
ಬೆಂಗಳೂರು(ಜೂ.28): ವಿದ್ಯುತ್ ಟವರ್ ಕಾಮಗಾರಿ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದು(ಬುಧವಾರ) ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಬೆಳ್ಳಗ್ಗೆ 10ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಮೊದಲ ತ್ರೈಮಾಸಿಕದ ನಿಯತಕಾಲಿಕ ನಿರ್ವಹಣಾ ಯೋಜನೆ, ಟವರ್‌ಗಳ ನಿರ್ಮಾಣ, ಬಸ್ ಐಸೋಲೇಟರ್‌ಗಳ ನಿರ್ವಹಣೆ ಹಿನ್ನಲೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಾಳೆ ಬೆಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ: ನಿಮ್ಮ ಏರಿಯಾ ಇದೆಯಾ ನೋಡಿ
ಯಾವ್ಯಾವ ಪ್ರದೇಶದಲ್ಲಿ ಪವರ್ ಕಟ್?
ವಿಶ್ವಪ್ರಿಯ ಲೇಔಟ್, ಬೇಗೂರು ಕೊಪ್ಪ ರಸ್ತೆ, ದೇವರಚಿಕ್ಕನಹಳ್ಳಿ, ಅಕ್ಷಯನಗರ, ಪ್ರೆಸ್ಟೀಜ್ ಸಾಂಗ್ ಆಫ್ ಸೌತ್, ತೇಜಸ್ವಿನಿ ನಗರ, ಹಿರಾನಂದನಿ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಎಲಿಟಾ ಪ್ರೊಮೆನೇಡ್ ಅಪಾರ್ಟ್‌ಮೆಂಟ್‌ಗಳು, ಕೆಆರ್ ಲೇಔಟ್, ಶಾರದ ನಗರ, ಚುಂಚುಘಟ್ಟ ಮತ್ತು ಉಪ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳು, ಎಲ್ 6 ಮತ್ತು ಟಿ ಟೆಕ್ ಪಾರ್ಕ್ ಹಾರೋಬೆಲೆಯ 11 ಕಿಲೋವೋಲ್ಟ್ (ಕೆವಿ) ಉಪ ಕೇಂದ್ರಗಳು, ಕುನ್ನೂರು, ಹುಕುಂದ, ಕೋಡಿಹಳ್ಳಿ, ಬಿಜ್ಜಹಳ್ಳಿ, ಹುಣಸೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.