ಕೊಡಗು: ಗುಂಡು ಹಾರಿಸಿಕೊಂಡು ಕಾಫಿ ವ್ಯಾಪಾರಿ ಆತ್ಮಹತ್ಯೆ

By Web Desk  |  First Published Sep 27, 2019, 11:21 PM IST

ಗುಂಡು  ಹೊಡೆದುಕೊಂಡು ಕಾಫಿ ವ್ಯಾಪಾರಿ ಆತ್ಮಹತ್ಯೆ/ ಅಚ್ಚಿಯಂಡ ಎಸ್. ಸುನೀಲ್ (36) ಆತ್ಮಹತ್ಯೆಗೆ ಶರಣು/ ತಮ್ಮ ರಿವಾಲ್ವರ್ ನಿಂದ ಗುಂಡು ಹೊಡೆದುಕೊಂಡು  ಆತ್ಮಹತ್ಯೆ


ಮಡಿಕೇರಿ [ಸೆ. 27]  ದಕ್ಷಿಣ ಕೊಡಗಿನ ಹುದಿಕೇರಿಯ ಪಟ್ಟಣದಲ್ಲಿ ಕಾಫಿ  ಮತ್ತು ಕಾಳುಮೆಣಸು ವ್ಯಾಪಾರಿ ಅಚ್ಚಿಯಂಡ ಎಸ್. ಸುನೀಲ್ (36)ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹುದಿಕೇರಿಯ ಮುಖ್ಯರಸ್ತೆಯಲ್ಲಿರುವ ಅವರ ಕಾಫಿ ಮಿಲ್  ಆವರಣದಲ್ಲಿರುವ ಕಚೇರಿಯಲ್ಲೇ  ತಮ್ಮ ರಿವಾಲ್ವರ್ ನಿಂದ ಗುಂಡು ಹೊಡೆದುಕೊಂಡು  ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Tap to resize

Latest Videos

ಕೆಫೆ ಕಾಫಿ ಡೇ ಸಿದ್ದಾರ್ಥ್ ಸಾವಿನ ರಹಸ್ಯ

ಸುನಿಲ್ ಅವರು ಸುಮಾರು 10 ವರ್ಷದಿಂದ ವ್ಯಾಪಾರ ಮಾಡುತ್ತಿದ್ದರು. ಸುನೀಲ್  ಪತ್ನಿ,ಓರ್ವ ಪುತ್ರಿ,ಓರ್ವ ಪುತ್ರ ಇದ್ದಾರೆ.

click me!