮ ಗ್ಯಾಂಗ್ ಹಾವಳಿಗೆ ಕಾಫಿ ಬೆಳೆ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದಾರೆ.
ಪೊಲೀಸ್ ನಿವೃತ್ತಿ ಹೊಂದಿದ ಶ್ವಾನ ಪೃಥ್ವಿಗೆ ಗೌರವಯುತ ಬೀಳ್ಕೊಡುಗೆ
ಕಾಫಿ ಕೊಯ್ಲಿಗೆ ಬಂದಿರೋದ್ರಿಂದ ಆನೆ ಹಾವಳಿಗೆ ಹಣ್ಣಾಗಿರೋ ಕಾಫಿ ಉದುರುವ ಆತಂಕದಲ್ಲಿ ಹತ್ತಾರು ಹಳ್ಳಿಯ ಬೆಳೆಗಾರರಿದ್ದಾರೆ. ತೋರಣಮಾವು, ತುಡುಕೂರು, ಮಡೆನೆರಲು, ನೊಜ್ಜೆಪೇಟೆ, ಹಳೇ ಆಲ್ದೂರು, ಆಲ್ದೂರು ಹೊಸಳ್ಳಿ, ಎಲಗುಡಿಗೆ ಭಾಗದ ಸುತ್ತಮುತ್ತವೇ ಆನೆಗಳ ಸಂಚಾರ ಇರೋದ್ರಿಂದ ಜನರಲ್ಲಿ ಆತಂಕ ಮೂಡಿದೆ.
ಭತ್ತದ ಗದ್ದೆಗಳಲ್ಲಿ ಓಡಾಟ
ಕಾಫಿ ತೋಟದಿಂದ ಪಕ್ಕದಲ್ಲಿರುವ ಭತ್ತದ ಗದ್ದೆಗಳಲ್ಲೂ ಕೂಡ ಓಡಾಟ ನಡೆಸಿರುವ ಪರಿಣಾಮ ಕೈಗೆ ಬಂದ ಬೆಳೆ ಸಂಪೂರ್ಣವಾಗಿ ಮಣ್ಣು ಪಾಲಾಗಿದೆ. ಹೇಮಾವತಿ, ಹರೀಶ್ ಎನ್ನುವರಿಗೆ ಸೇರಿದ ಮೂರು ಎಕರೆ ಭತ್ತದ ಗದ್ದೆಯಲ್ಲಿ ಕಾಡಾನೆಗಳು ಓಡಾಟ ನಡೆಸಿದ ಪರಿಣಾಮ ಕಟಾವಿಗೆ ಬಂದಿದ್ದ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ರೈತರು ಒತ್ತಾಯಿಸಿದ್ದಾರೆ.ಕಳೆದ ಮೂರು ದಿನಗಳಿಂದ ಒಂದೇ ಜಾಗದ ಸುತ್ತಮುತ್ತ ಇರುವ ಕಾಡಾನೆಗಳ ಹಿಂಡು ಕಾಡಿನತ್ತ ಅಥವ ಬಂದ ದಾರಿಯಲ್ಲೇ ವಾಒಸ್ಸಾಗಬಹುದೆಂದು ಅರಣ್ಯ ಇಲಾಖೆ ಕೂಡ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.