ಚಾಮರಾಜನಗರ: ವಕ್ರದಂತ ಹೊಂದಿದ್ದ ಕಾಡಾನೆ ಸಾವು, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಕಳೇಬರ ಪತ್ತೆ!

By Girish Goudar  |  First Published Nov 5, 2024, 10:17 AM IST

ಜನವಸತಿ ಪ್ರದೇಶದಲ್ಲಿ ಸಂಚಾರ ಮಾಡುತ್ತಿದ್ದ ಕಾಡಾನೆಯನ್ನ ಅರಣ್ಯಾಧಿಕಾರಿಗಳು ಮತ್ತೊಂದೆಡೆಗೆ ಡ್ರೈವ್ ಮಾಡಿದ್ದರು. ಯಳಂದೂರು ವನ್ಯಜೀವಿ ವಲಯದ ಕಡಿತಾಳಕಟ್ಟೆ ಗಸ್ತಿನ ವೀರನಕಾನು ಎಂಬಲ್ಲಿ ಕಾಡಾನೆಯ ಕಳೇಬರ ಪತ್ತೆಯಾಗಿದೆ.  

ಚಾಮರಾಜನಗರ(ನ.05):  ಆಗಾಗ್ಗೆ ಬಿಳಿಗಿರಿರಂಗನ ಬೆಟ್ಟದ ಪೋಡುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಕ್ರದಂತ ಹೊಂದಿದ್ದ ಕಾಡಾನೆ ಸಾವನ್ನಪ್ಪಿದೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದಲ್ಲಿ ಸಾವನ್ನಪ್ಪಿದೆ. ಮಿಸ್ಟರ್ ಬಿಆರ್‌ಟಿ ಎಂದೇ ಖ್ಯಾತಿ ಗಳಿಸಿತ್ತು ಈ ಕಾಡಾನೆ. 

ಜನವಸತಿ ಪ್ರದೇಶದಲ್ಲಿ ಸಂಚಾರ ಮಾಡುತ್ತಿದ್ದ ಕಾಡಾನೆಯನ್ನ ಅರಣ್ಯಾಧಿಕಾರಿಗಳು ಮತ್ತೊಂದೆಡೆಗೆ ಡ್ರೈವ್ ಮಾಡಿದ್ದರು. ಯಳಂದೂರು ವನ್ಯಜೀವಿ ವಲಯದ ಕಡಿತಾಳಕಟ್ಟೆ ಗಸ್ತಿನ ವೀರನಕಾನು ಎಂಬಲ್ಲಿ ಕಾಡಾನೆಯ ಕಳೇಬರ ಪತ್ತೆಯಾಗಿದೆ.  

Tap to resize

Latest Videos

ಆನೆಯ ಹಣೆ ಮೇಲೆ 2 ಇಂಚಿನಷ್ಟು ಅಗಲದ ಗುಂಡಿನ ಗುರುತು ಪತ್ತೆ?: ದಂತಗಳು ನಾಪತ್ತೆ

ಕಾಡಾನೆಯ ಮರಣೋತ್ತರ ಪರೀಕ್ಷೆಯನ್ನ ವೈದ್ಯರು ನಡೆಸಿದ್ದಾರೆ. ಸ್ವಾಭಾವಿಕ ಸಾವು ಎಂದು ಖಾತ್ರಿಯಾಗಿದೆ. ಅರಣ್ಯ ಸಿಬ್ಬಂದಿ ಮುಂದಿನ ಕ್ರಮ ವಹಿಸಲಿದ್ದಾರೆ.  

click me!