* ಹುಬ್ಬಳ್ಳಿ ನಗರದ ಶೀಲವಂತರ ಓಣಿಯಲ್ಲಿ ನಡೆದ ಘಟನೆ
* ಮಳೆಯಿಂದ ತುಂಬಿ ಹರಿಯುತ್ತಿರುವ ಬಹುತೇಕ ಚರಂಡಿಗಳು
* ಸುದ್ದಿ ತಿಳಿಯುತ್ತಿದ್ದಂತೆಯೇ ದೌಡಾಯಿಸಿದ ಸ್ಥಳೀಯರು
ಹುಬ್ಬಳ್ಳಿ(ಜು.12): ಮಳೆಯಿಂದ ವಾಣಿಜ್ಯನಗರಿ ಹುಬ್ಬಳ್ಳಿಯ ಬಹುತೇಕ ಚರಂಡಿಗಳು ತುಂಬಿ ಹರಿಯುತ್ತಿದ್ದು, ಆಕಳೊಂದು ಆಯತಪ್ಪಿ ತೆರೆದ ಚರಂಡಿಗೆ ಬಿದ್ದಿರುವ ಪರಿಣಾಮ ಸ್ಥಳೀಯರೇ ಗೋಮಾತೆಯನ್ನ ರಕ್ಷಣೆ ಮಾಡಿರುವ ಘಟನೆ ನಗರದ ಶೀಲವಂತರ ಓಣಿಯಲ್ಲಿ ನಡೆದಿದೆ.
ಸುಮಾರು ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಮಾತ್ರವಲ್ಲದೆ ಬೀದಿ ದನಗಳು ಕೂಡ ಕಂಗಾಲ ಆಗಿದ್ದು, ಈ ಹಿನ್ನೆಲೆಯಲ್ಲಿ ಆಹಾರ ಅರಸಿಕೊಂಡು ಹೋಗಿದ್ದ ಜಾನುವಾರೊಂದು ಬಿದ್ದು, ಸಾವು ಬದುಕಿನ ಮಧ್ಯ ಹೋರಾಟ ನಡೆಸಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ದೌಡಾಯಿಸಿದ ಸ್ಥಳೀಯರು ಜಾನುವಾರು ರಕ್ಷಣೆ ಮಾಡಿ ಚಿಕಿತ್ಸೆ ನೀಡಿದ್ದಾರೆ.
ಇದು ನಮ್ಮ ಭಾರತ; ಮುಸ್ಲಿಂ ಯುವಕನಿಗೆ ಹಿಂದೂ ಬಾಲಕಿಯ ಹೃದಯ ಕಸಿ!
ಈಗಾಗಲೇ ಬಹುತೇಕ ಕಡೆಯಲ್ಲಿ ಚರಂಡಿ ಅವ್ಯವಸ್ಥೆಯಿಂದ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಕೂಡಲೇ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ.