ರೇಷ್ಮೆ ಬೆಳೆಗಾರರಿಗೆ ಸರ್ಕಾರದ ಗುಡ್ ನ್ಯೂಸ್

By Kannadaprabha NewsFirst Published Jan 21, 2021, 11:33 AM IST
Highlights

ಇಷ್ಟು ದಿನಗಳ ಕಾಲ ರೇಷ್ಮೆ ಮಾರುಕಟ್ಟೆಯಲ್ಲಿ ಆಗುತ್ತಿದ್ದ ಅನ್ಯಾಯ ಸರಿಪಡಿಸುವ ಸಲುವಾಗಿ  ಹೊಸ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದರಿಂದ ಬೆಳೆಗಾರರಲ್ಲಿ ಹರ್ಷ ಮೂಡಿದೆ. 

ರಾಮನಗರ (ಜ.21):  ರೇಷ್ಮೆ ಬೆಳೆ​ಗಾ​ರ​ರಿಗೆ ಆಗು​ತ್ತಿದ್ದ ಅನ್ಯಾಯ ಸರಿ​ಪ​ಡಿ​ಸಲು ರಾಜ್ಯ ಸರ್ಕಾರ ಎಲ್ಲ ಸರ್ಕಾರಿ ರೇಷ್ಮೆಗೂಡು ಮಾರು​ಕ​ಟ್ಟೆ​ಯಲ್ಲಿ ಬುಧ​ವಾ​ರ​ ಜಾರಿಗೆ ತಂದಿ​ರುವ ಇ-ಪೇಮೆಂಟ್‌ ವ್ಯವಸ್ಥೆ ಅಧಿ​ಕಾ​ರಿ​ಗಳು ಹಾಗೂ ರೀಲರ್ಸ್‌ಗಳ ನಡುವೆ ಜಟಾ​ಪ​ಟಿಗೆ ಕಾರ​ಣ​ವಾ​ಗಿ​ದೆ.

ರೇಷ್ಮೆ ಇಲಾಖೆ ಆಯು​ಕ್ತರು ಮತ್ತು ಕಾರ್ಯ​ದ​ರ್ಶಿ​ಗಳು ಸರ್ಕಾರಿ ರೇಷ್ಮೆಗೂಡು ಮಾರು​ಕ​ಟ್ಟೆ​ಯಲ್ಲಿ ಇ-ಪೇಮೆಂಟ್‌ ವ್ಯವಸ್ಥೆ ತಕ್ಷ​ಣ​ದಿಂದಲೇ ಜಾರಿಗೆ ತರು​ವಂತೆ ಆದೇಶ ಹೊರ​ಡಿ​ಸಿ​ದ್ದಾರೆ. ಇದು ಬೆಳೆ​ಗಾ​ರ​ರಲ್ಲಿ ಸಂತಸ ತಂದಿ​ದ್ದರೆ, ರೀಲರ್ಸ್‌ಗಳನ್ನು ಕೆರ​ಳಿ​ಸಿ​ದೆ. ರೇಷ್ಮೆ ಮಾರುಕಟ್ಟೆಯಲ್ಲಿ ನಗದು ನೀಡಿ ವಹಿವಾಟು ನಡೆಯುತ್ತಿತ್ತು. ಈ ವೇಳೆ ಸಾಕಷ್ಟುಪ್ರಮಾಣದಲ್ಲಿ ರೇಷ್ಮೆ ಬೆಳೆಗಾರರಿಗೆ ಅನ್ಯಾಯವಾಗುತ್ತಿತ್ತು. ಇದನ್ನು ತಡೆಗಟ್ಟುವ ಸಲುವಾಗಿಯೇ ಸರ್ಕಾರ ಇ- ಪೇಮೆಂಟ್‌ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಆದೇಶ ಹೊರಡಿಸಿದೆ.

ನಾಜೂಕು ರೇಷ್ಮೆ ಸೀರೆಗಳನ್ನು ಹೇಗೆ ರಕ್ಷಿಸ್ತೀರಿ..? ಇಲ್ಲಿವೆ ಕೆಲವು ಸರಳ ಸಲಹೆಗಳು

ಇ-ಪೇಮೆಂಟ್‌ ಆದೇಶವನ್ನು ಕಡ್ಡಾಯವಾಗಿ ಪಾಲನೆ ಮಾಡುವ ಸಲುವಾಗಿ ರಾಜ್ಯದ ಎಲ್ಲ ರೇಷ್ಮೆ ಮಾರುಕಟ್ಟೆಗಳ ಉಪ ನಿರ್ದೇಶಕರು, ಕಳೆದ ಹತ್ತು ದಿನಗಳಿಂದ ಮಾರುಕಟ್ಟೆಯ ಆವರಣದಲ್ಲಿ, ಧ್ವನಿವರ್ಧಕ, ಭಿತ್ತಿಪತ್ರಗಳು ಹಾಗೂ ಇತರೆ ಸಾಧನ ಸಲಕರಣೆಗಳ ಮೂಲಕ ಸಾಕಷ್ಟುಪ್ರಚಾರ ನಡೆಸಿದ್ದಾರೆ. ಆದರೂ ರೀಲರ್ಸ್‌ಗಳಿಂದ ಸಹಕಾರ ವ್ಯಕ್ತವಾಗುತ್ತಿಲ್ಲ ಎಂಬುದು ರೇಷ್ಮೆ​ಗೂಡು ಮಾರು​ಕ​ಟ್ಟೆಅಧಿಕಾರಿಗಳ ಉತ್ತರ.

ರೀಲರ್ಸ್‌ಗಳಿಂದ ಗಲಾಟೆ:  ಏಷ್ಯಾ ಖಂಡದಲ್ಲಿಯೇ ಅತೀ ಹೆಚ್ಚು ರೇಷ್ಮೆ ವಹಿವಾಟು ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ನಡೆ​ಯು​ತ್ತದೆ. ಈ ಮಾರು​ಕ​ಟ್ಟೆ​ಯ​ಲ್ಲಿಯೂ ಇ-ಪೇಮೆಂಟ್‌ ವ್ಯವಸ್ಥೆ ಜಾರಿ ಕುರಿತು ರೀಲರ್ಸ್‌ಗಳು ಗಲಾಟೆ ನಡೆಸಿದ್ದಾರೆ.

ಒಂದೂವರೆ ವರ್ಷ ಕೃಷಿ ಕಾಯ್ದೆ ಜಾರಿ ಸ್ಥಗಿತ? ...

ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಮೊದಲು ರೀಲರ್ಸ್‌ಗಳ ಕುಂದು ಕೊರತೆಯನ್ನು ಆಲಿಸಿ ಬಗೆ​ಹ​ರಿ​ಸಿದ ನಂತರ ಇ-ಪೇಮೆಂಟ್‌ ವ್ಯವಸ್ಥೆ ಜಾರಿಗೆ ತರ​ಬೇ​ಕು ಎಂದು ರೀಲರ್ಸ್‌ಗಳು ​ಮಾ​ರು​ಕಟ್ಟೆಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದ್ದಿದ್ದಾರೆ. ರೇಷ್ಮೆ ಬೆಳೆಗಾರರನ್ನು ಸರ್ಕಾರ ಪರಿಗಣಿಸಿದಂತೆ ಗೂಡು ಖರೀದಿ ಮಾಡುವ ರೀಲರ್ಸ್‌ಗಳ ಸಮಸ್ಯೆಗಳಿ​ಗೂ ಪರಿಹಾರ ಕಲ್ಪಿ​ಸ​ಬೇಕು ಎಂದು ಆಗ್ರಹಿಸಿ ರೀಲರ್ಸ್‌ಗಳು ರೇಷ್ಮೆ ಇಲಾಖೆಯ ಆಯುಕ್ತರು ಹಾಗೂ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮನವಿ ಸಹ ಸಲ್ಲಿಸಿದ್ದಾರೆ.

ಗೂಡು ಖರೀದಿ ಮಾಡಿದ ಐದು ದಿನದೊಳಗೆ ಹಣ ಪಾವತಿ ಮಾಡಲು ಅವಕಾಶ ಮಾಡಿಕೊಡುವುದು ಸೇರಿ​ದಂತೆ ಸಮ​ಸ್ಯೆ​ಗ​ಳನ್ನು ಬಗೆ​ಹ​ರಿ​ಸು​ವಂತೆ ರೀಲರ್ಸ್‌ಗಳು ಬೇಡಿಕೆ ಪಟ್ಟಿಯನ್ನು ಆಯುಕ್ತರಿಗೆ ಸಲ್ಲಿಸಿ​ದ್ದಾ​ರೆ. ಮಾರು​ಕ​ಟ್ಟೆ​ಯಲ್ಲಿ ಬುಧವಾರ ನಡೆದ ಗಲಾಟೆಯನ್ನು ಸರಿದೂಗಿಸುವ ಸಲುಗಾಗಿ ರೇಷ್ಮೆ ಮಾರುಕಟ್ಟೆಅಧಿಕಾರಿಗಳು ಬೆ​ಳೆ​ಗಾ​ರರು ಹಾಗೂ ರೀಲರ್ಸ್‌ಗಳ ಸಭೆ ಆಯೋಜನೆ ಮಾಡಿದ್ದರು. ಈ ವೇಳೆ ರೀಲರ್ಸ್‌ಗಳು ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ತಿಳಿ​ದು ​ಬಂದಿದೆ.

click me!