ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೆ ಭೂಕಂಪನ, ಬೆಚ್ಚಿಬಿದ್ದ ಜನತೆ..!

Published : Apr 21, 2023, 02:00 AM IST
ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೆ ಭೂಕಂಪನ, ಬೆಚ್ಚಿಬಿದ್ದ ಜನತೆ..!

ಸಾರಾಂಶ

ದೊಡ್ಡ ಶಬ್ದದೊಂದಿಗೆ ಭೂಕಂಪನವಾಗಿದೆ. ಹಲವು ಜನರು ಮನೆಯಿಂದ ಹೊರ ಬಂದು ರಸ್ತೆಯಲ್ಲಿ ನಿಂತಿದ್ದಾರೆ. ಕಳೆದ ಹಲವು ತಿಂಗಳು ಭೂಕಂಪವಾದಾಗ ಈ ರೀತಿ ಶಬ್ದ ಬಂದಿರಲಿಲ್ಲ. ಈ ಬಾರಿ ದೊಡ್ಡ ಶಬ್ದಗಳೊಂದಿಗೆ ಭೂಕಂಪನದ ಅನುಭವ ಎಲ್ಲರಿಗೂ ಆಗಿದೆ.

- ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಏ.21): ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನವಾಗಿದೆ. ಬುಧವಾರ ರಾತ್ರಿ 10-45 ಸುಮಾರಿಗೆ ಭೂಕಂಪನದ ಅನುಭವ ನಗರದ ಜನತೆಗೆ ತಟ್ಟಿದೆ. ಈ ಬಗ್ಗೆ ದೊಡ್ಡ ಶಬ್ದದೊಂದಿಗೆ ಭೂಕಂಪನವಾಗಿದೆ. ಹಲವು ಜನರು ಮನೆಯಿಂದ ಹೊರ ಬಂದು ರಸ್ತೆಯಲ್ಲಿ ನಿಂತಿದ್ದಾರೆ. ಕಳೆದ ಹಲವು ತಿಂಗಳು ಭೂಕಂಪವಾದಾಗ ಈ ರೀತಿ ಶಬ್ದ ಬಂದಿರಲಿಲ್ಲ. ಈ ಬಾರಿ ದೊಡ್ಡ ಶಬ್ದಗಳೊಂದಿಗೆ ಭೂಕಂಪನದ ಅನುಭವ ಎಲ್ಲರಿಗೂ ಆಗಿದೆ.

ಭೂಕಂಪನ ಕೇಂದ್ರದಿಂದ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಎರಡು ಬಾರಿ ಭೂ ಕಂಪನದ ಅನುಭವ ಜನರಿಗೆ ಆಗಿದೆ. ಕಳೆದ ಎರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನವಾಗುತ್ತಲೇ ಬಂದಿದೆ. 

ಇಂಡೋನೇಷಿಯಾದಲ್ಲಿ ಕಂಪಿಸಿದ ಭೂಮಿ, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲು

ಈ ಕುರಿತು ಜಿಲ್ಲಾಡಳಿತದ ಮನವಿಗೆ ಭೂಕಂಪನ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದರು. ಆಲಮಟ್ಟಿ ಜಲಾಶಯವಿರುವ ಕಾರಣ ಭೂಕಂಪನವಾಗುವದು ಸಹಜ, ಇದಕ್ಕೆ ಯಾರು ಹೆದರುವ ಅವಶ್ಯಕತೆ ಇಲ್ಲವೆಂದು ಭರವಸೆ ನೀಡಿದ್ದರು. ಆದರೂ ಸಹ ಭೂಕಂಪನದ ಶಬ್ದ ಮಾತ್ರ ಕಡಿಮೆಯಾಗಿಲ್ಲ. ನಿನ್ನೆ(ಗುರುವಾರ) ಸಹ ಸಂಜೆ ಮಳೆ ಸುರಿದ ಮೇಲೆ ವಿಜಯಪುರ ನಗರದ ಹಲವು ಕಡೆ ಭೂಕಂಪನ ಅನುಭವನ್ನು ಸಾರ್ವಜನಿಕರು ಅನುಭವಿಸಿದ್ದಾರೆ.

PREV
Read more Articles on
click me!

Recommended Stories

ದೀಪಾಂಜಲಿ ನಗರ ಜಂಕ್ಷನ್‌ನ ಬಳಿಯ ನೈಸ್‌ ರಸ್ತೆ ಸಾರ್ವಜನಿಕರಿಗೆ ಶೀಘ್ರ ಮುಕ್ತ
ಬೆಂಗಳೂರಿನ ಬೀದಿ ನಾಯಿಗಳಿಗೆ ಪ್ರತಿನಿತ್ಯ 2 ಬಾರಿ ಚಿಕನ್‌ ರೈಸ್‌ !