* ಪಿಎಸ್‌ಐ ಪರೀಕ್ಷೆ ಕಳ್ಳಾಟ
* ಮನೆ ಕಟ್ಟಿಸುತ್ತಿದ್ದ ರೇವೂರ್‌ಗೆ ರುದ್ರಗೌಡ ನೆರವು
* ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ
ಕಲಬುರಗಿ(ಜು.12): ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದಲ್ಲಿ 29ನೇ ಆರೋಪಿಯಾಗಿ ಜೈಲು ಸೇರಿರುವ ಕೆಎಸ್‌ಆರ್‌ಪಿ 6ನೇ ಬೆಟಾಲಿಯನ್ ಸಹಾಯಕ ಕಮಾಂಡೆಂಟ್, ಡಿವೈಎಸ್ಪಿ ವೈಜನಾಥ ರೇವೂರ್, ಬಿಟ್ಟಿ ಕಟ್ಟಡ ಸಾಮಗ್ರಿಗಾಗಿ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದರು ಎಂಬ ಸ್ವಾರಸ್ಯಕರ ಸಂಗತಿ ಸಿಐಡಿ ತನಿಖೆಯಿಂದ ಬೆಳಕಿಗೆ ಬಂದಿದೆ.
ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ ತಂಡ ತನ್ನ ವರದಿಯಲ್ಲಿ ಈ ಸಂಗತಿಯನ್ನು ಪ್ರಧಾನವಾಗಿ ಉಲ್ಲೇಖಿಸಿದೆ. ಡಿವೈಎಸ್ಪಿ ವೈಜನಾಥ ರೇವೂರ್ ಇಲ್ಲಿನ ರಿಂಗ್ ರಸ್ತೆಯಲ್ಲಿ ಮನೆ ನಿಮಾಣಕ್ಕೆ ಮುಂದಾಗಿದ್ದರು. ಮನೆ ಕಟ್ಟಲು ಬೇಕಾದ ಮರಳು, ಇಟ್ಟಿಗೆ, ಕಬ್ಬಿಣ ಪಡೆಯಲು ಇವರಿಗೆ ಹಗರಣದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ನೆರವಾಗಿದ್ದ. ಇವನ್ನೆಲ್ಲಾ ಸಂಪೂರ್ಣ ಉಚಿತವಾಗಿ ಒದಗಿಸುವುದಾಗಿ ಹೇಳಿ ಅದರಂತೆಯೇ ನಿಭಾಯಿಸಿದ್ದನೆಂಬ ಸಂಗತಿ ವರದಿಯಲ್ಲಿ ನಮೂದಾಗಿದೆ.
undefined
PSI Scam: ಎಡಿಜಿಪಿ ಅಮೃತ್ ಪಾಲ್, ಡಿವೈಎಸ್ಪಿ ದುಡ್ಡಿನ ಡೀಲ್ ಬಗ್ಗೆ ಸಿಐಡಿ ತನಿಖೆ
ಕಟ್ಟಡ ನಿರ್ಮಾಣ ಸಾಮಗ್ರಿ ಉಚಿತವಾಗಿ ಪಡೆದುದಕ್ಕೆ ಪ್ರತಿಯಾಗಿ ಡಿವೈಎಸ್ಪಿ ವೈಜನಾಥ ರೇವೂರ್ ಪಿಎಸ್‌ಐ ಪರೀಕ್ಷೆಯಲ್ಲಿ ರುದ್ರಗೌಡನ ಅಕ್ರಮಕ್ಕೆ ನೇರವಾಗಿದ್ದನೆಂಬ ಸಂಗತಿಯೂ ವರದಿಯಲ್ಲಿ ನಮೂದಾಗಿದೆ.