ಕಾಫಿನಾಡಲ್ಲಿ ಕಾಡಾನೆ-ಮಾನವ ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. ಆನೆ ಹಾವಳಿಗೆ ಬ್ರೇಕ್ ಹಾಕ್ಬೇಕು ಅಂದ್ರೆ ಆನೆ ಬಿಡಾರವೊಂದೇ ಅನಿವಾರ್ಯ ಎಂಬ ಆಗ್ರಹದ ಕೂಗು ಇತ್ತು. ಇದೀಗ ಸರ್ಕಾರ ಕಾಫಿನಾಡಲ್ಲೂ ಆನೆ ಶಿಬಿರ ತೆರೆಯುಲು ಮುಂದಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.23): ಕಾಫಿನಾಡಲ್ಲಿ ಕಾಡಾನೆ-ಮಾನವ ಸಂಘರ್ಷಕ್ಕೆ ದಶಕಗಳ ಇತಿಹಾಸವಿದೆ. ಆನೆ ಹಾವಳಿಗೆ ಬ್ರೇಕ್ ಹಾಕ್ಬೇಕು ಅಂದ್ರೆ ಆನೆ ಬಿಡಾರವೊಂದೇ ಅನಿವಾರ್ಯ ಎಂಬ ಆಗ್ರಹದ ಕೂಗು ಇತ್ತು. ಇದೀಗ ಸರ್ಕಾರ ಕಾಫಿನಾಡಲ್ಲೂ ಆನೆ ಶಿಬಿರ ತೆರೆಯುಲು ಮುಂದಾಗಿದೆ. ಅರಣ್ಯ ಸಚಿವರು ಕೂಡ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ವಿರೋಧದ ನಡುವೆಯೂ ಆನೆ ಶಿಬಿರ ಕಾಫಿನಾಡಿನಲ್ಲಿ ಬಹುತೇಕ ಫಿಕ್ಸ್ ಆಗಿದೆ. ಪರಿಸರವಾದಿಗಳಂತೂ ತೀವ್ರ ವಿರೋಧ ಮಾಡಿದ್ದರು. ಇದೀಗ ಎಕೋ ಟೂರಿಸಂ ಹೆಸರನಲ್ಲಿ ಆನೆ ಶಿಬಿರ ಕನ್ಪರ್ಮ್ ಆಗಿದ್ದು ಕಳಸ ತಾಲೂಕಿನ ತನೂಡಿ ಪ್ರದೇಶ ಅಂತಿಮವಾಗೋ ಸಾಧ್ಯತೆಯೇ ಹೆಚ್ಚಾಗಿದೆ.
ವಿರೋಧದ ನಡುವೆಯೂ ಆನೆ ಶಿಬಿರ ಬಹುತೇಕ ಫಿಕ್ಸ್: ಕಾಫಿನಾಡು ಚಿಕ್ಕಮಗಳೂರಲ್ಲಿ ಆನೆ ಕಾಟಕ್ಕೆ ದಶಕಗಳ ಇತಿಹಾಸವಿದೆ. ಜಿಲ್ಲೆಯ ಪ್ರಮುಖ ಸಮಸ್ಯೆಗಳಲ್ಲಿ ಇದು ಒಂದು. ಕಾಫಿನಾಡ ದಶಧಿಕ್ಕುಗಳಲ್ಲೂ ಆನೆ ಹಾವಳಿ ಇದೆ. ದಿನದಿಂದ ದಇನಕ್ಕೆ ಹೆಚ್ಚಾಗ್ತಾನೆ ಇದೆ. ಹಾಸನದ ಸಕಲೇಶಪುರದಿಂದ ಒಂದು ತಂಡ ಎಂಟ್ರಿಯಾದ್ರೆ. ಭದ್ರಾ ಅರಣ್ಯದಿಂದ ಮತ್ತೊಂದು ಟೀಂ ಬರುತ್ವೆ. ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಿಂದ ಮತ್ತೊಂದು ಹಿಂಡು ನಾಡಿನತ್ತ ಮುಖ ಮಾಡ್ತಿದೆ. ಕಾಫಿ-ಅಡಿಕೆ-ಮೆಣಸು, ಹೊಲ-ಗದ್ದೆಗಳಲ್ಲಿ ದಾಂದಲೆ ಮಾಡುತ್ತಿವೆ. ಆನೆ ಕಾಟಕ್ಕೆ ಕಾಫಿನಾಡಿನ ಜನ ಕಂಗಾಲಾಗಿದ್ದಾರೆ.
ಯುವಶಕ್ತಿಯೇ ಕಾಂಗ್ರೆಸ್ ಪಕ್ಷದ ಆಸ್ತಿ: ಮಾಜಿ ಸಂಸದ ಡಿ.ಕೆ.ಸುರೇಶ್
ಕೃಷಿ ಭೂಮಿಯನ್ನ ನಾಶ ಮಾಡ್ತಿದ್ದು ಪಟಾಕಿ ಸಿಡಿಸಿ ಓಡಿಸೋ ಕೆಲಸವಷ್ಟೆ ನಡೆಯುತ್ತಿದೆ. ಪಟಾಕಿಗಿಂತ ಆನೆಗಳನ್ನ ಸೆರೆ ಹಿಡಿದು ಆನೆ ಶಿಬಿರದಲ್ಲಿಟ್ರೆ ಕಾಡಾನೆ ಭೀತಿಯಿಂದ ತಪ್ಪಿಸಬಹುದು ಎಂಬ ಅಗ್ರಹವೂ ಇತ್ತು. ಸರ್ಕಾರ ಇದೀಗ, ಜಿಲ್ಲೆಯಲ್ಲಿ ಆನೆ ಶಿಬಿರ ಮಾಡಲು ಮುಂದಾಗಿದೆ.ಆನೆ ಶಿಬಿರಕ್ಕೆ ಕೆಲ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ವಿರೋಧದ ನಡುವೆಯೂ ಚಿಕ್ಕಮಗಳೂರು ಮೂಡಿಗೆರೆ ಕಳಸ ತಾಲೂಕಿನ ಸ್ಥಳ ಅಂತಿಮವಾಗಿದೆ. ಆನೆ ಶಿಬಿರ ಬಹುತೇಕ ಕಳಸ ತಾಲೂಕಿನ ತನೋಡಿ ಗ್ರಾಮದ ಅರಣ್ಯ ಪ್ರದೇಶದ ಸಮೀಪ ಅಗೋದು ಪಿಕ್ಸ್ ಎನ್ನಲಾಗ್ತಿದೆ..ಅರಣ್ಯ ಇಲಾಖೆಯಿಂದ ಮೂರು ಸ್ಥಳ ನಿಗದಿ ಮಾಡಿರೋದ್ರಲ್ಲಿ ಒಂದನ್ನ ಸರ್ಕಾರ ಅಂತಿಮಗೊಳಿಸುತ್ತೇ ಎನ್ನುತ್ತಿದ್ದಾರೆ.
ಎಕೋ ಟೂರಿಸಂ ಡೆವಲಪ್ಮೆಂಟ್ ಅಗುತ್ತೇ: ಇನ್ನೂ ಪರಿಸರವಾದಿಗಳ ಅರೋಪ ಅರಣ್ಯ ಪ್ರದೇಶದಲ್ಲಿ ಆನೆ ಶಿಬಿರ ಮಾಡಿದ್ರೆ ಅಲ್ಲಿ ಜನವಸತಿಯಾಗುತ್ತೇ..ಪ್ರವಾಸಿಗರು ಬರ್ತಾರೆ.ಅರಣ್ಯಕ್ಕೆ ದಕ್ಕೆಯಾಗುತ್ತೇ ಅನ್ನೋ ಅರೋಪವಿತ್ತು..ಅದ್ರೆ ಇದಕ್ಕೆ ಉತ್ತರವನ್ನೂ ಅರಣ್ಯ ಇಲಾಖೆ ನೀಡಿದೆ.ಅರಣ್ಯ ಪ್ರದೇಶದ ಅಂಚಿನಲ್ಲಿ ನೀರು ಸಮೃದ್ದಿಯಾಗಿರೋ ಕಡೆ ಆನೆ ಶಿಬಿರವಾಗುತ್ತೇ ಅಂದ್ರಿದ ಅರಣ್ಯಕ್ಕೆ ನೂ ಹಾನಿಯಾಗಲ್ಲ.ಅಲ್ಲಿ ಎಕೋ ಟೂರಿಸಂ ಡೆವಲಪ್ಮೆಂಟ್ ಅಗುತ್ತೇ. ಅಲ್ಲಿ ಕಾವಡಿಗರು, ಮಾವುತ, ವೈದ್ಯರ ತಂಡ ಆನೆಗಳಿಗೆ ಬೇಕಾದ ಆಸ್ಪತ್ರೆಯೂ ಇರುತ್ತೇ. ಎಲ್ಲಾದ್ರೂ ಕಾಡಾನೆ ಹಾವಳಿಯಾದ್ರೆ ಬೇರೆ ದುಬಾರೆ, ಸಕ್ರೇಬೈಲ್ ಅವಲಂಭಿತವಾಗೋದು ತಪ್ಪುತ್ತೇ.
ಚನ್ನಪಟ್ಟಣ ಉಪಚುನಾವಣೆ: ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ಪಕ್ಷೇತರರ ಸೆಡ್ಡು
ಇದು ಕುಮ್ಕಿ ಆನೆಗಳು ಮಾತ್ರವಲ್ಲದೆ ನುರಿತ ವೈದ್ಯರುಗಳು, ಅರವಳಿಕೆ ತಜ್ಞರು ತಕ್ಷಣವೇ ಸಿಗುವಂತಾಗುತ್ತೇ ಎಂಬುದು ಅರಣ್ಯ ಇಲಾಖೆಯ ಅಭಿಪ್ರಾಯ. ಒಟ್ಟಾರೆ, ಪ್ರತಿ ಬಾರಿ ಆನೆ ದಾಳಿ ನಡೆದಾಗಲು ಜನ ಆನೆ ಕಾಟಕ್ಕೆ ಬೇಸತ್ತು ಆನೆಯನ್ನ ಸೆರೆ ಹಿಡೀರಿ ಅಂತಾರೆ. ಓಡಿಸ್ರಿ ಅಂತಾರೆ. ಆದ್ರೆ, ಸೆರೆ ಹಿಡಿಯೋಕೆ ಶಿಬಿರದಿಂದ ಸಾಕಿದ ಆನೆಗಳೇ ಬರಬೇಕು. ಅದು ಸರ್ಕಾರಕ್ಕೆ ಖರ್ಚು. ಆದ್ರೆ, ಇಲ್ಲೇ ಶಿಬಿರ ಇದ್ರೆ ಒಳ್ಳೆದು. ಆದ್ರೆ, ಎಲ್ಲಿ ಇರಬೇಕು ಅನ್ನೋದನ್ನ ತಜ್ಞರು ತೀರ್ಮಾನಿಸಬೇಕು .ವಿರೋಧ ವ್ಯಕ್ತವಾಗಿದ್ದೇ ಆನೆ ಶಿಬಿರಕ್ಕೆ. ಅಂದು ಕಾಫಿನಾಡಲ್ಲಿ ಮಾಡಬೇಕು ಎಂಬ ಪ್ರಸ್ತಾವನೆ ಕೇಳಿಬಂದಾಗ್ಲೇ. ತೀವ್ರ ವಿರೋಧದ ನಡುವೆಯೂ ಅಂತಿಮ ಹಂತಕ್ಕೆ ಬಂದು ನಿಂತಿದ್ದು ಸರ್ಕಾರ ಫೈನಲ್ ಸ್ಥಳ ಹಾಗೂ ಡಿಪಿಆರ್ ಮಾಡೋದು ಮಾತ್ರ ಬಾಕಿ.