ನಗರದ ಉದ್ಯಮಿ ಹಾಗು ಶಿಕ್ಷಣ ಪ್ರೇಮಿ ಕೆಂದೋಳಿ ಕೃಷ್ಣಪ್ಪ (63) ಹೃದಯಘಾತದಿಂದ ಬುಧವಾರ ಮದ್ಯಾಹ್ನ ತಮ್ಮ ನಿವಾಸದಲ್ಲಿ ನಿಧನರಾದರು, ಪತ್ನಿ, ಪುತ್ರ ರಾಮಚರಣ ಕೆಂದೋಳಿ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಬಿಟ್ಟು ಅಗಲಿದ್ದಾರೆ.
ಗಂಗಾವತಿ (ಅ.11): ನಗರದ ಉದ್ಯಮಿ ಹಾಗು ಶಿಕ್ಷಣ ಪ್ರೇಮಿ ಕೆಂದೋಳಿ ಕೃಷ್ಣಪ್ಪ (63) ಹೃದಯಘಾತದಿಂದ ಬುಧವಾರ ಮದ್ಯಾಹ್ನ ತಮ್ಮ ನಿವಾಸದಲ್ಲಿ ನಿಧನರಾದರು, ಪತ್ನಿ, ಪುತ್ರ ರಾಮಚರಣ ಕೆಂದೋಳಿ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಬಿಟ್ಟು ಅಗಲಿದ್ದಾರೆ. ಶಿಕ್ಷಣ ಪ್ರೇಮಿಗಳಾಗಿದ್ದ ಕೊಂದೋಳಿ ಕೃಷ್ಣಪ್ಪ ಅವರು 2001 -02 ರಲ್ಲಿ ಶ್ರೀ ಕಂದೋಳಿ ರಾಮಣ್ಣ ಆಂಗ್ಲ ಮತ್ತು ಕನ್ನಡ ಶಾಲೆ ಪ್ರಾರಂಭಿಸಿದ್ದರು.
ಈ ಮೊದಲು ಬೇಬಿ ತರಗತಿಯಿಂದ ಮೆಟ್ರಿಕ್ ಪ್ರಾರಂಭಿಸಿ ನಂತರ ಪಿಯು ಸೈನ್ಸ್ ಕಾಲೇಜು ಪ್ರಾರಂಭಿಸಿದ್ದರು. ಪ್ರತಿ ವರ್ಷ ಮೆಟ್ರಿಕ್ ಮತ್ತು ಪಿಯು ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರಲು ಕಾರಣರಾಗಿದ್ದರು. ಜೊತೆಗೆ ಯೋಗ ಶಿಬಿರ ಏರ್ಪಡಿಸಿ ರಾಜ್ಯಕ್ಕೆ ಮಾದರಿಯಾಗಿದ್ದರು. ಕೃಷ್ಣಪ್ಪ ಅವರು ಉದ್ಯಮಿಯಾಗಿದ್ದರು ಸಹ ಶಿಕ್ಷಣ ಕ್ಷೇತ್ರದ ಕಡೆಗೆ ಹೆಚ್ಚು ಒತ್ತು ನೀಡಿದ್ದರು. ಕೆಲ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಕಡಿಮೆ ಶುಲ್ಕ ಪಡೆದು ಪ್ರವೇಶ ನೀಡಿದ್ದರು. ಇವರ ಅಂತ್ಯಕ್ರೀಯೆ ಗುರುವಾರ ಮದ್ಯಾಹ್ನ 3 ಗಂಟೆಗೆ ಜರುಗಲಿದೆ.
undefined
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬುರುಡೆ ರಾಜ: ಶಾಸಕ ಎಚ್.ಸಿ.ಬಾಲಕೃಷ್ಣ
ಹಿರಿಯ ಪತ್ರಕರ್ತ ಪ್ರಹ್ಲಾದರಾವ್ ನಿಧನ: ಕೋಲಾರ ಜಿಲ್ಲೆಯ ಮೊದಲ ಸ್ಥಳೀಯ ದಿನ ಪತ್ರಿಕೆಯಾದ ಕೋಲಾರ ಪತ್ರಿಕೆಯ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ಕೆ.ಪ್ರಹ್ಲಾದರಾವ್ (80) ಸೋಮವಾರ ತಡರಾತ್ರಿ ನಿಧನರಾದರು. ಕಳೆದ 40 ವರ್ಷದಿಂದ ಕೋಲಾರ ಪತ್ರಿಕೆ ಜಿಲ್ಲೆಯ ಮನೆ ಮಾತಾಗಿ, ಸ್ಥಳೀಯ ಪತ್ರಿಕೋದ್ಯಮ ಬೆಳವಣಿಗೆಗೆ ಪ್ರಹ್ಲಾದರಾವ್ ಸ್ಫೂರ್ತಿಯಾಗಿದ್ದರು. ಇವರು ಪತ್ರಿಕೋದ್ಯಮದ ಜತೆ ಕೋಲಾರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಕೊಡುಗೆ ನೀಡುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ.
ಮೃತರು ತಮ್ಮ ಪತ್ನಿ ವಾಣಿ, ಮಕ್ಕಳಾದ ಸುಹಾಸ್, ಡಾ.ನರೇನ್, ಸುಮಾ, ಸುಚೇತಾ ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕೋಲಾರದ ಹಿಂದು ರುದ್ರಭೂಮಿಯಲ್ಲಿ ಮಂಗಳವಾರ ನಡೆಯಿತು. ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್‌ಸಿ ಅನಿಲ್‌ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಸೇರಿದಂತೆ ಹಲವಾರು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.