16ನೇ ಹಣಕಾಸು ಆಯೋಗ ಬೆಂಗಳೂರಿಗೆ ಭೇಟಿ ನೀಡಿದಾಗ 15ನೇ ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಗಮನ ಸೆಳೆದಿದ್ದೇವೆ. ಪ್ರತಿ ವರ್ಷ ಸುಮಾರು 4.50 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ನೀಡುತ್ತಿರುವ ನಮಗೆ ವಾಪಸ್ ಬರುವುದು ಕೇವಲ 25 ರಿಂದ 60 ಸಾವಿರ ಕೋಟಿ. ಈ ರೀತಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ನಾವು ಹೋರಾಡುತ್ತಿದ್ದೇವೆ: ಸಿಎಂ ಸಿದ್ದರಾಮಯ್ಯ
ಹುಬ್ಬಳ್ಳಿ(ನ.05): ಹಣಕಾಸು ಆಯೋಗ ಶಿಫಾರಸು ಮಾಡಿದ್ದ 11,495 ಕೋಟಿ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ನೀಡಿರುವ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಷ್ಟಪಡಿಸಿದರೆ ನಾನು ರಾಜಕೀಯ ಬಿಟ್ಟು ಬಿಡುವೆ. ಒಂದು ವೇಳೆ ಹಣ ಬಂದಿರದಿದ್ದರೆ ಜೋಶಿ ರಾಜೀನಾಮೆ ನೀಡಿ ರಾಜಕೀಯ ಬಿಡುತ್ತಾರೆಯೇ? ಎಂದು ಪ್ರಶ್ನಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಜೋಶಿ ಅವರಿಗೆ ಸವಾಲು ಹಾಕಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ 11,495 ಕೋಟಿ ವಿಶೇಷ ಅನುದಾ ನವನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದು, ಇದನ್ನು ಗ್ಯಾರಂಟಿಗೆ ಬಳಸಿ ಕೊಂಡಿದ್ದಾರೆಂಬ ಜೋತಿ ಆರೋಪಕ್ಕೆ ತಿರುಗೇಟು ನೀಡಿದರು. 'ತೆರಿಗೆ ಹಣದಲ್ಲಿ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಕೇಳಿದರೆ ರಾಜಕೀಯ ಮಾಡುತ್ತಿದ್ದಾರೆ ಎನ್ನುವವರಿಗೆ ಏನು ಹೇಳಬೇಕು?. 5 ವರ್ಷಗಳಿಗೊಮ್ಮೆ ಹಣಕಾಸು ಆಯೋಗ ರಚನೆಯಾಗುತ್ತದೆ. 15ನೇ ಹಣಕಾಸು ಆಯೋಗಕ್ಕೆ ರಾಜ್ಯಕ್ಕೆ ₹5495 ಕೋಟಿ ವಿಶೇಷ ಅನುದಾನ ಹಾಗೂ ರಿಂಗ್ ರೋಡ್ ಮತ್ತು ಕೆರೆಗಳ ಅಭಿವೃದಿಗೆ ತಲಾ ₹3,000 ಕೋಟಿ ಸೇರಿ ಒಟ್ಟು 11,495 ಕೋಟಿ ನೀಡಲು ಕೇಳಿದೆವು. ಆದರೆ, ಈವರೆಗೂ ಹಣ ಬಿಡುಗಡೆಗೊಳಿಸಿಲ್ಲ. ಇದನ್ನು ಕೇಂದ್ರ ಸಚಿವ ಜೋಶಿ ಕೇಂದ್ರಕ್ಕೆ ಕೇಳ ಬೇಕಲ್ಲವೆ?' ಎಂದು ಕಿಡಿ ಕಾರಿದರು.
undefined
ಶಿಗ್ಗಾಂವಿಯಲ್ಲಿ ನಾವೇ ಗೆಲ್ಲೋದು: ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ
ಬಿಜೆಪಿಯವರು ಮಾತನಾಡಿದ್ದಾರೆಯೇ?:
16ನೇ ಹಣಕಾಸು ಆಯೋಗ ಬೆಂಗಳೂರಿಗೆ ಭೇಟಿ ನೀಡಿದಾಗ 15ನೇ ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಗಮನ ಸೆಳೆದಿದ್ದೇವೆ. ಪ್ರತಿ ವರ್ಷ ಸುಮಾರು 4.50 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ನೀಡುತ್ತಿರುವ ನಮಗೆ ವಾಪಸ್ ಬರುವುದು ಕೇವಲ 25 ರಿಂದ 60 ಸಾವಿರ ಕೋಟಿ. ಈ ರೀತಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ನಾವು ಹೋರಾಡುತ್ತಿದ್ದೇವೆ. ಆದರೆ, ಬಿಜೆಪಿಯ ಜೋಶಿ, ಬೊಮ್ಮಾಯಿ, ಜಗದೀಶ್ ಶೆಟ್ಟರ್ ಈ ಬಗ್ಗೆ ಒಮ್ಮೆಯಾದರೂ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ನಾನು ಉಳೀಬೇಕಿದ್ದರೆ ಪಠಾಣ್ ಗೆಲ್ಲಿಸಿ: ಸಿದ್ದು
ಶಿಗ್ಗಾಂವಿ: ಇದು ಕೇವಲ ಉಪಚುನಾವಣೆ ಯಲ್ಲ. ನನಗೆ, ನನ್ನ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ನೀಡುವ ಮಹತ್ವದ ಚುನಾವಣೆ, ಕ್ಷೇತ್ರಕ್ಕೆ ಏನೂ ಕೆಲಸ ಮಾಡದ ಬಸವರಾಜ ಬೊಮ್ಮಾಯಿ ಪುತ್ರನಿಗೆ ಮತ ಹಾಕುವುದರಲ್ಲಿ ಅರ್ಥವೇ ಇಲ್ಲ.ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅವರನ್ನು ಗೆಲ್ಲಿಸಿ ನನಗೆ ಶಕ್ತಿ ನೀಡಿ. ನಾನು ಉಳಿಯಬೇಕಿದ್ದರೆ ಪಠಾಣ್ ರನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಬಿಜೆಪಿಯವರು ವಚನ ಭ್ರಷ್ಟರು, ನಾವು ನುಡಿದಂತೆ ನಡೆದಿದ್ದೇವೆ: ಸಚಿವ ಈಶ್ವರ ಖಂಡ್ರೆ
ವಕ್ಫ್ ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುತ್ತಿದೆ ಬಿಜೆಪಿ
ಹುಬ್ಬಳ್ಳಿ: ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿ ಸಿದಂತೆ ನಮ್ಮ ಕಾಂಗ್ರೆಸ್ ಸರ್ಕಾರ ರೈತರ ಪರವಿದೆ. ಈ ವಿಚಾರವಾಗಿ ನೋಟಿಸ್ ನೀಡಿದ್ದರೆ ಅದನ್ನು ಮರಳಿ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ. ಆದರೂ ಬಿಜೆಪಿಯವರು ರಾಜಕಾರಣಕ್ಕಾಗಿ ಹೋರಾಟ ಮಾಡುತ್ತಿ ದ್ದಾರೆ. ಬಿಜೆಪಿ ಕಾಲದಲ್ಲಿ ನೋಟಿಸ್ ನೀಡಿರುವ ಕುರಿತು ಏಕೆ ಮಾತನಾಡುತ್ತಿಲ್ಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.
ಕಾಲಿಗೆ ಬೀಳ್ತಿನಿ, ಮತ ನೀಡಿ: ಪಠಾಣ್
ಶಿಗ್ಗಾಂವಿ ಮುಖ್ಯಮಂತ್ರಿ ಪಾಲ್ಗೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ್ ಅವರು, ನಾವೆಲ್ಲ ಬಹಳಷ್ಟು ಜನ ಆಕಾಂಕ್ಷಿಗಳಾಗಿದ್ದೆವು. ದೇವರ ಆಶೀರ್ವಾದದಿಂದ ಒಗ್ಗಟ್ಟಾಗಿ ಬಿಜೆಪಿ ಯನ್ನು ಎದುರಿಸ್ತಿದ್ದೀವಿ. 'ಕೈ ಮುಗಿದು, ಕಾಲಿಗೆ ಬಿದ್ದು ಮನವಿ ಮಾಡಿದ್ದೀನಿ, ನನಗೆ ಮತ ನೀಡಿ' ಎಂದು ಮತ ಯಾಚಿಸಿದರು.