ದೇವದುರ್ಗ: ಹೆಂಡ್ತಿ ಬೈದಿದ್ದಕ್ಕೆ ಕಂಠಪೂರ್ತಿ ಕುಡಿದು ಪ್ರವಾಹ ಲೆಕ್ಕಿಸದೆ ಸೇತುವೆ ದಾಟಿದ ಭೂಪ..!

By Kannadaprabha NewsFirst Published Aug 19, 2020, 2:00 PM IST
Highlights

ಕುಡಿದ ಮತ್ತಿನಲ್ಲಿ ಸೇತುವೆ ದಾಟಿದ ಭೂಪ| ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ದಾಡಿದ ವ್ಯಕ್ತಿ| ಸೇತುವೆ ದಾಟಿ ಬರುತ್ತಿದ್ದಂತೆ ವಶಕ್ಕೆ ಪಡೆದ ದೇವದುರ್ಗ ಪೊಲೀಸರು| 

ದೇವದುರ್ಗ(ಆ.19): ಕೃಷ್ಣಾ ನೆರೆಯಿಂದ ಮುಳುಗಿರುವ ತಾಲೂಕಿನ ಹೂವಿನಹೆಡಗಿ ಸೇತುವೆಯನ್ನು ಕುಡಿದ ಮತ್ತಿನಲ್ಲಿ ದಾಟಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ನಿಂಡೋಜಿ ಗ್ರಾಮ ಚಂದ್ರಶೇಖರ (30) ಕುಡಿದ ಮತ್ತಿನಲ್ಲಿ ಮುಳಿಗಿದ ಸೇತುವೆ ಮೇಲೆ ಕೈಯಲ್ಲಿ ಕಟ್ಟಿಗೆ ಹಿಡಿದು ನೀರಿನಲ್ಲಿದ್ದ ಕಸವನ್ನು ಸ್ವಚ್ಛಮಾಡುತ್ತಾ ನಡೆದುಕೊಂಡು ಬಂದಿದ್ದಾನೆ. 

ಹೆಂಡತಿ ಬೈದಿದ್ದಕ್ಕೆ ಕಂಠಪೂರ್ತಿ ಕುಡಿದ ರಂಪಾಟ ನಡೆಸಿದ ಚಂದ್ರಶೇಖರ ಪ್ರವಾಹ ಲೆಕ್ಕಿಸದೇ ಸೇತುವೆ ದಾಟಿ ಬರುತ್ತಿದ್ದಂತೆಯೇ ದೇವದುರ್ಗ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಡೋಂಟ್‌ ಕೇರ್..! ಕೊರೊನಾ ನಡುವೆಯೂ ಕರಿಯಪ್ಪ ‌ತಾತಾನ ಜಾತ್ರೆ!

ದೇವಸ್ಥಾನಗಳ ಮುಳುಗಡೆ:

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 2 ಲಕ್ಷ 55 ಸಾವಿರಕ್ಕು ಹೆಚ್ಚು ನೀರು ಹರಿಸಿದರ ಪರಿಣಾಮ ತಾಲೂಕಿನ ಹೂವಿನಹೆಡಗಿ ಸೇತುವೆ ಸಂಪೂರ್ಣವಾಗಿ ಮುಳುಗಿದೆ. 
ಅದೇ ರೀತಿ ಸಮೀಪದ ಬಸವೇಶ್ವರ ದೇವಸ್ಥಾನ, ಇದರ ಜೊತೆಗೆ ಕೊಪ್ಪರ ಲಕ್ಷ್ಮೇವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಅಣೆಮಲೈ ದೇವಸ್ಥಾನ, ಗೂಗಲ್‌ ಅಲ್ಲಮಪ್ರಭು ಗುಡಿ ಮತ್ತು ರಾಯಚೂರು ತಾಲೂಕಿನ ಕಾಡ್ಲೂರಿನ ಉಪೇಂದ್ರ ತೀರ್ಥ ಕರಾರ್ಜಿತ ಪ್ರಾಣದೇವರ ದೇವಸ್ಥಾನಗಳು ಮುಳುಗಡೆಯಾಗಿವೆ.

click me!