ಕುಡಿದ ಅಮಲಿನಲ್ಲೇ 40 ಕಿಮೀ ಸಾರಿಗೆ ಬಸ್‌ ಚಾಲನೆ..!

Kannadaprabha News   | Asianet News
Published : Dec 14, 2020, 01:12 PM ISTUpdated : Dec 14, 2020, 01:14 PM IST
ಕುಡಿದ ಅಮಲಿನಲ್ಲೇ 40 ಕಿಮೀ ಸಾರಿಗೆ ಬಸ್‌ ಚಾಲನೆ..!

ಸಾರಾಂಶ

ಒತ್ತಾಯಪೂರ್ವಕವಾಗಿ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹಾಕಿದ್ದ ಡಿಪೋ ಮ್ಯಾನೇಜರ್| ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದ ಘಟನೆ| ಕುಡಿದ ಅಮಲಿನಲ್ಲಿಯೇ ಬಸ್‌ ಚಲಾಯಿಸಿಕೊಂಡು ಸುಮಾರು 40 ಕಿಮೀ ದೂರದ ಚಡಚಣ ಪಟ್ಟಣಕ್ಕೆ ಬಂದ ಚಾಲಕ| 

ಚಡಚಣ(ಡಿ.14): ಡಿಪೋ ಮ್ಯಾನೇಜರ್‌ ಒತ್ತಡಕ್ಕೆ ಬಸ್‌ ಚಾಲಕನೊಬ್ಬ ಕುಡಿದ ಅಮಲಿನಲ್ಲಿಯೇ ಇಂಡಿ ಬಸ್‌ ನಿಲ್ದಾಣದಿಂದ ಚಡಚಣದವರೆಗೆ ಬಸ್‌ ಚಲಾಯಿಸಿ ತೀವ್ರ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ಜರುಗಿದೆ.

ಇಂಡಿ ಡಿಪೋದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಚಾಲಕನನ್ನು ಒತ್ತಾಯಪೂರ್ವಕವಾಗಿ ಕರ್ತವ್ಯ ನಿರ್ವಹಿಸುವಂತೆ ಡಿಪೋ ಮ್ಯಾನೇಜರ್‌ ಎಂ.ಆರ್‌.ಲಮಾಣಿ ಒತ್ತಡ ಹಾಕಿದ್ದಾರೆ. ಒತ್ತಡಕ್ಕೆ ಮಣಿದ ಚಾಲಕ ಕುಡಿದ ಅಮಲಿನಲ್ಲಿಯೇ ಬಸ್‌ನ್ನು ಚಲಾಯಿಸಿಕೊಂಡು ಸುಮಾರು 40 ಕಿಮೀ ದೂರದ ಚಡಚಣ ಪಟ್ಟಣಕ್ಕೆ ಬಂದಿದ್ದಾನೆ.

ಬೈರಗೊಂಡ ಮೇಲೆ ಗುಂಡಿನ ದಾಳಿ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

ಬಸ್‌ನಲ್ಲಿ ಡಿಪೋ ಮ್ಯಾನೇಜರ್‌ ಸುಮಾರು 20 ಕಿಮೀ ದೂರವಿರುವ ಝಳಕಿ ಗ್ರಾಮದವರೆಗೂ ಆಗಮಿಸಿದ್ದಾರೆ. ಪಟ್ಟಣಕ್ಕೆ ಬಸ್‌ ಆಗಮಿಸುತ್ತಿದ್ದಂತೆ ಪ್ರಯಾಣಿಕರು ಬಸ್‌ನ ಒಳಗಡೆ ತೆರಳುವ ಸಂದರ್ಭದಲ್ಲಿ ಚಾಲಕ ಪಾನಮತ್ತನಾಗಿರುವುದು ಗಮನಕ್ಕೆ ಬಂದಿದೆ. ಪ್ರಯಾಣಿಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಚಾಲಕ ನಿಲ್ದಾಣದಲ್ಲಿ ಬಸ್‌ ಬಿಟ್ಟು ಪರಾರಿಯಾಗಿದ್ದಾನೆ.
 

PREV
click me!

Recommended Stories

'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ