ಚನ್ನಪಟ್ಟಣ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾತ್ರಿ ವೇಳೆ ಆನೆ ಸಂಚಾರ..!

By Kannadaprabha News  |  First Published May 25, 2024, 11:41 AM IST

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೆಂಗಲ್, ಕುವೆಂಪು ಕಾಲೇಜು ಬಳಿಯಲ್ಲಿ ಹಳೆ ಬೆಂಗಳೂರು ಮೈಸೂರು ಹೆದ್ದಾರಿ ಒಂದು ದೊಡ್ಡ ಆನೆ ಹಾಗೂ ಎರಡು ಮರಿಆನೆಗಳು ರಾತ್ರಿ ವೇಳೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದೆ. 


ಚನ್ನಪಟ್ಟಣ(ಮೇ.25):  ತಾಲೂಕಿನ ಕೆಂಗಲ್ ಬಳಿಯ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಳೆದ ಎರಡು ಮೂರು ದಿನಗಳಿಂದ ರಾತ್ರಿ ಹೊತ್ತು ಆನೆಗಳು ಕಾಣಿಸಿಕೊಳ್ಳುತ್ತಿದ್ದು, ಪ್ರಯಾಣಿಕರು ಆತಂಕಗೊಳ್ಳುವಂತೆ ಮಾಡಿದೆ.

ತಾಲೂಕಿನ ಕೆಂಗಲ್, ಕುವೆಂಪು ಕಾಲೇಜು ಬಳಿಯಲ್ಲಿ ಹಳೆ ಬೆಂಗಳೂರು ಮೈಸೂರು ಹೆದ್ದಾರಿ ಒಂದು ದೊಡ್ಡ ಆನೆ ಹಾಗೂ ಎರಡು ಮರಿಆನೆಗಳು ರಾತ್ರಿ ವೇಳೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಗುರುವಾರ ತಡರಾತ್ರಿ ಸಹ ಆನೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕೊಂಚ ದೂರ ಗಜಗಾಂಭೀರ್ಯದಿಂದ ಸಾಗಿ ಕುವೆಂಪು ಕಾಲೇಜು ಬಳಿಯಿಂದ ಕೆಮ್ಮಣ್ಣುಗುಡ್ಡೆ ಪ್ರದೇಶದತ್ತ ಸಾಗಿದೆ. ರಸ್ತೆಯಲ್ಲಿ ಆನೆ ಸಾಗಿದ ದೃಶ್ಯವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

Tap to resize

Latest Videos

ಬಟ್ಟೆ ತೊಳೆಯಲು ಹೋದ ಮಹಿಳೆ ಕಾಲು ಜಾರಿ ಕೆರೆಗೆ ಹಾರ!

ಪ್ರಯಾಣಿಕರಿಗೆ ಆತಂಕ: 

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿಯೇ ಆನೆಗಳು ರಾತ್ರಿಹೊತ್ತು ಸಂಚರಿಸುತ್ತಿರುವುದು ಪ್ರಯಾಣಿಕರಿಗೆ ಆತಂಕ ತಂದೊಡ್ಡಿದೆ. ರಾತ್ರಿವೇಳೆ ವಾಹನ ಚಾಲನೆ ಮಾಡುವಾಗ ಆನೆ ದುತ್ತೆಂದು ಎದುರಾಗುವ ಸಂಭವವಿದ್ದು, ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ಈ ಭಾಗದ ಜನ ಆತಂಕಗೊಂಡಿದ್ದು, ಆನೆಗಳನ್ನು ಕಾಡಿಗಟ್ಟಬೇಕೆಂದು ಆಗ್ರಹಿಸಿದ್ದಾರೆ.

click me!