Chikkamagaluru: ಕಾಡಾನೆಗಳ ಬಿಂದಾಸ್ ರೌಂಡ್ಸ್, ರೈತರಿಗೆ ತೋಟ, ಗದ್ದೆಗಳಿಗೆ ಹೋಗಲು ಆತಂಕ!

By Suvarna News  |  First Published Mar 28, 2022, 12:26 PM IST

 ವನ್ಯ ಜೀವಿಗಳು (Wild Animals)ಮಾನವನ ನಡುವೆ ಸಂಘರ್ಷ ನೆನ್ನೆ ಮೊನ್ನೆಯದಲ್ಲ ಹಲವು ದಶಕಗಳಿಂದಲೂ  ನಡೆಯುತ್ತಲೇ ಇದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ಕಳೆದ ಒಂದು ವಾರಗಳಿಂದ ಕಾಡಾನೆ ಉಪಟಳ ಹೆಚ್ಚಾಗಿದೆ. 


ಚಿಕ್ಕಮಗಳೂರು (ಮಾ. 28): ವನ್ಯ ಜೀವಿಗಳು (Wild Animals)ಮಾನವನ ನಡುವೆ ಸಂಘರ್ಷ ನೆನ್ನೆ ಮೊನ್ನೆಯದಲ್ಲ ಹಲವು ದಶಕಗಳಿಂದಲೂ  ನಡೆಯುತ್ತಲೇ ಇದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ಕಳೆದ ಒಂದು ವಾರಗಳಿಂದ ಕಾಡಾನೆ ಉಪಟಳ ಹೆಚ್ಚಾಗಿದೆ. ಕಾಡಿನಿಂದ ನಾಡಿನತ್ತ ಮುಖ ಮಾಡುತ್ತಿರುವ ಕಾಡಾನೆಗಳ ಹಾವಳಿಯಿಂದ ರೈತರು ,ಜನರಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಲೇ ಇದೆ.  ಕಳೆದ ಎರಡು ದಿನಗಳ ಹಿಂದೆ ನಡೆದಂತಹ ಅನಾಹುತದಿಂದಲೇ ಹೊರಬಂದಿಲ್ಲ ಮಲೆನಾಡಿಗರು. ಇದರ ನಡುವೆ ಈಗ ಮಲೆನಾಡಿನಲ್ಲಿ ಕಾಡಾನೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ಮನೆಮಾಡಿದೆ. 

ಮಲೆನಾಡ ಭಾಗವಾದ  ಚಿಕ್ಕಮಗಳೂರಿನಲ್ಲಿ ಕಾಡಾನೆ (Elephant)ಬಿಂದಾಸ್ ಆಗಿ ರೌಂಡ್ಸ್  ನಡೆಸುತ್ತಿದೆ.  ಅದು ಎಲ್ಲೆಂದರಲ್ಲಿ ಓಡಾಡುವ ಮೂಲಕ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳ ಹಿಂದೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ದಾಳಿ ನಡೆಸಿ ಮಹಿಳೆಯನ್ನು ಬಲಿಪಡೆದಿದ್ದು ಒಂಟಿ ಸಲಗ ಈಗ  ಗ್ರಾಮಾಂತರ ಪ್ರದೇಶಗಳಲ್ಲಿ ಓಡಾಟ  ನಡೆಸುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ತೋಟದಲ್ಲಿ ಮೆಣಸು ಕುಯ್ಯುವಾಗ ಮಹಿಳೆ ಮೇಲೆ ದಾಳಿ ನಡೆಸಿದ ಪರಿಣಾಮ  ಸರೋಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು. ಇದರ ಬೆನ್ನಲ್ಲೆ ಕಾಡಾನೆ ಈಗ ಕೆಳಗೂರು ಸೇರಿದಂತೆ  ಅಕ್ಕಪಕ್ಕದ ತೋಟಗಳಿಗೆ ಲಗ್ಗೆ ಹಾಕಿದೆ. 

Tap to resize

Latest Videos

ಮೂಡಿಗೆರೆಯ (Mudigere) ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ  ಗ್ರಾಮಗಳಿಗೆ ಕಾಡಾನೆ ಹಾವಳಿ ಜಾಸ್ತಿಯಾಗಿದೆ. ಇದರಿಂದ‌ ಮಲೆನಾಡಿನಲ್ಲಿ ಹೆಚ್ಚಿನ  ಅತಂಕ ಶುರುವಾಗಿದೆ. ಎಲ್ಲಂದರಲ್ಲಿ ಬಿಂದಾಸ್ ರೌಂಡ್ಸ್ ಹಾಕ್ತಾ ಇರೋ ಒಂಟಿ ಸಲಗವನ್ನು ನೋಡಿ ಗ್ರಾಮಸ್ಥರಲ್ಲಿ ಜೀವಭಯ ಶುರುವಾಗಿದೆ.

ಆಲ್ದೂರು,ವಸ್ತಾರೆ ಸುತ್ತಮುತ್ತ ಬಿಂದಾಸ್ ಓಡಾಟ ನಡೆಸುತ್ತಿರುವ ಹಿನ್ನಲೆ ಅಪಾರ ಪ್ರಮಾಣ ಬೆಳೆ ಸೇರಿದಂತೆ ಆಸ್ತಿ ಪಾಸ್ತಿಗಳು ನಷ್ಟವಾಗಿದೆ.ರಾಷ್ಟ್ರೀಯ ಹೆದ್ದಾರಿಯನ್ನ ದಾಟಿ ಜಮೀನುಗಳಲ್ಲಿ ಓಡಾಟ ನಡೆಸುತ್ತಿರುವ ಪರಿಣಾಮ ಕಾಫಿ, ಅಡಿಕೆ, ಬಾಳೆ ಗಿಡಿಗಳು ನಾಶವಾಗಿದೆ.ರಸ್ತೆಯನ್ನು ದಾಟಿ ತೋಟಗಳಿಗೆ ಲಗ್ಗೆ ಹಾಕುವ ಸಮಯದಲ್ಲಿ  ಕಾಡಾನೆಗಳನ್ನು‌ನೋಡಿ  ವಾಹನ ಸವಾರರಲ್ಲೂ ಭೀತಿ ಹೆಚ್ಚಳವಾಗಿದೆ.ಒಟ್ಟಾರೆ ಕಿಲ್ಲರ್ ಸಲಗದ ಓಡಾಟ ದಿನದಿಂದ ದಿನಕ್ಕೆ ಮಲೆನಾಡಿನಲ್ಲಿ ಹೆಚ್ಚಾಗುತ್ತಿದ್ದು ಜನ್ರಲ್ಲಿ ಕ್ಷಣಕ್ಕೂ ಅತಂಕ ಮನೆ ಮಾಡಿದೆ..

- ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

click me!