ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಹೆಸರಲ್ಲಿ 40,000 ಕೋಟಿ ಹಗರಣ: ಸಿಎಂ ಸೇರಿ ಇಡೀ ಸಚಿವ ಸಂಪುಟದ ವಿರುದ್ಧವೇ ದೂರು!

Published : Nov 09, 2024, 10:46 AM IST
ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ಹೆಸರಲ್ಲಿ 40,000 ಕೋಟಿ ಹಗರಣ:  ಸಿಎಂ ಸೇರಿ ಇಡೀ ಸಚಿವ ಸಂಪುಟದ ವಿರುದ್ಧವೇ ದೂರು!

ಸಾರಾಂಶ

ಬೃಹತ್ ವಂಚನೆಯ ಹಗರಣಕ್ಕೆ ಸಂಬಂಧಿಸಿದ 1,570 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತದಲ್ಲಿ ರಮೇಶ್ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಸೇರಿ ಅವರ ಸಚಿವ ಸಂಪುಟದ 33 ಮಂದಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಅಭಿಯೋಜನೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.

ಬೆಂಗಳೂರು(ನ.09):  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಘನತ್ಯಾಜ್ಯ ನಿರ್ವಹಣೆಯ ಹೆಸರಿನಲ್ಲಿ 40 ಸಾವಿರ ಕೋಟೆಗಿಂತ ಹೆಚ್ಚು ಮೊತ್ತದ ಬೃಹತ್ ವಂಚನೆಯ ಹಗರಣ ನಡೆರುವ ಕುರಿತು ರಾಜ್ಯ ಪಾಲರಿಗೆ ಮತ್ತು ಲೋಕಾಯುಕ್ತ ಸಂಸ್ಥೆಗೆ ಬಿಜೆಪಿ ಮುಖಂಡ ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಎನ್.ಆರ್.ರಮೇಶ್ ದೂರು ನೀಡಿದ್ದಾರೆ. 

ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಎಲ್ಲಾ 33 ಸಚಿವರ ವಿರುದ್ಧ ದೂರು ದಾಖಲಿಸಲಾಗಿದೆ. ದೇಶದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯವೊಂದರ ಇಡೀ ಸಚಿವ ಸಂಪುಟ ಸದಸ್ಯರ ವಿರುದ ಪ್ರಕರಣ ದಾಖಲಿಸಿದಂತಾಗಿದೆ. 

ಮುಡಾ ಕೇಸ್‌ ಸಿಬಿಐಗೆ ವಹಿಸಿದ್ರೆ ಸಿಎಂ ಸಿದ್ದರಾಮಯ್ಯ ಜೈಲಿಗೆ: ಯಡಿಯೂರಪ್ಪ

ಬೃಹತ್ ವಂಚನೆಯ ಹಗರಣಕ್ಕೆ ಸಂಬಂಧಿಸಿದ 1,570 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತದಲ್ಲಿ ರಮೇಶ್ ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ ಸೇರಿ ಅವರ ಸಚಿವ ಸಂಪುಟದ 33 ಮಂದಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಅಭಿಯೋಜನೆಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. 

ದೂರು ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಮೇಶ್, ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಕಾರ್ಯದ ಗುತ್ತಿಗೆಯನ್ನು 25 ವರ್ಷಗಳ ಅವಧಿಗೆ ಪೂರ್ವ ನಿಗದಿತ ಗುತ್ತಿಗೆದಾರ ಸಂಸ್ಥೆಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ₹40 ಸಾವಿರ ಕೋಟಿ ಮೊತ್ತದ ವಂಚನೆಯ ಕಾರ್ಯಕ್ಕೆ ನಿಯಮ ಬಾಹಿರವಾಗಿ ಅನುಮೋದನೆ ನೀಡಲಾಗಿದೆ. ಈ ಹಿನ್ನೆಲೆ ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪ ಯೋಗ ಮತ್ತು ಸಾರ್ವಜನಿಕ ಹಣ ಕಬಳಿಕೆಗೆ ಸಂಚು ಪ್ರಕರಣ ದಾಖಲಿಸಲಾಗಿದೆ ಎಂದರು. 

ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾ ಧಿಕಾರಿಗಳ ಆಡಳಿತಾವಧಿ ಆರು ತಿಂಗಳನ್ನು ಮೀರುವಂತಿಲ್ಲ ಮತ್ತು ಜನಪ್ರತಿನಿಧಿಗಳ ಅವಧಿ ಮುಗಿದ ಆರು ತಿಂಗಳೊಳಗಾಗಿ ಹೊಸ ಚುನಾಯಿತ ಜನಪ್ರತಿನಿಧಿಗಳ ಆಯ್ಕೆ ಆಗಲೇಬೇಕು ಎಂ ಕಡ್ಡಾಯ ನಿಯಮ ಇದೆ. ಆದರೆ, 2020ರಸೆ.11ರಿಂ ಈವರೆಗೆ ಆಡಳಿತಾಧಿಕಾರಿಗಳ ಆಡಳಿತ ಬಿಬಿಎಂಪಿಯಲ್ಲಿ ಮುಂದುವರೆದಿದೆ. ಪ್ರಜಾ ಪ್ರತಿನಿಧಿಗಳ ಇಲ್ಲದ ಅವಧಿಯಲ್ಲಿ ಮಹತ್ವದ ನಿರ್ಣಯಗಳನ್ನ ತೆಗೆದುಕೊಳ್ಳಲು ಅವಕಾಶ ಇಲ್ಲದಿದ್ದರೂ ಸಂವಿಧಾನದ 74ನೇ ತಿದ್ದುಪಡಿಯಲ್ಲಿನ ನಿಯವಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರ ನಿರ್ಣಯ ವನ್ನು ಕೈಗೊಳ್ಳಲಾಗಿದೆ. ಸಂವಿಧಾನದ ನಿಯವ ಗಳನ್ನು ಸಿಎಂ ಸಚಿವ ಸಂಪುಟದ ಸದಸ್ಯರು ಸ್ಪಷ್ಟವಾ ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದರು.

ಕಪ್ಪು ಪಟ್ಟಿಗೆ ಸೇರಿದ ಕಂಪನಿಗೆ ಕಸ ವಿಲೇ ಗುತ್ತಿಗೆ 

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಏಕೀಕೃತ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೆ ತರುವ ಯೋಜನೆಯ 25 ವರ್ಷಗಳ ಗುತ್ತಿಗೆಯನ್ನು ರಾಮ್ಮಿ ಇನ್ಸಾ ಸ್ಟಕ್ಟರ್‌ಪ್ರೈ.ಲಿ. ಎಂಬ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟಿರುವ ಸಂಸ್ಥೆ ಸೇರಿ 4 ಸಂಸ್ಥೆಗಳಿಗೆ ನೀಡಲು ಹೊರಟಿದೆ. ಈ ಮೂಲಕ 25 ವರ್ಷಗಳ ಅವಧಿಯಲ್ಲಿ ಗುತ್ತಿಗೆದಾರರಿಗೆ 2 40 ಸಾವಿರ ಕೋಟಿಯಷ್ಟು ಬೃಹತ್ ಪ್ರಮಾಣದ ಸಾರ್ವಜನಿಕರ ಹಣವನ್ನು ಕಾನೂನು ಬಾಹಿರ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಎನ್.ಆರ್.ರಮೇಶ್ ವಾಗ್ದಾಳಿ ನಡೆಸಿದರು. 

ಮುಡಾ ಕುರಿತು ಲೋಕಾದ್ದು ದಿಕ್ಕು ತಪ್ಪಿಸುವ ತನಿಖೆ: ವಿಜಯೇಂದ್ರ

ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ಮತ್ತು ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಸ್ವಾರ್ಥಕ್ಕೋಸ್ಕರ ಬಿಬಿಎಂಪಿಯ ಏಕೀಕೃತ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಹೆಸರಲ್ಲಿ ಪೂರ್ವ ನಿಗದಿತ ಗುತ್ತಿಗೆದಾರ ಸಂಸ್ಥೆಗಳಿಗೆ 25 ವರ್ಷದ ಅವಧಿಯ ಗುತ್ತಿಗೆಗೆ ನೀಡುವ ಮೂಲಕ ₹40 ಸಾವಿರ ಕೋಟಿ ರು. ಗಿಂತ ಹೆಚ್ಚು ವೆಚ್ಚ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮಹಾ ವಂಚನೆಯ ಕಾರ್ಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಸಚಿವರ ವಿರುದ್ದ ಬಿಜೆಪಿಯ ವಾದ ಏನು? 

* ಸಂಸ್ಥೆಯ ಚುನಾಯಿತ ಸದಸ್ಯರ ಅಧಿಕಾರ ಮುಗಿದ ಆರು ತಿಂಗಳಲ್ಲಿ ಚುನಾವಣೆ ಕಡ್ಡಾಯ 
* ಆದರೆ ಬಿಬಿಎಂಪಿ ಅವಧಿ ಮುಗಿದು 4 ವರ್ಷ ಆದರೂ ಚುನಾವಣೆ ನಡೆಸದೆ ಸರ್ಕಾರ ನಾಟಕ 
* ಚುನಾಯಿತ ಜನಪ್ರತಿನಿಧಿಗಳು ಇಲ್ಲದಾಗ ಯಾವುದೇ ಮಹತ್ವದ ನಿರ್ಧಾರ ಕೈಕೊಳ್ಳುವಂತಿಲ್ಲ
* ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಕಸ ವಿಲೇವಾರಿ ಗುತ್ತಿಗೆ ನೀಡಲು ನಿರ್ಧರಿಸಿದೆ 
*  ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ, ಸಚಿವ ಸಂಪುಟದ ವಿರುದ್ಧ ಕ್ರಮ ಅಗತ್ಯ: ರಮೇಶ್

PREV
Read more Articles on
click me!

Recommended Stories

ಎಚ್‌ಡಿಕೆ ಮನುವಾದಿ ಆಗಿದ್ದಾರೆ ಎಂದ ಸಿದ್ದು: ಸಿದ್ದರಾಮಯ್ಯ ಮಜಾವಾದಿ ಎಂದ ಎಚ್‌ಡಿಕೆ
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ