
ಗುಂಡ್ಲುಪೇಟೆ(ಜು.16): ಆಹಾರ ಅರಸಿ ರೈತರ ಜಮೀನಿಗೆ ಬಂದ ಕಾಡಾನೆ ವಿದ್ಯುತ್ ಶಾಕ್‌ಗೆ ರೈತರ ಜಮೀನಿನಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ರೈತ ಜಗನ್ನಾಥ್ ಎಂಬುವರು ಬೆಳೆದಿದ್ದ ಕಡ್ಲೇಕಾಯಿ ಜಮೀನಿನಲ್ಲಿ ವಿದ್ಯುತ್‌ಗೆ ಸುಮಾರು 42 ವರ್ಷದ ಹೆಣ್ಣಾನೆಯೊಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಿಂದ ಆಹಾರ ಅರಸಿ ಬಂದ ಆನೆ ಫಸಲು ತಿನ್ನಲು ಬಂದು ಸಾವನ್ನಪ್ಪಿದೆ.
ನಾಲ್ಕು ಎಕರೆ ಬೆಳೆ ನಾಶ ಮಾಡಿದ ಕಾಡಾನೆಗಳು : ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಆನೆ ಸಾವಿಗೆ ಕಾರಣವಾದ ವಿದ್ಯುತ್ ಹಾಯಿಸಿದ್ದ ತಂತಿಯನ್ನು ರೈತ ಸ್ಥಳಕ್ಕೆ ಅಧಿಕಾರಿಗಳು ಬರುವುದಕ್ಕೂ ಮುಂಚೆಯೇ ಬಿಚ್ಚಿ ಬಾವಿಯೊಂದರಲ್ಲಿ ಬಿಸಾಕಿದ್ದ ತಂತಿ ಅರಣ್ಯ ಸಿಬ್ಬಂದಿ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದು, ರೈತ ಜಗನ್ನಾಥ್ ತಲೆ ಮರೆಸಿಕೊಂಡಿದ್ದಾರೆ.