ಶಿವರಾತ್ರಿಯಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಶಿವರಾತ್ರಿ ಆಚರಿಸಬೇಕೆಂದು ಪಾದಯಾತ್ರೆ ಬಂದ ಮದ್ಯ ಸೇವನೆ ಮಾಡಿ ಭಕ್ತನೋರ್ವ ಪಾದಯಾತ್ರೆಯ ಮಾರ್ಗಮಧ್ಯೆ ಇತರೇ ಪಾದಯಾತ್ರೆ ಭಕ್ತರಿಗೂ ಕಿರಿ-ಕಿರಿ ಉಂಟುಮಾಡಿರುವ ಘಟನೆ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.18): ಶಿವರಾತ್ರಿಯಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಶಿವರಾತ್ರಿ ಆಚರಿಸಬೇಕು ಅನ್ನೋದು ಲಕ್ಷಾಂತರ ಭಕ್ತರ ಆಸೆ. ಹಾಗಾಗಿ, ಕೆಲ ಭಕ್ತರು ಭಕ್ತಿಯಿಂದ ವಾರ, ಹದಿನೈದು ದಿನ, ತಿಂಗಳ ಮುಂಚೆಯೇ ಪಾದಯಾತ್ರೆ ಬಂದು ಶಿವರಾತ್ರಿಯಂದು ಧರ್ಮಸ್ಥಳ ತಲುಪುತ್ತಾರೆ. ಮತ್ತೆ ಕೆಲವರು ಹೊತ್ತ ಹರಕೆ ತೀರಿದ ಹಿನ್ನೆಲೆಯೂ ಪಾದಯಾತ್ರೆ ಬಂದು ಹರಕೆ ತೀರಿಸುತ್ತಾರೆ. ಆದರೆ, ಹೀಗೆ ಭಕ್ತಿಗೋ ಅಥವಾ ಶೋಕಿಗೆ ಪಾದಯಾತ್ರೆ ಬಂದ ಕುಡುಕ ಭಕ್ತನೋರ್ವ ಪಾದಯಾತ್ರೆಯ ಮಾರ್ಗಮಧ್ಯೆ ಮಧ್ಯಸೇವಿಸಿ ಇತರೇ ಪಾದಯಾತ್ರೆ ಭಕ್ತರಿಗೂ ಕಿರಿ-ಕಿರಿ ಉಂಟು ಮಾಡಿದ್ದಾನೆ.
undefined
ನಡು ರಸ್ತೆಯಲ್ಲಿ ಭಕ್ತರಿಗೆ ಕಿರಿಕ್:
ಹಾಸನ ಜಿಲ್ಲೆ ಚನ್ನರಾಯಪಟ್ಣಣ ಮೂಲದ ಭಕ್ತನೋರ್ವ ರಸ್ತೆ ಮಧ್ಯೆ ಕುಡಿದು ಪಾದಯಾತ್ರಿ ಭಕ್ತರ ಜೊತೆ ಗಲಾಟೆ ಕೂಡ ಮಾಡಿದ್ದಾನೆ. ನೂರಾರು ಕಿ.ಮೀ.ನಿಂದ ನಡೆದುಕೊಂಡು ಬರುವ ಮಹಿಳಾ ಭಕ್ತರು ದಣಿವಾದಾಗ, ಕತ್ತಲಾದಾಗ ಎಲ್ಲೆಂದರಲ್ಲಿ ಮಲುಗುತ್ತಾರೆ. ಆದರೆ, ಕುಡುಕ ಪಾದಯಾತ್ರಿ ಮಹಿಳೆಯರ ಜೊತೆಯೂ ಅಸಭ್ಯವಾಗಿ ವರ್ತಿಸಿದ್ದಾನೆಂದು ಸ್ಥಳಿಯರು ಆತನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕುಡಿದು ಬೇಕಾಬಿಟ್ಟಿ ಮಾತನಾಡುತ್ತಿದ್ದ ಮಧ್ಯವ್ಯಸನಿ ವರ್ತನೆಯನ್ನ ಪ್ರಶ್ನಿಸಿದ ಸ್ಥಳಿಯರ ಮೇಲೂ ಕೇಳೋಕೆ ನೀವ್ಯಾರು ಎಂದು ಗಾಂಚಾಲಿ ಮಾಡಿದ್ದಾನೆ.
Gadag: ದಿನದಿಂದ ದಿನಕ್ಕೆ ಬೆಳೆಯುತ್ತಿದೆ ವಿಠ್ಠಲ ರುಕ್ಮಿಣಿ ಕಲ್ಲಿನ ವಿಗ್ರಹ!
ಪಾದಯಾತ್ರೆ ಹೋಗುವಾಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯ ಅಪಾಯಕಾರಿ ತಿರುವುಗಳಲ್ಲಿ ಬರುವ ವಾಹನಗಳಿಗೆ ಅಡ್ಡಡ್ಡ ಹೋಗಿದ್ದಾನೆ. ಇದನ್ನೆಲ್ಲಾ ಪ್ರಶ್ನಿಸಿದ ಪಾದಯಾತ್ರಿಗಳು ಹಾಗೂ ಸ್ಥಳಿಯರ ಮೇಲೂ ರೇಗಾಡಿದ್ದಾನೆ. ಜನಸಾಮಾನ್ಯರು ಈ ರೀತಿ ಶೋಕಿಯ ಪಾದಯಾತ್ರೆ ಏಕೆ ಮಾಡುತ್ತಾರೋ ಗೊತ್ತಿಲ್ಲ. ಯಾರ ಸುಖಕ್ಕೋ, ಯಾರ ಸಂತೋಷಕ್ಕೋ.
Kodagu MahaShivratri: ಕೂರ್ಗ್‌ನಲ್ಲಿ ಸಂಭ್ರಮದ ಶಿವರಾತ್ರಿ ಉತ್ಸವ, ಕಾಶಿ ಶಿವಲಿಂಗಕ್ಕೆ ವಿವಿಧ
ಧರ್ಮಸ್ಥಳ ಮಂಜುನಾಥ ಸ್ವಾಮಿ ಪಾದಯತ್ರೆ ಮಾಡಿ ಅಂತ ಯಾರಿಗೂ ಕೇಳಿಕೊಂಡಿಲ್ಲ. ಯಾವುದೇ ಪೂಜೆಗೂ ಒಂದು ರೀತಿ-ನೀತಿ-ರೂಢಿ ಸಂಪ್ರದಾಯ ಇರುತ್ತೆ. ಈ ರೀತಿಯ ಬೇಕಾಬಿಟ್ಟಿ, ಬೇಜವಾಬ್ದಾರಿ ಪಾದಯಾತ್ರೆ ಯಾರನ್ನ ಮೆಚ್ಚಿಸಲೋ ಗೊತ್ತಿಲ್ಲ. ತೀರಾ ಕುಡಿಯಲೇ ಬೇಕು ಅಂದರೆ ಮನೆಯಲ್ಲಿ ಕುಡಿದು ಮಲಗಿದರೆ ಆಗುತ್ತೆ. ಈ ರೀತಿ ಈ ರೀತಿ ದೇವರ ಹೆಸರಲ್ಲಿ ಬಂದು ಜನರಿಗೂ ಕಿರಿಕ್ ಮಾಡಿಕೊಂಡು, ರಸ್ತೆಯಲ್ಲೂ ಜಗಳ ಮಾಡಿಕೊಂಡು, ಎದ್ದು-ಬಿದ್ದು ಹೋಗಿ ದೇವರ ದರ್ಶನ ಮಾಡಿದರೆ ಏನು ಲಾಭ ?, ಅದೇಗೆ ಒಳ್ಳೆಯದು ಮಾಡುತ್ತಾನೋ ದೇವರೇ ಬಲ್ಲ.