ಮಂಗಳೂರಿನಲ್ಲಿ ಹಾರಿದ ಡ್ರೋನ್ ಕ್ಯಾಮೆರಾ : ಮತ್ತೆ ಹೆಚ್ಚಿದ ಆತಂಕ

By Suvarna News  |  First Published Jan 6, 2020, 12:03 PM IST

ಮಂಗಳೂರಿನಲ್ಲಿ ಕಳೆದ ಡಿಸೆಂಬರ್ 19 ರಂದು ಹಿಂಸಾಚಾರ ನಡೆದಿದ್ದು, ಈ ಘಟನೆ ಬಳಿಕ ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಸುರತ್ಕಲ್ ಬಳಿಯಲ್ಲಿ ಡ್ರೋನ್ ಹಾರಾಟ ಮಾಡಿದ್ದು, ಹೆಚ್ಚಿನ ಆತಂಕ ಸೃಷ್ಟಿಸಿದೆ.


ಮಂಗಳೂರು [ಜ.06]:  ಮಂಗಳೂರಿನಲ್ಲಿ ಭಾರೀ ಭದ್ರತೆ ಇದ್ದರೂ ಭದ್ರತೆ ಮೀರಿ ಡ್ರೋನ್ ಕ್ಯಾಮರದಲ್ಲಿ ಚಿತ್ರೀಕರಣ ಮಾಡಲಾಗಿದೆ. 

ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಡ್ರೋನ್ ಮೂಲಕ ಸಾವಿರಾರು ಮಂದಿ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಅಪರಿಚಿತರಿಂದ ಚಿತ್ರೀಕರಣ ನಡೆದಿದೆ. 

Latest Videos

undefined

ಭಾರತ ಸರ್ಕಾರದ ಎರಡನೇ ಅತ್ಯಂತ ದೊಡ್ಡ ಉದ್ಯಮವಾದ ಮಂಗಳೂರು ತೈಲ ಶುದ್ಧೀಕರಣದ ಬಳಿ ಡ್ರೋನ್ ಕ್ಯಾಮರಾದಿಂದ ಚತ್ರೀಕರಿಸಲಾಗಿದ್ದು, ಇದರ ಹಿಂದೆ ದುಷ್ಕೃತ್ಯ ನಡೆಸುವ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. 

ಇಲ್ಲಿನ ತೈಲ ಶುದ್ಧೀಕರಣ ಘಟಕದ ಬಳಿಯಲ್ಲಿ ಯಾವುದೇ  ರೀತಿಯ ಹಾರಾಟ ಹಾಗೂ ಚಿತ್ರೀಕರಣ ನಿಷೇಧವಿದ್ದರೂ ಚಿತ್ರೀಕರಣ ಮಾಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. 

ವಿದೇಶದಿಂದ ಬಂದ ಮೇಸೇಜ್‌ಗಳಿಂದ ಮಂಗಳೂರಲ್ಲಿ ಗಲಭೆ.....

ಇನ್ನು ISF ಸಿಬ್ಬಂದಿ ಡ್ರೋನ್ ಕ್ಯಾಮರಾವನ್ನು ಹೊಡೆದು ಉರುಳಿಸಲು ಯತ್ನಿಸಿದರೂ ಅದು ಸಾಧ್ಯವಾಗಿಲ್ಲ.  ಈ ನಿಟ್ಟಿನಲ್ಲಿ ಇದೀಗ CISF ಮತ್ತು  ಇಂಟಲಿಜೆನ್ಸ್ ವಿಭಾಗದಿಂದ ತನಿಖೆ ನಡೆಸಲಾಗುತ್ತಿದ್ದು, ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಗೋಲಿಬಾರ್ ಮೃತರಿಗೆ ಪರಿಹಾರ ನೀತಿ: ಬೊಮ್ಮಾಯಿ...

ಕಳೆದ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ಭಾರೀ ಪ್ರತಿಭಟನೆ ನಡೆದಿದ್ದು, ಈ ವೇಳೆ ಹಿಂಸಾಚಾರವೂ ನಡೆದಿದ್ದು, ಇಬ್ಬರು ವ್ಯಕ್ತಿಗಳು ಹತ್ಯೆಯಾಗಿದ್ದರು. 

click me!