* ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನಡೆದ ಘಟನೆ
* ಟಿಪ್ಪರ್‌ನಿಂದ ಹೊರಬರಲಾಗದೇ ಸಜೀವವಾಗಿ ದಹನವಾದ ಚಾಲಕ
* ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಂಡ್ಯ(ಮಾ.17): ಟೈರ್ ಪಂಕ್ಚರ್ ಆಗಿ ಚಲಿಸುತ್ತಿದ್ದ ಟಿಪ್ಪರ್(Tipper) ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನವಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಇಂದು(ಗುರುವಾರ) ನಡೆದಿದೆ. ಪಟ್ಟಣದ ಬೆಂಗಳೂರು-ಮೈಸೂರು(Bengaluru-Mysuru High Way) ಹೆದ್ದಾರಿಯ ಎಲ್‌ಐಸಿ ಕಚೇರಿ ಬಳಿ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಹಾಸನ ಮೂಲದ ಚಾಲಕ ದಿನೇಶ್ ಸಜೀವ ದಹನಗೊಂಡ ಮೃತ(Death) ದುರ್ದೈವಿಯಾಗಿದ್ದಾರೆ.
ಇಂದು ಬೆಳಿಗ್ಗೆ ಬಿಡದಿಯಿಂದ(Bidadi) ಮೈಸೂರಿಗೆ(Mysuru) ಟಿಪ್ಪರ್ ಮೂಲಕ ಜಲ್ಲಿಕಲ್ಲು ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಟೈರ್ ಪಂಕ್ಚರ್ ಆದ ಪರಿಣಾಮ ನಿಯಂತ್ರಣಕ್ಕೆ ಬಾರದ ವಾಹನ ಎಲ್‌ಐಸಿ ಕಚೇರಿ ಬಳಿಯ ಫ್ಲೈ ಓವರ್ ಪಿಲ್ಲರ್‌ವೊಂದಕ್ಕೆ ಡಿಕ್ಕಿ ಹೊಡೆದಿದ್ದು ತಕ್ಷಣವೇ ವಾಹನ ಬೆಂಕಿ ಹೊತ್ತಿಕೊಂಡಿದೆ. ಲಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಹೊರ ಬರಲಾಗದ ಚಾಲಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನಗೊಂಡಿದ್ದಾರೆ.
ಶಾಸಕರ ಕಾರು ಡಿಕ್ಕಿ, 22 ಜನಕ್ಕೆ ಗಾಯ, ಐವರ ಸ್ಥಿತಿ ಗಂಭೀರ!
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ(Fire Department) ಸಿಬ್ಬಂದಿಗಳು ಬೆಂಕಿ ನಂದಿಸಿ ಚಾಲಕನನ್ನ ಹೊರತರುವ ಪ್ರಯತ್ನ ಮಾಡಿದರಾದರು ದುರಾದೃಷ್ಟವಶಾತ್ ಚಾಲಕ ಮೃತಪಟ್ಟಿದ್ದಾರೆ. ಬಳಿಕ ಬೆಂಕಿ ನಂದಿಸಿ ಮೃತದೇಹ(Deadbody) ಹೊರತೆಗೆಯುವ ವೇಳೆ ಮೃತನ ಗುರುತಿನ ಚೀಟಿ ಪತ್ತೆಯಾಗಿದ್ದು, ಕುಟುಂಬಸ್ಥರಿಗೆ ವಿಚಾರ ತಿಳಿಸಲಾಗಿದೆ.
ಸದ್ಯ ಮೃತದೇಹವನ್ನ ಮದ್ದೂರು ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ(Mortuary) ಇರಿಸಲಾಗಿದೆ. ಇನ್ನು ಟಿಪ್ಪರ್ ಫ್ಲೈ ಓವರ್ ಪಿಲ್ಲರ್‌ಗೆ ಡಿಕ್ಕಿಯಾಗಿದ್ರಿಂದ ಡಿಕ್ಕಿಯ ರಭಸಕ್ಕೆ ಪಿಲ್ಲರ್ ಜಖಂಗೊಂಡಿತ್ತು. ಬೆಳ್ಳಂ ಬೆಳಿಗ್ಗೆ ನಡೆದ ಘಟನೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತಾದ್ರು ತಕ್ಷಣ ಅಲರ್ಟ್ ಆದ ಪೊಲೀಸರು(Police) ಅಪಘಾತಗೊಂಡ ಟಿಪ್ಪರ್ ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇನ್ನು ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿನ ಅಪಘಾತ(Accident) ಪ್ರಕರಣ ಇದೆ ಮೊದಲೆನಲ್ಲ ಇತ್ತೀಚಿಗೆ ಅಪಘಾತಗಳು ನಿರಂತರ ಸಂಭವಿಸತ್ತಲೇ ಇದೆ. ಯಾಕೆಂದರೆ ಕಳೆದ ಹಲವು ತಿಂಗಳಿನಿಂದ ದಶಪಥ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಕೆಲಸ ಪ್ರಗತಿಯಲ್ಲಿರುವ ಕಾರಣ ಅಲ್ಲಲ್ಲಿ ಸಂಚಾರಕ್ಕೆ ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೆಡೆ ತಾತ್ಕಾಲಿಕವಾಗಿ ನಿರ್ಮಿಸಿರುವ ಅವೈಜ್ಞಾನಿಕ ತಿರುವುಗಳ ಅಪಘಾತಕ್ಕೆ ಪ್ರಮುಖ ಕಾರಣವಾಗ್ತಿದ್ದು. ರಸ್ತೆ ತಿರುವುಗಳು ವಾಹನ ಚಾಲಕರ ಗಮನಕ್ಕೆ ಬರದಿರುವುದರಿಂದ ಅಪಘಾತಗಳು ಸಂಭವಿಸುತ್ತಿದೆ. ಇನ್ನು ಮುಂದಾದರು ಸಂಬಂಧಪಟ್ಟವರು ಗಮನಹರಿಸಿ ಅಪಘಾತಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
Bengaluru: ಚಲಿಸುತ್ತಿದ್ದ ಕಾರಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ: ವ್ಯಕ್ತಿ ಸಜೀವ ದಹನ!
ಕೂಡ್ಲಿಗಿ ಬಳಿ ಭೀಕರ ಅಪಘಾತ: ರಾಮೇಶ್ವರಕ್ಕೆ ತೆರಳುತ್ತಿದ್ದ ಐವರು ಭಕ್ತರ ದುರ್ಮರಣ
ವಿಜಯನಗರ: ಟ್ರ್ಯಾಕ್ಸ್‌ನ ಆಕ್ಸಲ್ ಕಟ್ ಆಗಿ ಸಂಭವಿಸಿದ ಅಪಘಾತದಲ್ಲಿ(Accident) ಐವರು ಮೃತಪಟ್ಟು(Death) ಹಲವರು ಗಾಯಗೊಂಡಿರುವ ಘಟನೆ ವಿಜಯನಗರ(Vijayanagara) ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಹೊರವಲಯ ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಮಾ.15 ರಂದು ನಡೆದಿತ್ತು. ಮೃತರನ್ನ ಟ್ರ್ಯಾಕ್ಸ್ ಚಾಲಕ ಸಿದ್ದಯ್ಯ ಕಾಳಗಿ(48), ಕಲ್ಲವ್ವ(60), ಕುಂತವ್ವ(50), ನೀಲಮ್ಮ(54) ಹಾಗೂ ಲಕ್ಷ್ಮೀಬಾಯಿ (60) ಎಂದು ಗುರುತಿಸಲಾಗಿತ್ತು.
ಮೃತರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸುತ್ತಮುತ್ತಲಿನ ಗ್ರಾಮದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ರಾಮೇಶ್ವರಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದುರ್ಘಟನೆಯಲ್ಲಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಹರೀಶ್ ರೆಡ್ಡಿ ಭೇಟಿ ಪರಿಶೀಲನೆ ನಡೆಸಿದ್ದರು. ಈ ಸಂಬಂಧ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.