ಕನ್ನಡ ಚಲನಚಿತ್ರ ಕಲಾವಿದರ ಸಂಘಕ್ಕೆ ಕಳೆದ 16 ವರ್ಷಗಳಿಂದ ಚುನಾವಣೆ, ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸದೆ, ಲೆಕ್ಕ ಪರಿಶೋಧನಾ ವರದಿ ಸಲ್ಲಿಸದೆ ಅಕ್ರಮ ಕಾರ್ಯ ನಡೆಸಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.
ಬೆಂಗಳೂರು (ಆ.15): ಕನ್ನಡ ಚಲನಚಿತ್ರ ಕಲಾವಿದರ ಸಂಘಕ್ಕೆ ಕಳೆದ 16 ವರ್ಷಗಳಿಂದ ಚುನಾವಣೆ, ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಸದೆ, ಲೆಕ್ಕ ಪರಿಶೋಧನಾ ವರದಿ ಸಲ್ಲಿಸದೆ ಅಕ್ರಮ ಕಾರ್ಯ ನಡೆಸಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ. ಎನ್.ಆರ್.ರಮೇಶ್ ಸಹಕಾರ ಸಂಘಗಳ ಉಪನಿ ಬಂಧಕರು ಮತ್ತು ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕಾನೂನು ರೀತಿ ಕಾರ್ಯ ನಿರ್ವಹಿಸದೆ, ಪ್ರತಿ ವರ್ಷ ಕಾಲ ಕಾಲಕ್ಕೆ ನಡೆಸಬೇಕಿದ್ದ ಸಂಘದ ಚುನಾವಣೆ ಮತ್ತು ಸರ್ವ ಸದಸ್ಯರ ಸಾಮಾನ್ಯ ಸಭೆಗಳನ್ನು ನಡೆಸಿಲ್ಲ.
ಅಲ್ಲದೇ, ಪ್ರತಿ ವರ್ಷ ಕಡ್ಡಾಯವಾಗಿ ಸಲ್ಲಿಸಲೇಬೇಕಾದ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸದೇ ಸಹಕಾರ ಸಂಘಗಳ ನಿಯಮಗಳಿಗೆ ವಿರುದ್ಧವಾಗಿ ಸಂಘದ ಪದಾಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕೂಡ ಲೇ ಕಾನೂನು ರೀತಿ ಕ್ರಮ ವಹಿಸಬೇಕು ಮತ್ತು ಹೊಸದಾಗಿ ಕಲಾವಿದರ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಬೇಕು. ಕನ್ನಡ ಚಲನ ಚಿತ್ರ ಕಲಾವಿದರ ಸಂಘದ ಚುನಾವಣೆಯನ್ನು ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
1979ರಲ್ಲಿ ಡಾ| ರಾಜ್ ಕುಮಾರ್ ನೇತೃತ್ವದಲ್ಲಿ ಕನ್ನಡ ಚಲನಚಿತ್ರ ಕಲಾವಿದರ ಸಂಘವು ಸ್ಥಾಪನೆಯಾಗಿದ್ದು, 2007 ರವರೆಗೆ ನಿಯಮಾನುಸಾರ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ರಾಜ್‌ಕುಮಾರ್ ನಿಧನದ ನಂತರ 2008ರಿಂದ ಈವರೆವಿಗೂ ಕನ್ನಡ ಚಲನಚಿತ್ರ ಕಲಾವಿದರ ಸಂಘದ ಚುನಾವಣೆ ಯನ್ನು ನಡೆಸಿಲ್ಲ, ಪ್ರಸ್ತುತ ಸಂಘದ ಖಜಾಂ ಚಿಯಾಗಿ ನಟ ದೊಡ್ಡಣ್ಣ ಮಾತ್ರ ಗುರುತಿಸಿ ಕೊಂಡಿದ್ದು, ಬೇರೆ ಯಾವುದೇ ಕಲಾವಿದರು ಸಂಘದ ಜವಾಬ್ದಾರಿಯನ್ನು ಹೊತ್ತಿರುವ ಮಾಹಿತಿಗಳು ಲಭ್ಯವಿಲ್ಲ ಎಂದರು.
ಚಾಮುಂಡಿಬೆಟ್ಟ ದೇವಸ್ಥಾನದ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು: ಸಂಸದ ಯದುವೀರ್ ಒಡೆಯರ್
ಸಂಘದಲ್ಲಿ ಸದಸ್ಯರಾಗಿದ್ದ ಕಲಾವಿದರ ಪೈಕಿ ಬಹುತೇಕ ಕಲಾವಿದರು ಈಗಾಗಲೇ ನಿಧನ ಹೊಂದಿದ್ದು, ಪ್ರಸ್ತುತ ಸಂಘದಲ್ಲಿ ಕೇವಲ 70-80 ಜನ ಕಲಾವಿದರು ಮಾತ್ರ ಉಳಿದುಕೊಂಡಿದ್ದಾರೆ. 1.5 ದಶಕದಲ್ಲಿ ಕನ್ನಡಚಲನ ಚಿತ್ರರಂಗದಲ್ಲಿ ಸುಮಾರು 500ಕ್ಕೂ ಹೆಚ್ಚು ಹಿರಿಯ-ಕಿರಿಯ ಕಲಾವಿ ದರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದು, ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಹೊಸ ಕಲಾವಿದರನ್ನು ನೋಂದಣಿ ಮಾಡುವ ಕಾರ್ಯಕ್ಕೆ 1.5 ದಶಕದಿಂದ ಸಂಘದ ಹಾಲಿ ಪದಾಧಿಕಾರಿಗಳು ಮುಂದಾಗಿಲ್ಲ ಎಂದು ಆಪಾದಿಸಿದ್ದಾರೆ.