ಕೊರೋನಾ ನಡುವೆ ಈದ್ ಪ್ರಾರ್ಥನೆಗೆ ಅವಕಾಶ ಕೊಟ್ಟ ಸರ್ಕಾರ,  ರೂಲ್ಸ್ ಇದೆ!

Published : Jul 26, 2020, 04:12 PM ISTUpdated : Jul 26, 2020, 04:15 PM IST
ಕೊರೋನಾ ನಡುವೆ ಈದ್ ಪ್ರಾರ್ಥನೆಗೆ ಅವಕಾಶ ಕೊಟ್ಟ ಸರ್ಕಾರ,  ರೂಲ್ಸ್ ಇದೆ!

ಸಾರಾಂಶ

ಕೊರೋನಾ ನಡುವೆ ಈದ್ ಪ್ರಾರ್ಥನೆಗೆ ಅವಕಾಶ/ ಸಾಮಾಜಿಕ ಅಂತರ-ಮಾಸ್ಕ್ ಕಡ್ಡಾಯ/ ಒಂದು ಸಾರಿ  50 ಜನ ಪ್ರಾರ್ಥನೆ ಸಲ್ಲಿಸಬಹುದು/ ರಾಜ್ಯ ಸರ್ಕಾರದಿಂದ ನಿಯಮಾವಳಿ

ಬೆಂಗಳೂರು(ಜು.  26) ಕೊರೋನಾ ವೈರಸ್ ಅಬ್ಬರದ ನಡುವೆಯೂ ರಾಜ್ಯ ಸರ್ಕಾರ ಈದ್ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದೆ. ಮಸೀದಿ ಒಳಗೆ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದು ಒಂದಿಷ್ಟು ನಿಯಮಗಳನ್ನು ಸ್ಪಷ್ಟಪಡಿಸಿದೆ.

ಪ್ರಾರ್ಥನೆ ವೇಳೆ  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.  ಹಿರಿಯ ನಾಗರಿಕರಿಗೆ ಪ್ರಾರ್ಥನೆ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಮತ್ತೆ ಬೆಂಗಳೂರಿನ ಮೂರು ವಲಯಗಳು ಡೇಂಜರ್

50 ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಒಂದು ಸಾರಿಗೆ ಪ್ರಾರ್ಥನೆ ಸಲ್ಲಿಸಬೇಕು. ಪ್ರಾರ್ಥನೆ ಸಲ್ಲಿಸುವಾಗ ಮಾಸ್ಕ್ ಕಡ್ಡಾಯ. ಪ್ರಾರ್ಥನೆ ಮಾಡಲು ತಮ್ಮ ವೈಯಕ್ತಿಕ ನೆಲಹಾಸನ್ನು ತರಬೇಕು.

ಕೊರೋನಾ ವೈರಸ್ ಕಾರಣಕ್ಕೆ ಅನೇಕ ರಾಜ್ಯ ಸರ್ಕಾರಗಳು ಜನ ಒಂದೆಡೆ ಸೇರುವುದಕ್ಕೆ ನಿರ್ಬಂಧ ಹಾಕಿವೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ  90 ಸಾವಿರ ಈಗಾಗಲೆ ದಾಟಿದೆ. ಕರ್ನಾಟಕಲ್ಲಿ ಪ್ರತಿದಿನ ಐದು ಸಾವಿರ ಕೇಸು ದಾಖಲಾಗುತ್ತಿದ್ದರೆ ಬೆಂಗಳೂರಿನಲ್ಲಿ ಎರಡು ಸಾವಿರ ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. 

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ