ಸಿಡಿಲು ಬಡಿದು 19 ಕುರಿಗಳು ಸಾವು| ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರದಲ್ಲಿ ನಡೆದ ಘಟನೆ| ಕುರಿ ಮಾಲೀಕರಿಗೆ ಭಾರೀ ನಷ್ಟ|
ಹಗರಿಬೊಮ್ಮನಹಳ್ಳಿ(ಮೇ.17): ಗುಡುಗು ಸಿಡಿಲಿನಿಂದ ಕೂಡಿದ ಮಳೆ ಆರಂಭವಾಗಿ, ತಾಲೂಕಿನ ದಶಮಾಪುರದಲ್ಲಿ ಸಿಡಿಲು ಬಡಿದು 19 ಕುರಿಗಳು ದುರ್ಮರಣ ಹೊಂದಿದ ಘಟನೆ ಶನಿವಾರ ಸಂಜೆ 4.30ಕ್ಕೆ ನಡೆದಿದೆ.
ತಾಲೂಕಿನ ದಶಮಾಪುರ ಕೆರೆಯ ಮುಂಭಾಗದಲ್ಲಿ ಇದ್ದ, ಹಿರೇ ಬಾಲಪ್ಪನವರ ಬೊಪಯ್ಯನವರ ಕುರಿ ಮತ್ತು ಒಂದು ಮೇಕೆ, ಬೋಸಯ್ಯನಿಗೆ ಸೇರಿದ 11 ಕುರಿ ಹಿಂಡುಗಳ ನಡುವೆ ಸಿಡಿಲು ಬಡಿದು, 18 ಕುರಿಗಳು ಒಂದು ಮೇಕೆ ಸೇರಿ 19 ಸಾವನ್ನಪ್ಪಿವೆ.
ಬಳ್ಳಾರಿ: ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಸಾವು, ಕಾರಣ..?
ಹಾನಿ ಅಂದಾಜು ಮೊತ್ತ 1 ಲಕ್ಷ ರು. ಆಗಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಿಳಿಸಿದರು. ಪಶುವೈದ್ಯ ಡಾ. ಪ್ರವೀಣ್, ಎಎಸ್‌ಐ ಸುಬ್ಬಯ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.