ಬರ ಪರಿಸ್ಥಿತಿ: ತುಮಕೂರಲ್ಲಿ ಮೇವು ಬ್ಯಾಂಕ್‌ಗೆ ಚಾಲನೆ

Published : Apr 06, 2024, 11:33 AM IST
 ಬರ ಪರಿಸ್ಥಿತಿ:  ತುಮಕೂರಲ್ಲಿ ಮೇವು ಬ್ಯಾಂಕ್‌ಗೆ ಚಾಲನೆ

ಸಾರಾಂಶ

ಬರ ಪರಿಸ್ಥಿತಿ ಹಿನ್ನೆಲೆ ಜಾನುವಾರುಗಳ ರಕ್ಷಣೆಗಾಗಿ ಮೇವು ಬ್ಯಾಂಕ್‌ ತೆರೆಯಲಾಗಿದೆ. ಇದರ ಸೌಲಭ್ಯ ಪಡೆದುಕೊಳ್ಳುವಂತೆ ಜಿಲ್ಲಾ ಪಶು ಆರೋಗ್ಯ ಇಲಾಖೆಯ ಅಪಾರ ನಿರ್ದೇಶಕ ಪಿ.ಟಿ.ಶ್ರೀನಿವಾಸ್‌ ಹೇಳಿದರು

  ಪಾವಗಡ :  ಬರ ಪರಿಸ್ಥಿತಿ ಹಿನ್ನೆಲೆ ಜಾನುವಾರುಗಳ ರಕ್ಷಣೆಗಾಗಿ ಮೇವು ಬ್ಯಾಂಕ್‌ ತೆರೆಯಲಾಗಿದೆ. ಇದರ ಸೌಲಭ್ಯ ಪಡೆದುಕೊಳ್ಳುವಂತೆ ಜಿಲ್ಲಾ ಪಶು ಆರೋಗ್ಯ ಇಲಾಖೆಯ ಅಪಾರ ನಿರ್ದೇಶಕ ಪಿ.ಟಿ.ಶ್ರೀನಿವಾಸ್‌ ಹೇಳಿದರು

ತಾಲೂಕು ಆಡಳಿತ ಹಾಗೂ ಪಶುಪಾಲನಾ ಆರೋಗ್ಯ ಇಲಾಖೆ ವತಿಯಿಂದ ಶುಕ್ರವಾರ ತಾಲೂಕಿನ ನಾಗಲಮಡಿಕೆ ಗ್ರಾಮದ ಶ್ರೀ ಅಂತ್ಯ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮೇವು ಬ್ಯಾಂಕ್‌ ಚಾಲನೆ ನೀಡಿ ಮಾತನಾಡಿದರು. ಬರ ಪರಿಹಾರ ಕ್ರಮವಾಗಿ ಮೊದಲ ಹಂತದ ಮೇವು ಬ್ಯಾಂಕ್‌ ನಾಗಲಮಡಿಕೆ ಗ್ರಾಮದಲ್ಲಿ ತೆರೆಯಲಾಗಿದೆ ಎಂದರು.

ತಹಸೀಲ್ದಾರ್‌ ಸಂತೋಷ್‌ಕುಮಾರ್‌ ಮಾತನಾಡಿ, ಎರಡನೇ ಹಂತವಾಗಿ ಶೀಘ್ರ ತಾಲೂಕಿನ ವೈ.ಎನ್ .ಹೊಸಕೋಟೆ ಹಾಗೂ ಇತರೆ ಹೋಬಳಿ ಮತ್ತು ಗ್ರಾಪಂ ಕೇಂದ್ರ ಸ್ಥಾನಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗುವುದು ಎಂದು ತಿಳಿಸಿದರು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹೂರಕೇರಪ್ಪ ಮಾತನಾಡಿ, ಮೇವಿನ ಕೊರತೆ ಇರುವ ರೈತರನ್ನು ಗುರುತಿಸಿ, ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ. ಒಂದು ರಾಸುವಿಗೆ ದಿನಕ್ಕೆ ಆರು ಕೆಜಿಯಂತೆ ಏಳು ದಿನಗಳಿಗೆ 42ಕೆಜಿ ಮೇವನ್ನು ವಿತರಿಸಲಿದ್ದು, ಪ್ರತಿ ಕೆಜಿಗೆ ಎರಡು ರು ಹಣ ನಿಗದಿಪಡಿಸಲಾಗಿದೆ. 11ಟನ್‌ ಭತ್ತದ ಮೇವು ಸರಬರಾಜಾಗಿದೆ ಎಂದರು.

ನಾಗಲಮಡಿಕೆ ಹೋಬಳಿ ಕಂದಾಯ ತನಿಖಾಧಿಕಾರಿ ನಾರಾಯಣಸ್ವಾಮಿ, ಉಪ ತಹಸೀಲ್ದಾರ್‌ ಕೆ.ರಾಜಣ್ಣ, ಆಸೀಪ್, ಅಶ್ವತ್ ನಾರಾಯಣ್‌, ಸೌಮ್ಯ, ರಾಮಾಂಜಿನೇಲು, ನಾಗಮ್ಮ,‌ ಶಿವರಾಜಪ್ಪ, ದಿನೇಶ್, ತಿಪ್ಪೇಸ್ವಾಮಿ, ಸಣ್ಣೀರಪ್ಪ ಇತರರಿದ್ದರು.

PREV
Read more Articles on
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್