ದೃಶ್ಯ ಮಾಧ್ಯಮದಿಂದ ನಾಟಕಗಳು ಕಣ್ಮರೆ

By Kannadaprabha News  |  First Published Mar 30, 2023, 6:07 AM IST

ಟಿವಿ ಹಾಗೂ ದೃಶ್ಯ ಮಾಧ್ಯಮಗಳ ಆಗಮನದಿಂದ ಗ್ರಾಮೀಣ ಭಾಗದಲ್ಲಿ ಕುರುಕ್ಷೇತ್ರ ನಾಟಕಗಳು ಕಣ್ಮರೆಯಾಗುತ್ತಿದೆ ಎಂದು ಮಂಡಿ ವರ್ತಕ ತೇವಡೇಹಳ್ಳಿ ಟಿ.ಎ.ದಕ್ಷಿಣಾಮೂರ್ತಿ ಹೇಳಿದರು.


 ಗುಬ್ಬಿ :  ಟಿವಿ ಹಾಗೂ ದೃಶ್ಯ ಮಾಧ್ಯಮಗಳ ಆಗಮನದಿಂದ ಗ್ರಾಮೀಣ ಭಾಗದಲ್ಲಿ ಕುರುಕ್ಷೇತ್ರ ನಾಟಕಗಳು ಕಣ್ಮರೆಯಾಗುತ್ತಿದೆ ಎಂದು ಮಂಡಿ ವರ್ತಕ ತೇವಡೇಹಳ್ಳಿ ಟಿ.ಎ.ದಕ್ಷಿಣಾಮೂರ್ತಿ ಹೇಳಿದರು.

ತಾಲೂಕಿನ ಹೊಸಕೆರೆಯಲ್ಲಿ ಹಮ್ಮಿಕೊಂಡಿದ್ದ ಕುರುಕ್ಷೇತ್ರ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸುಮಾರು ವರ್ಷಗಳ ಹಿಂದೆ ಕುರುಕ್ಷೇತ್ರ ನಾಟಕಗಳಿಗೆ ಸಾವಿರಾರು ಗ್ರಾಮಸ್ಥರು ಎತ್ತಿನಗಾಡಿಯಲ್ಲಿ ಬಂದು ನಾಟಕಗಳನ್ನು ನೋಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಾಟಕಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸ. ಹೊಸಕೆರೆ ದನಗಳ ಜಾತ್ರೆ ವಿಶೇಷವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದನಗಳನ್ನು ಸಾಕುವವರು ಕಡಿಮೆಯಾಗಿದ್ದಾರೆ. ಗ್ರಾಮೀಣ ಭಾಗದ ರೈತರು ಜಾನುವಾರುಗಳನ್ನು ಸಾಕುವುದೇ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ರೈತರು ಜಾನುವಾರುಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದರು.

Tap to resize

Latest Videos

ಬಿಜೆಪಿ ಮುಖಂಡ ಜಿ.ಎನ್‌.ಬೆಟ್ಟಸ್ವಾಮಿ ಮಾತನಾಡಿ, ಕಲಾವಿದರನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮಿಣ ಭಾಗದಲ್ಲಿ ಗ್ರಾಮೀಣ ಸೊಗಡು ಕಣ್ಮೆರೆಯಾಗುತ್ತಿದೆ. ಕಲಾವಿದರಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಬೇಕು. ಸರ್ಕಾರದಿಂದ ಸೌಲಭ್ಯಗಳನ್ನು ಕಲಾವಿದರಿಗೆ ಕೊಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾರುದ್ರಸ್ವಾಮಿ,ಎ.ಕೆ.ಪಿ.ರಾಜು, ಲೋಗನಾಥ್‌, ಪಟ್ಟಣ ಪಂಚಾಯಿತಿ ಸದಸ್ಯ ಶಿವಕುಮಾರ್‌, ಮುಖಂಡರಾದ ಶಿವನೇಹಳ್ಳಿ ಮಲ್ಲೇಶ್‌, ಉಮೇಶ್‌ ಚನ್ನಬಸವಪ್ಪ, ಸಿದ್ದಲಿಂಗರಾಧ್ಯ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಭೂಮಿ ನಡುಗುತ್ತಿದ್ದರೂ ನ್ಯೂಸ್ ಓದಿದ ಆಂಕರ್

ಪೇಶಾವರ (ಮಾರ್ಚ್‌ 22, 2023): ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಉತ್ತರ ಭಾರತ ಮತ್ತು ನೆರೆಯ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಕಟ್ಟಡಗಳು ನಡುಗುತ್ತಿದ್ದಂತೆ ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಧಾವಿಸುವ ಹಲವಾರು ವಿಡಿಯೋಗಳು ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿವೆ. 

ಭೂಕಂಪದ ಅಗಾಧತೆಯನ್ನು ತೋರಿಸುವ ಪಾಕಿಸ್ತಾನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸುಮಾರು 30 ಸೆಕೆಂಡುಗಳ ವಿಡಿಯೋದಲ್ಲಿ ಪಾಕಿಸ್ತಾನದ ಪೇಶಾವರದಲ್ಲಿರುವ ನ್ಯೂಸ್‌ ಸ್ಟುಡಿಯೋವೊಂದು ದೇಶದಲ್ಲಿ ಭೂಕಂಪ ಸಂಭವಿಸುತ್ತಿದ್ದ ನಡುವೆಯೇ ಭೀಕರವಾಗಿ ನಡುಗುತ್ತಿರುವುದನ್ನು ತೋರಿಸುತ್ತದೆ.

ಇದನ್ನು ಓದಿ: Gujarat Earthquake: ಕಛ್‌ನಲ್ಲಿ ಕಂಪಿಸಿದ ಭೂಮಿ, ಆತಂಕದಲ್ಲಿ ಗುಜರಾತ್‌ ಜನತೆ

ಟ್ವಿಟ್ಟರ್ ಬಳಕೆದಾರರು ಈ ವಿಡಿಯೋ ಹಂಚಿಕೊಂಡಿದ್ದು, ‘’ಭೂಕಂಪದ ಸಮಯದಲ್ಲಿ ಪಾಶ್ಟೋ ಟಿವಿ ಚಾನೆಲ್ ಮಾಶ್ರಿಕ್ ಟಿವಿ. ಭೂಮಿ ಕಂಪಿಸುತ್ತಿರುವ ನಡುವೆಯೂ ಧೈರ್ಯವಂತ ಆಂಕರ್‌ ತಮ್ಮ ಲೈವ್ ಕಾರ್ಯಕ್ರಮವನ್ನು ಮುಂದುವರೆಸಿದರು.

ಈ ವಿಡಿಯೋವನ್ನು ಕೆಳಗೆ ನೋಡಿ:

ಈ ವಿಡಿಯೋವು, ಭೂಕಂಪವು ಇಡೀ ಸ್ಟುಡಿಯೋವನ್ನು ಅಲುಗಾಡಿಸಿದಾಗಲೂ ಸ್ಥಳೀಯ ಪಾಷ್ಟೋ ಟಿವಿ ಚಾನೆಲ್ ಮಾಶ್ರಿಕ್ ಟಿವಿಯ ಸುದ್ದಿ ನಿರೂಪಕ ಏನೂ ಆಗಿಲ್ಲವೆಂಬಂತೆ ಶಾಂತತೆ ಕಾಪಾಡಿಕೊಳ್ಳುವುದನ್ನು ಕಾಣಬಹುದು. ಈ ಮಧ್ಯೆ,, ನ್ಯೂಸ್‌ರೂಮ್‌ನಲ್ಲಿ ನಿರೂಪಕನ ಹಿಂದಿರುವ ಟಿವಿ ಪರದೆಗಳು ಮತ್ತು ಇತರ ಉಪಕರಣಗಳು ತೀವ್ರವಾಗಿ ಅಲುಗಾಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಟರ್ಕಿಗೆ ತೆರಳಿದ್ದ ಎನ್‌ಡಿಆರ್‌ಎಫ್‌ ತಂಡಕ್ಕೆ ಮೋದಿ ಮೆಚ್ಚುಗೆ: ಇನ್ನೊಬ್ಬರ ರಕ್ಷಣೆ ನಮ್ಮ ಕರ್ತವ್ಯ ಎಂದ ಪ್ರಧಾನಿ

ಗಮನಾರ್ಹವಾಗಿ, ಭೂಕಂಪದ ಕೇಂದ್ರಬಿಂದುವು ಪಾಕಿಸ್ತಾನ ಮತ್ತು ತಜಕಿಸ್ತಾನದ ಗಡಿಯ ಸಮೀಪ ಆಫ್ಘನ್ ಪಟ್ಟಣದ ಜುರ್ಮ್‌ನ ದಕ್ಷಿಣ-ಆಗ್ನೇಯಕ್ಕೆ 40 ಕಿಲೋಮೀಟರ್ ದೂರದಲ್ಲಿತ್ತು. ಈ ಭೂಕಂಪದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 9 ಜನರು ಮೃತಪಟ್ಟಿದ್ದಾರೆ ಮತ್ತು 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಪಾಕಿಸ್ತಾನದಲ್ಲಿ ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ ಎಂದು ಜಿಯೋ ನ್ಯೂಸ್ ವರದಿ ತಿಳಿಸಿದೆ.

click me!