ಕುಡಿಯುವ ನೀರು ಯೋಜನೆ ನೀರುಪಾಲು: 5 ಕೋಟಿಗೂ ವೆಚ್ಚದ ಪೈಪ್‌ಲೈನ್ ವ್ಯರ್ಥ?

By Govindaraj S  |  First Published Nov 14, 2024, 8:43 PM IST

ನಗರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳ ದೂರದೃಷ್ಟಿ ಕೊರತೆ ಹಾಗೂ ನಿರ್ಲಕ್ಷ್ಯ ದಿಂದ ಸರಕಾರದ ಹಣ ಹೇಗೆ ಪೋಲಾಗುತ್ತಿದೆ ಅನ್ನೋದಕ್ಕೆ ಇದೊಂದು ನಿದರ್ಶನವಾಗಿದೆ. 5 ಕೋಟಿಗೂ ಹೆಚ್ಚು ವೆಚ್ಚದ ಪೈಪ್ ಲೈನ್ ವ್ಯರ್ಥವಾಗ್ತಿದೆ. 


ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್  ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ನ.14): ನಗರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳ ದೂರದೃಷ್ಟಿ ಕೊರತೆ ಹಾಗೂ ನಿರ್ಲಕ್ಷ್ಯ ದಿಂದ ಸರಕಾರದ ಹಣ ಹೇಗೆ ಪೋಲಾಗುತ್ತಿದೆ ಅನ್ನೋದಕ್ಕೆ ಇದೊಂದು ನಿದರ್ಶನವಾಗಿದೆ. 5 ಕೋಟಿಗೂ ಹೆಚ್ಚು ವೆಚ್ಚದ ಪೈಪ್ ಲೈನ್ ವ್ಯರ್ಥವಾಗ್ತಿದೆ. ಹೌದು 10 ವರ್ಷಗಳ ಹಿಂದೆ  ನೀರಿನ ದುರ್ಬಳಕೆ ತಡೆಯಬೇಕು, ಸಮರ್ಪಕ ರೀತಿಯಲ್ಲಿ ಪ್ರತಿ ಮನೆಗೂ ಕೂಡ ನೀರು ಪೂರೈಕೆ ಮಾಡಬೇಕೆಂದು ಅಳವಡಿಸಲಾಗಿದ್ದ ಪೈಪ್ ಲೈನ್ ಇದೀಗಾ ಸಂಪೂರ್ಣ ಹಾಳಾಗಿದೆ. ಅದೇ ಮಾರ್ಗಕ್ಕೆ ಹೊಸದಾಗಿ ಪೈಪ್ ಲೈನ್ ಅಳವಡಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ಕನಿಷ್ಠ5 ಕೋಟಿಗೂ ಹೆಚ್ಚು ಹಣ ವ್ಯರ್ಥವಾಗಿದೆ.

Latest Videos

undefined

ಹಿಂದೆ ಅಳವಡಿಸಲಾಗಿದ್ದ ಪೈಪ್ ಲೈನ್ ನಿಂದ ಒಂದು ಹನಿ ನೀರು ಕೂಡ ಪೂರೈಕೆಯಾಗಿಲ್ಲವೆಂಬುದು ಮಾತ್ರ ವಿಪರ್ಯಾಸವಾಗಿದೆ. ಕರ್ನಾಟಕ ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ವತಿಯಿಂದ ಹೌಸಿಂಗ್ ಬೋರ್ಡ್ ಸೇರಿದಂತೆ ಹಲವು ಬಡಾವಣೆಗಳಲ್ಲಿ  ಎಚ್ಡಿಪಿಐ ಪೈಪ್ ಅಳವಡಿಕೆ ಮಾಡಲಾಗಿತ್ತು. ಸುಮಾರು 60 ಕಿಮೀ ಗೂ ಹೆಚ್ಚು ದೂರ ಪೈಪ್ ಅಳವಡಿಸಲಾಗಿದೆ. ಈ ಪೈಪ್ ಅಳವಡಿಕೆಯಿಂದ ಅಕ್ರಮ ನಲ್ಲಿ ಸಂಪರ್ಕ ಸಾಧ್ಯವಿರಲಿಲ್ಲ. ಒಂದು ವೇಳೆ ಪೈಪ್ ಒಡೆದರೂ ಕೂಡ ಎಲೆಕ್ಟ್ರಿಕ್ ಮೆಷಿನ್ ಮೂಲಕವೇ ದುರಸ್ತಿ ಪಡಿಸಬೇಕಿತ್ತು.

ಇನ್ನೂ ಹೊಸ ಪೈಪ್ ಲೈನ್ ಅಳವಡಿಕೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಚಾಮರಾಜನಗರಕ್ಕೆ ಎರಡನೇ ಹಂತದ ಕುಡಿಯುವ ನೀರು ಯೋಜನೆ ಜಾರಿಗೆ ತರದೆ ಎಷ್ಟೇ ಪೈಪ್ ಲೈನ್ ಅಳವಡಿಕೆ ಮಾಡಿದ್ರೆ ಕೂಡ ಜನರಿಗೆ ನೀರಿನ ಸಂಪರ್ಕ ಕಲ್ಪಿಸುವುದು ಸಾಧ್ಯವಿಲ್ಲ. ಸರ್ಕಾರ ಹಾಗೂ ಅಧಿಕಾರಿಗಳು ಸುಮ್ಮನೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಕೂಡಲೇ ಪೈಪ್ ಲೈನ್ ಅಳವಡಿಕೆ ಕಾರ್ಯಕ್ಕೆ ಬ್ರೇಕ್ ಹಾಕಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಅನುಮತಿ ಪಡೆದು ಕೆಲಸ ಆರಂಭಿಸಿ ನಗರದ ನೀರಿನ ಬರ ನಿಗಿಸಲಿ ಅಂತಾ ಆಗ್ರಹ ವ್ಯಕ್ತಪಡಿಸಿದ್ದಾರೆ.

ಅಪರೂಪದ ಕಾಯಿಲೆಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಸರ್ಕಾರ ಬದ್ಧ: ಸಚಿವ ಶರಣ ಪ್ರಕಾಶ್ ಪಾಟೀಲ್

ಒಟ್ನಲ್ಲಿ  ಇದೀಗಾ  ಅಮೃತ್  ಯೋಜನೆಯಡಿ  ಹೊಸ  ಪೈಪ್ ಲೈನ್  ಅಳವಡಿಕೆ  ಕಾರ್ಯ ಭರದಿಂದ ಸಾಗಿದೆ.  ಆದ್ರೆ 10 ವರ್ಷಗಳ ಹಿಂದೆ ಅಳವಡಿಸಿದ್ದ ಒಂದು ಹನಿ ನೀರು ಕೂಡ ಪೂರೈಕೆಯಾಗದೆ ಹಾಳಾಗಿವೆ. ಈಗ ಹೊಸದಾಗಿ ಮತ್ತೇ ಪೈಪ್ ಲೈನ್ ಅಳವಡಿಸುವ ಅನಿವಾರ್ಯತೆ ಸೃಷ್ಟಿಯಾಗಿದ್ದು,  ಮತ್ತೇ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆಂಬ ಆರೋಪ ಮಾಡ್ತಿದ್ದಾರೆ.

click me!