ಲಕ್ಷ್ಮೀಗೆ ಕೋಟಿ ಕೋಟಿ ಸಾಲ : ಕಾಂಗ್ರೆಸ್ ಮುಖಂಡ ರಾಜಣ್ಣಗೆ ಸಂಕಷ್ಟ

By Suvarna NewsFirst Published Oct 1, 2019, 12:04 PM IST
Highlights

ತುಮಕೂರು ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣಗೆ ಸಂಕಷ್ಟ ಎದುರಾಗಿದೆ.ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೋಟಿ ಕೋಟಿ ಸಾಲ ನೀಡಿದ್ದಾರೆಂದು ನೋಟಿಸ್ ನೀಡಲಾಗಿದೆ.

ತುಮಕೂರು [ಅ.01]: ಮಾಜಿ ಶಾಸಕ ತುಮಕೂರು ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣಗೆ ಇಡಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 

ಅಕ್ಟೋಬರ್ 9 ರಂದು ಬೆಳ್ಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನಲ್ಲಿ ನಿಖರ ಮಾಹಿತಿ ನೀಡಿದ್ದಾರೆ. ಹರ್ಷ ಶುಗರ್ಸ್ ಗೆ ಸಾಲ ನೀಡಿರೋ ಶಂಕೆ ಹಿನ್ನೆಲೆ ‌ನೋಟಿಸ್ ಜಾರಿ ಮಾಡಲಾಗಿದ್ದು,  ಸೆಪ್ಟೆಂಬರ್ 24 ರಂದು ಕೋರಿಯರ್ ಮೂಲಕ ನೋಟಿಸ್ ತಲುಪಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ತಂಡದ ಮಾಲಿಕತ್ವದ ಹರ್ಷ ಶುಗರ್ಸ್ ಕಂಪನಿಗೆ  ಡಿಸಿಸಿ ಬ್ಯಾಂಕ್ ನಿಂದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿರುವ ರಾಜಣ್ಣ ಸುಮಾರು 300ಕೋಟಿ ರು. ಸಾಲ ನೀಡಿದ್ದಾರೆ ಎಂದು ನೋಟಿಸ್ ನೀಡಲಾಗಿದೆ. 

ತಾಯಿ ಸಂಕಷ್ಟಕ್ಕೆ ಕಣ್ಣೀರಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ!...

ಒಂದು ತಿಂಗಳ ಹಿಂದಷ್ಟೇ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅಕ್ರಮ ಹಣ ಸಂಗ್ರಹಣೆ ಆರೋಪದ ಅಡಿಯಲ್ಲಿ ಬಂಧಿಸಿ ವಿಚಾರಣೆ ನಡೆಸಿದ್ದು, ಸದ್ಯ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಇದಾದ ಬಳಿಕ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನೂ ಕೂಡ ಇಡಿ ಯಿಂದ ವಿಚಾರಣೆ ನಡೆಸಲಾಗಿತ್ತು. ಕೊಟ್ಯಂತರ ಹಣ ಪಡೆದ ಆರೋಪದ ಅಡಿಯಲ್ಲಿ ಈ ವಿಚಾರಣೆ ನಡೆದಿತ್ತು. 

ಮರಾಠಿ ಮಾತನಾಡಿದ್ದನ್ನು ಕೇಳಿದ್ದಕ್ಕೆ ಹೆಬ್ಬಾಳ್ಕರ್ ಪುತ್ರನಿಂದ ಯುವಕನಿಗೆ ಧಮ್ಕಿ!...

ಇದೀಗ ತುಮಕೂರು ಕ್ಷೇತ್ರದ ಮಾಜಿ ಶಾಸಕ ರಾಜಣ್ಣ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೋಟಿ ಕೋಟಿ ಸಾಲ ನೀಡಿರುವ ಆರೋಪದ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. 

click me!