Bengaluru- ಸಂಚಾರ ದಟ್ಟಣೆ ತಗ್ಗಿಸಲು ಡ್ರೋನ್‌ ಮೊರೆಹೋದ ಪೊಲೀಸರು

By Sathish Kumar KH  |  First Published Jun 19, 2023, 1:23 PM IST

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಡ್ರೋನ್‌ ಬಳಕೆ ಮಾಡಲು ಮುಂದಾಗಿದ್ದಾರೆ.


ಬೆಂಗಳೂರು (ಜೂ.19): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಬೆಂಗಳೂರು ಸಂಚಾರಿ ಪೊಲೀಸರು ಹೊಸ ಯೋಜನೆಯನ್ನು ರೂಪಿಸಿಕೊಂಡಿದ್ದಾರೆ. ನಗರದ 8 ಅತ್ಯಧಿಕ ಟ್ರಾಫಿಕ್‌ ಜಾಮ್‌ ಇರುವ ರಸ್ತೆಗಳಲ್ಲಿ ಡ್ರೋನ್‌ ಕ್ಯಾಮರಾಗಳನ್ನು ಬಿಟ್ಟು ಸಂಚಾರ ದಟ್ಟಣೆಗೆ ಕಾರಣವನ್ನು ತಿಳಿದುಕೊಂಡು ಪರಿಹರಿಸುವ ಕಾರ್ಯಕ್ಕೆ ಮುಂದಾಗಲಿದ್ದಾರೆ.

ಉದ್ಯಾನ ನಗರಿ ಬೆಂಗಳುರು ಈಗ ದೆಹಲಿ, ಮುಂಬೈ ಮಾದರಿಯಲ್ಲಿ ಟ್ರಾಫಿಕ್‌ ಸಿಟಿ ಆಗುತ್ತಿದೆ. ಬರೋಬ್ಬರಿ 1 ಕೋಟಿಗೂ ಅಧಿಕ ವಾಹನಗಳು ಇದ್ದು, ಪ್ರತಿನಿತ್ಯ ಬೆಂಗಳೂರಿನ ರಸ್ತೆಯಲ್ಲಿ 70 ಲಕ್ಷಕ್ಕೂ ಅಧಿಕ ವಾಹನಗಳು ಸಂಚಾರ ಮಾಡುತ್ತಿವೆ. ಆದ್ದರಿಂದ ಪ್ರಮುಖ ಜಂಕ್ಷನ್‌ಗಳನ್ನು ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು, ಅದನ್ನು ತಗ್ಗಿಸಲು ಪೊಲೀಸರು ಡ್ರೋನ್‌ ಬಳಕೆ ಮಾಡಲು ಮುಂದಾಗಿದ್ದಾರೆ. ಬೆಂಗಳೂರಿನ ಎಂಟು ಸಂಚಾರ ದಟ್ಟಣೆ ಇರುವ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಸೋಮವಾರದಿಂದಲೇ ಡ್ರೋನ್‌ ಮೂಲಕ ವೀಕ್ಷಣೆ ಮಾಡಲು ಮುಂದಾಗಿದ್ದಾರೆ. 

Tap to resize

Latest Videos

ಬೆಂಗಳೂರು- ಧಾರವಾಡ ವಂದೇ ಭಾರತ್‌ ರೈಲು: ಅವಧಿಗಿಂತ ಮುಂಚೆಯೇ ಧಾರವಾಡ ತಲುಪಿದ ಎಕ್ಸ್‌ಪ್ರೆಸ್‌

ಟ್ರಾಫಿಕ್‌ ನಿಯಂತ್ರಣಕ್ಕೆ ಮತ್ತೊಂದು ಪ್ಲ್ಯಾನ್:  ಸಂಚಾರ ದಟ್ಟಣೆ ಕಮ್ಮಿ ಮಾಡೋಕೆ ಸಂಚಾರಿ ಪೊಲೀಸರಿಂದ ಹೊಸ ಪ್ಲಾನ್ ಮಾಡಿದ್ದಾರೆ. ಇಂದಿನಿಂದ ಬೆಂಗಳೂರು ಟ್ರಾಫಿಕ್ ಮೇಲೆ ಡ್ರೋನ್ ಕಣ್ಗಾವಲು ಇರಿಸಲಿದ್ದಾರೆ. ಸಂಚಾರ ನಿರ್ವಹಣೆ, ವಾಹನ ದಟ್ಟಣೆಗೆ ಡ್ರೋನ್​ಗಳ ಬಳಕೆ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ ಇಂದಿನಿಂದ 8 ಕಡೆ ಡ್ರೋನ್ 'ಸಂಚಾರ' ಆರಂಭಿಸಲಾಗುತ್ತಿದೆ. ಸಂಚಾರ ದಟ್ಟಣೆಯ ಜಾಗಗಳಲ್ಲಿ ಡ್ರೋನ್‌ ಮೂಲಕ ಚಿತ್ರೀಕರಣ ಮಾಡಲಾಗುತ್ತದೆ. ಚಿತ್ರೀಕರಣ ಮಾಡಿ ಸಂಚಾರ ದಟ್ಟಣೆಯ ಮಾಹಿತಿ ಸಂಗ್ರಹ ಮಾಡಲಾಗುತ್ತದೆ. 

ಎಂಟು ಡ್ರೋನ್‌ಗಳ ಖರೀದಿ: ನಂತರ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ)ದಲ್ಲಿ ವಿಶ್ಲೇಷಿಸಿ ಸಂಚಾರ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಸಂಚಾರ ದಟ್ಟಣೆ ವೀಕ್ಷಿಸಿ ಟ್ರಾಫಿಕ್ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ. ಸೇಫ್ ಸಿಟಿ ಯೋಜನೆಯಡಿ 8 ಡ್ರೋನ್‌ಗಳನ್ನು ಪೊಲೀಸರು ಖರೀದಿ ಮಾಡಿದ್ದಾರೆ. 4 ಸಂಚಾರ ವಿಭಾಗಕ್ಕೆ ಡ್ರೋನ್​ಗಳ ಹಂಚಿಕೆ ಮಾಡಲಾಗಿದೆ. ಸಂಚಾರ ಪೊಲೀಸರಿಗೆ ಡ್ರೋನ್‌ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ. ಸೋಮವಾರ ಬೆಳಗ್ಗೆಯಿಂದ ಡ್ರೋನ್‌ಗಳ ಬಳಕೆಯನ್ನು ಆರಂಭಿಸಿದ್ದಾರೆ. 

 

 

ಪ್ರಾಯೋಗಿಕ ಡ್ರೋನ್‌ ಬಳಕೆ ಸ್ಥಳಗಳು:  ಸದ್ಯ ಹೆಬ್ಬಾಳ ಮೇಲ್ಸೇತುವೆ, ಸಿಲ್ಕ್‌ ಬೋರ್ಡ್‌ ಜಂಕ್ಷನ್,‌ ಕೆ.ಆರ್‌.ಪುರ ಮೇಲ್ಸೇತುವೆ, ಮಾರತ್‌ಹಳ್ಳಿ, ಸಾರಕ್ಕಿ ಜಂಕ್ಷನ್,‌ ಬನಶಂಕರಿ ಬಸ್‌ ನಿಲ್ದಾಣದ ಬಳಿ, ಇಬ್ಬಲೂರು ಜಂಕ್ಷನ್ ಹಾಗೂ ಟ್ರಿನಿಟಿ ಜಂಕ್ಷನ್ ನಲ್ಲಿ ಬಳಕೆ ಮಾಡಲಾಗುತ್ತಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿ ಪೊಲೀಸರು ಡ್ರೋಣ್ ಹಾರಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆ ಪೀಕ್ ಟೈಮ್ ನಲ್ಲಿ ಮೊದಲ ಬಾರಿ ಡ್ರೋಣ್ ಹಾರಿಸಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ತಗ್ಗಿಸಿದ ಚಿತ್ರದುರ್ಗ ಪೊಲೀಸರು: ಸಿಸಿಟಿವಿ ಪ್ರಯೋಗ ಯಶಸ್ವಿ

10 ಜಂಕ್ಷನ್‌ ಅಭಿವೃದ್ಧಿ ಮಾಡಿದ್ದ ಬಿಬಿಎಂಪಿ:  ಬೆಂಗಳೂರಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡುವ ಉದ್ದೇಶದಿಂದ ನಗರದ 10 ಜಂಕ್ಷನ್‌ಗಳನ್ನು ಅಭಿವೃದ್ಧಿ ಮಾಡಲಾಗಿತ್ತು. ಇದಕ್ಕೆ ಬೆಂಗಳೂರಿನ ಸ್ಥಳೀಯ ಆಡಳಿತ ಮತ್ತು ಮೂಲಸೌಕರ್ಯ ಒದಗಿಸುವ ಸಂಸ್ಥೆಗಳಾದ ಬಿಬಿಎಂಪಿ, ಜಲಮಂಡಳಿ, ಬಿಎಂಆರ್‌ಸಿಎಲ್‌, ಟ್ರಾಫಿಕ್‌ ಪೊಲೀಸರು, ಬೆಸ್ಕಾಂ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡ ಭಾಗಿಯಾಗಿದ್ದರು. ಹಗಲು ರಾತ್ರಿ ಕೆಲಸ ಮಾಡಿದ್ದರು. ಆದರೆ, ಸರ್ಕಾರ ಬದಲಾವಣೆಯಾದ ತಕ್ಷಣವೇ ಟ್ರಾಫಿಕ್‌ ಜಾಮ್‌ ಕೂಡ ಮರಳಿ ಬಂದಿದೆ.

click me!