ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ.ನಗರಸಭೆ ವ್ಯಾಪ್ತಿಯ ಅಂಬಲಪಾಡಿ ಪಂಚಾಯತ್ ವ್ಯಾಪ್ತಿಯ ಮಹಿಳೆಯರು ಪಂಚಾಯತ್ ಗೆ ಮುತ್ತಿಗೆ ಹಾಕಿದರು. ಪಂಚಾಯತ್ ವ್ಯಾಪ್ತಿಯಲ್ಲಿ 90ಕ್ಕೂ ಅಧಿಕ ಮನೆಗಳಿದ್ದು ತಿಂಗಳಿನಿಂದ ನೀರು ಸರಬರಾಜು ಆಗುತ್ತಿಲ್ಲ.ಸಮರ್ಪಕ ನೀರು ಪೂರೈಕೆ ಮಾಡದಿದ್ದರೆ ಪಂಚಾಯತ್ ನಿಂದ ನಾವು ಹೋಗುವುದಿಲ್ಲ ಎಂದು ಮಹಿಳೆಯರು ಆಕ್ರೋಶಗೊಂಡರು.
ಉಡುಪಿ (ಜೂ.19) : ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ.ನಗರಸಭೆ ವ್ಯಾಪ್ತಿಯ ಅಂಬಲಪಾಡಿ ಪಂಚಾಯತ್ ವ್ಯಾಪ್ತಿಯ ಮಹಿಳೆಯರು ಪಂಚಾಯತ್ ಗೆ ಮುತ್ತಿಗೆ ಹಾಕಿದರು. ಪಂಚಾಯತ್ ವ್ಯಾಪ್ತಿಯಲ್ಲಿ 90ಕ್ಕೂ ಅಧಿಕ ಮನೆಗಳಿದ್ದು ತಿಂಗಳಿನಿಂದ ನೀರು ಸರಬರಾಜು ಆಗುತ್ತಿಲ್ಲ.ಸಮರ್ಪಕ ನೀರು ಪೂರೈಕೆ ಮಾಡದಿದ್ದರೆ ಪಂಚಾಯತ್ ನಿಂದ ನಾವು ಹೋಗುವುದಿಲ್ಲ ಎಂದು ಮಹಿಳೆಯರು ಆಕ್ರೋಶಗೊಂಡರು.
ಗ್ರಾಮದ ಮಹಿಳೆಯರು ಕೈಯಲ್ಲಿ ಕೊಡಪಾನ ಹಿಡಿದುಕೊಂಡು ಬಂದು ಧರಣಿ ಕುಳಿತುಕೊಂಡರು. ಸಮಜಾಯಿಷಿ ನೀಡಲು ಬಂದ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ,ಬೇರೆ ಎಲ್ಲ ಕಡೆಗಳಲ್ಲಿ ನೀರು ಪೂರೈಕೆಯಾಗುತ್ತಿದೆ. ನಮಗೆ ಯಾಕಿಲ್ಲ ಎಂದು ಪ್ರಶ್ನಿಸಿದರು.
undefined
ರಾಜಕೀಯ ದ್ವೇಷಕ್ಕಾಗಿ ಪಠ್ಯ ಪರಿಷ್ಕರಣೆ: ಶಾಸಕ ವೇದವ್ಯಾಸ್ ಕಾಮತ್
ಈ ಭಾಗದಲ್ಲಿ ಕಳೆದ ಒಂದು ತಿಂಗಳಿಗೂ ಅಧಿಕ ದಿನಗಳಿಂದ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಒಬ್ಬರು ನಿರಂತರ ನೀರು ಸರಬರಾಜು ಮಾಡುವ ಮೂಲಕ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಆದರೆ ಗ್ರಾಮ ಪಂಚಾಯತ್ ಮೌನವಹಿಸಿರುವ ಬಗ್ಗೆ ಈಗ ಮಹಿಳೆಯರು ಆಕ್ರೋಶಗೊಂಡಿದ್ದಾರೆ.
90 ಮನೆಗಳಿಗೆ ಉಚಿತ ನೀರು ನೀಡುವುದರಲ್ಲೇ ಖುಷಿ ಕಾಣುವ ಮೀನುಗಾರ ಯುವಕ "ಸಂತೋಷ"
ಉಡುಪಿಯಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು ನಗರಸಭೆ 5 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವ ಪರಿಸ್ಥಿತಿ ಬಂದಿದೆ.ಬೇಸಿಗೆ ಮಳೆ ಕೊರತೆ ಮತ್ತು ಮುಂಗಾರುಪೂರ್ವ ಮಳೆಯ ಅಭಾವವೇ ಇದಕ್ಕೆ ಕಾರಣ.ನಗರಸಭೆ ಮಾತ್ರವಲ್ಲದೆ ಹಲವು ಪಂಚಾಯತ್ ವ್ಯಾಪ್ತಿಗಳಲ್ಲೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಈ ಮಧ್ಯೆ ನೀರಿನ ಸಮಸ್ಯೆಯ ಗಂಭೀರತೆ ಅರಿತ ಮೀನುಗಾರ ಯುವಕನೊಬ್ಬ ಮನೆಮನೆಗೂ ಉಚಿತ ನೀರು ಸರಬರಾಜು ಮಾಡುತ್ತಿದ್ದಾರೆ.ಈತನ ಹೆಸರು ಸಂತೋಷ್. ಸದ್ಯ ಮೀನುಗಾರಿಕೆ ಬೋಟ್ ಗೆ ರಜೆ ಇರುವ ಕಾರಣ ಮಾನವೀಯತೆ ದೃಷ್ಟಿಯಲ್ಲಿ ಈ ಸೇವೆ ಮಾಡುತ್ತಿದ್ದಾರೆ.ನಗರಸಭೆ ವ್ಯಾಪ್ತಿಯ ಹೊರಗಿರುವ ಕಿದಿಯೂರು ಪಂಚಾಯತ್ ವ್ಯಾಪ್ತಿಯ ಸುಮಾರು 90 ಕ್ಕೂ ಹೆಚ್ಚು ಮನೆಗಳ ನೀರಿನ ಸಮಸ್ಯೆಯನ್ನು ಈ ಯುವಕ ನೀಗಿಸುತ್ತಿದ್ದಾರೆ.
ಮಳೆ ಕೊರತೆ ಉಡುಪಿಗೆ ಇನ್ನು ಐದು ದಿನಗಳಿಗೊಮ್ಮೆ ನೀರು ಪೂರೈಕೆ!
ಇದೇ ಗ್ರಾಮದಲ್ಲಿ ವಾಸವಾಗಿರುವ ಸಂತೋಷ್ ಅವರ ಮನೆಗೂ ನೀರಿನ ಸಮಸ್ಯೆ ತಟ್ಟಿತ್ತು.ಮೊದಲು ತನ್ನ ಮನೆಗೆ ಹಣ ನೀಡಿ ಟ್ಯಾಂಕರ್ ಮೂಲಕ ನೀರು ತರತೊಡಗಿದಾಗ ಪಕ್ಕದ ಮನೆಯವರೂ ಇವರ ನೆರವು ಕೇಳಿದ್ದಾರೆ.ಸಹೃದಯಿ ಸಂತೋಷ್ ,ಅವರಿಗೆ ನೀರು ಉಚಿತವಾಗಿ ಪೂರೈಸಲು ಪ್ರಾರಂಭಿಸಿದರು. ಒಂದೊಂದೇ ಮನೆಯಾಗಿ ಈಗ ಸುಮಾರು 91 ಮನೆಗಳಾಗಿವೆ! ಸ್ನೇಹಿತರ ಟೆಂಪೋ ಪಡೆದುಕೊಂಡು ,ಎಲ್ಲೆಲ್ಲಿಯದೋ ಟ್ಯಾಂಕ್ ಗಳನ್ನು ಕೇಳಿಪಡೆದುಕೊಂಡು ಈ ಸೇವೆ ಮಾಡುತ್ತಿದ್ದಾರೆ.ಗ್ರಾಮಸ್ಥರ ನೀರಿನ ಸಮಸ್ಯೆ ನೀಗಿಸುತ್ತಿದ್ದಾರೆ.
ಬೆಳಗ್ಗಿನಿಂದ ರಾತ್ರಿ ತನಕ ಕಳೆದ ಒಂದು ತಿಂಗಳಿನಿಂದ ಸಂತೋಷ್ ಈ ಸೇವೆ ಮಾಡುತ್ತಿದ್ದಾರೆ. ಯಾವುದೇ ಪ್ರತಿಫಲವನ್ನೂ ಬಯಸದೇ ಅತ್ಯಮೂಲ್ಯ ಮತ್ತು ಅಗತ್ಯವಾಗಿ ಬೇಕಾದ ನೀರನ್ನು ದಾನ ಮಾಡುತ್ತಿರುವ ಈ ಯುವಕನ ಸೇವಾಕಾರ್ಯ ನಿಜಕ್ಕೂ ಗ್ರೇಟ್ ,ಅಲ್ಲವೆ?