ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಭೂ ಕಂಪನವಾಗಿದ್ದು, ಹಲವು ಮನಯ ಗೋಡೆಗಳು ಕುಸಿದು ಬಿದ್ದಿವೆ. ಜನರು ಭಯದಿಂದ ಮನೆ ಬಿಟ್ಟು ಹೊರಗೆ ತೆರಳಿದ್ದಾರೆ.
ಬಸವನಬಾಗೇವಾಡಿ/ಕಲಬುರಗಿ (ಸೆ.18): ವಿಜಯಪುರ ಜಿಲ್ಲೆಯ ಬ.ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಮತ್ತು ಚಿಂಚೋಳಿ ತಾಲೂಕಿನ ಇಂದ್ರಪಾಡಹೊಸಳ್ಳಿ ಗ್ರಾಮದಲ್ಲಿ ಭೂ ಕಂಪನದ ಅನುಭವವಾಗಿದೆ.
ಆದರೆ, ಅಧಿಕಾರಿಗಳು ಭೂಕಂಪನ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮನಗೂಳಿಯಲ್ಲಿ ಬುಧವಾರ ರಾತ್ರಿ ಸುಮಾರು 11.30ಕ್ಕೆ ಭೂಕಂಪನ ಆಗಿರುವ ಅನುಭವವಾಗಿದೆ. ಈ ವೇಳೆ ಜನರು ಹೆದರಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಭೂಕಂಪನವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಇಂದ್ರಪಾಡಹೊಸಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಭಾರಿ ಶಬ್ದ ಉಂಟಾಗಿ ಭೂಕಂಪನದ ಅನುಭವವಾಗಿದೆ.
ವಿಜಯಪುರದಲ್ಲಿ ಭೂ ಕಂಪನ; ಕಲಬುರ್ಗಿಯಲ್ಲಿ ಭಾರಿ ಸದ್ದು ...
6 ಮನೆ ಗೋಡೆಗಳು ಕುಸಿದು ಬಿದ್ದಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಚಿಂಕೋಳಿ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಭಾರಿ ಶಬ್ದ ಉಂಟಾಗಿರುವುದು ಭೂ ಕಂಪನದಿಂದಲ್ಲ. ಭೂಮಿಯ ಒಳಪದರು ಜೋಡಣೆ ಆಗುವ ಸಂದರ್ಭದಲ್ಲಿ ಭೂಮಿಯಿಂದ ಶಬ್ದ ಬರುತ್ತದೆ ಎಂಬುದು ಭೂ ವಿಜ್ಞಾನಿಗಳ ಅಭಿಪ್ರಾಯವಾಗಿದೆ ಎಂದರು.