ನೀರಿನಲ್ಲಿ ಕೊಚ್ಚಿಹೋದ ಆಟೋ , ಜೀವ ಉಳಿಸಿಕೊಂಡು ಮನೆಗೆ ಬಂದ ಚಾಲಕ

By Suvarna News  |  First Published Sep 6, 2022, 3:43 PM IST

ಗದಗ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದ್ದು, ಮಳೆ ನೀಡಿಗೆ ಆಟೋ ಕೊಚ್ಚಿಕೊಂಡು ಹೋಗಿದೆ. ಜೀವನಕ್ಕೆ ಆಧಾರವಾಗಿದ್ದ ಆಟೋ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ.


ಗದಗ, (ಸೆಪ್ಟೆಂಬರ್.06): ನಗರದ ಸುತ್ತಮುತ್ತ ರಾತ್ರಿಯಿಂದ ಧಾರಾಕಾರ ಮಳೆಯಾಗಿದೆ. ಗದಗ ಹೊರ ವಲಯದ ಹುಲಕೋಟಿ ವ್ಯಾಪ್ತಿಯಲ್ಲೂ ವರುಣ ಅಬ್ಬರಿಸಿದ್ದಾನೆ. ರಾತ್ರಿ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿದ್ವು. ಹುಲಕೋಟಿ ಗ್ರಾಮದ ಹರ್ತಿ ರೋಡ್ ನಲ್ಲಿ ಏಕಾಏಕಿ ಮಳೆ ನೀರು ನುಗ್ಗಿ ಬಾಡಿಗೆ ಹೊರಟಿದ್ದ ಆಟೋವನ್ನೇ ತೇಲಿಕೊಂಡು ಹೋಗಿದೆ.

ಅದೃಷ್ಟವಷಾತ್ ಆಟೋ ಚಾಲಕ ಕರಣ್ ಕರಿಯಣ್ಣವರ್ ಹಾಗೂ ಮಗ ಪ್ರವೀಣ್ ಜೀವಸಹಿತ ವಾಪಾಸ್ ಬಂದಿದಾರೆ.. ರಾತ್ರಿ ಗ್ರಾಮದ ವೃದ್ಧ ಗುರುಪ್ಪ ಕೊಂಡಿಕೊಪ್ಪ ಅವರನ್ನ ಹರ್ತಿ ರೋಡ್ ಬಳಿಯ ಕುರಿ ದೊಡ್ಡಿ ಬಳಿ ಡ್ರಾಪ್ ಮಾಡೋದಕ್ಕೆ ಕರಣ್ ಅವರು ಮಗ ಪ್ರವೀಣ್ ಜೊತೆ ಹೋಗಿದ್ರು. ಆದ್ರೆ ಜಮೀನು ಬಳಿಯಿಂದ ರಸ್ತೆಗೆ ನುಗ್ಗಿದ್ದ ನೀರು ಆಟೋವನ್ನ ಹಳಕ್ಕೆ ದೂಡಿತ್ತು. ಆಟೋದಲ್ಲಿದ್ದ ಪ್ರವೀಣ್, ಈಜಿಕೊಂಡು ತಂದೆ ಹಾಗೂ ವೃದ್ಧನನ್ನ ರಕ್ಷಿಸಿದ್ದಾರೆ.. ಆದ್ರೆ ಪೊದೆಯಲ್ಲಿ ಸಿಲುಕಿದ್ದ ಆಟೋವನ್ನ ಮೇಲೆತ್ತಲು ಅಸಾಧ್ಯವಾಗಿದೆ.ಹೀಗಾಗಿ ಆಟೋವನ್ನ ಅಲ್ಲೇ ಬಿಟ್ಟು ಮನೆ ಸೇರಿದ್ದಾರೆ.

Tap to resize

Latest Videos

undefined

ಮಳೆ ನೀರಲ್ಲಿ ಕೊಚ್ಚಿಹೋದ ಇಬ್ರು ಪೊಲೀಸ್ರು, ಓರ್ವ ಪೇದೆಯ ಶವ ಪತ್ತೆ

ಆಟೋ ಕಳೆದುಕೊಂಡು ಕಂಗಾಲದ ಕುಟುಂಬ
ಜೀವನಕ್ಕೆ ಆಧಾರವಾಗಿದ್ದ ಆಟೋ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಕ್ಕೆ ಕುಟುಂಬ ಇದೀಗ ಕಂಗಾಲಾಗಿದೆ. ಗದಗ ತಾಲೂಕಿನ ಹರ್ಲಾಪುರ ಗ್ರಾಮದವರಾಗಿರೋ ಕರಣ್ ಕರಿಯಣ್ಣವರ್, ಕಳೆದ 40 ವರ್ಷದಿಂದ ಹುಲಕೋಟಿಯಲ್ಲಿ ವಾಸವಾಗಿದ್ದಾರೆ.. ಅಟೋವನ್ನ ನಂಬ್ಕೊಂಡು ನಾಲ್ವರು ಜೀವನ ಸಾಗಿಸ್ತಿದ್ದಾರೆ.. ಆದ್ರೆ ಈಗ ಆಟೋ ಕಳ್ಳದಲ್ಲಿ ಕೊಚ್ಚಿಗೋಗಿದ್ದು ಕುಟುಂಬವನ್ನ ಕಂಗೆಡಿಸಿದೆ.. 

ಆಟೋ ಮೇಲೆತ್ತಲು ಸಾಧ್ಯವಾಗ್ತಿಲ್ಲ. ಆಟೋ ಇಲ್ಲದೇ ಜೀವನ ಸಾಗಿಸೋದು ಕಷ್ಟ. ಸಹಾಯ ಮಾಡಿ ಎಂದು ಕರಿಯಣ್ಣವರ್ ಕುಟುಂಬ ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಅಳಲು ತೋಡಿಕೊಂಡಿದ್ದಾರೆ.

click me!