ಕಾರ್ಕಳ: ಕುಡಿಯುವ ನೀರಿನಲ್ಲಿ ಹುಳ ಪತ್ತೆ!

By Kannadaprabha NewsFirst Published May 17, 2020, 10:32 AM IST
Highlights

ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದಾಗಿ ಪುರಸಭೆ ವತಿಯಿಂದ ನಗರದ ನಿವಾಸಿಗಳಿಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನಲ್ಲಿ ಒಳಚರಂಡಿಯ ನೀರು ಮಿಶ್ರಣವಾದ ಪರಿಣಾಮ ನಳ್ಳಿನೀರಿನಲ್ಲಿ ಹುಳಗಳು ತೇಲಿ ಬಂದ ಘಟನೆ ಪುರಸಭೆ ವ್ಯಾಪ್ತಿ ಆರನೇ ವಾರ್ಡ್‌ನಲ್ಲಿ ಕಂಡುಬಂದಿದೆ.

ಕಾರ್ಕಳ(ಮೇ 17): ಅಸಮರ್ಪಕ ಒಳಚರಂಡಿ ಕಾಮಗಾರಿಯಿಂದಾಗಿ ಪುರಸಭೆ ವತಿಯಿಂದ ನಗರದ ನಿವಾಸಿಗಳಿಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನಲ್ಲಿ ಒಳಚರಂಡಿಯ ನೀರು ಮಿಶ್ರಣವಾದ ಪರಿಣಾಮ ನಳ್ಳಿನೀರಿನಲ್ಲಿ ಹುಳಗಳು ತೇಲಿ ಬಂದ ಘಟನೆ ಪುರಸಭೆ ವ್ಯಾಪ್ತಿ ಆರನೇ ವಾರ್ಡ್‌ನಲ್ಲಿ ಕಂಡುಬಂದಿದೆ.

ಕಾರ್ಕಳ ನಗರ ಭಾಗದಲ್ಲಿ ಒಳಚರಂಡಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಈ ವೇಳೆ ಪುರಸಭೆಗೆ ಸಂಬಂಧಿಸಿದ ಕುಡಿಯುವ ನೀರಿನ ಪೈಪುಗಳು ತುಂಡಾದ ಪರಿಣಾಮ ಒಳಚರಂಡಿ ನೀರು ಪುರಸಭೆ ಕುಡಿಯುವ ನೀರಿನನ ಪೈಪ್‌ಲೈನ್‌ಗಳಿಗೆ ಸೇರಿದೆ.

ಹೊಸ ರೀತಿಯಲ್ಲಿ ಶಾಲೆಗಳು ಆರಂಭದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದ ಶಿಕ್ಷಣ ಇಲಾಖೆ

ಚರಂಡಿ ನೀರಿನ ಪೈಪ್‌ನ ಮಾಲೀನ್ಯ ಕುಡಿಯುವ ನೀರಿನ ಜೊತೆ ಸೇರುವ ಮೂಲಕ ಗಬ್ಬು ವಾಸನೆ ಜೊತೆಗೆ ಹುಳಗಳು ಮನೆಮನೆ ಸೇರುತ್ತಿವೆ. ಸ್ಥಳೀಯರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

click me!