ಡಾ.ಅಂಬೇಡ್ಕರ್‌ ಅದಮ್ಯ ಚೇತನ: ಜಿಲ್ಲಾಧಿಕಾರಿ

By Kannadaprabha News  |  First Published Apr 15, 2023, 5:30 AM IST

ದೇಶದ ಅತ್ಯಂತ ಪವಿತ್ರವಾದ ಗ್ರಂಥ ಸಂವಿಧಾನ. ಇದಕ್ಕೆ ಮೂಲ ಕಾರಣಕರ್ತರಾಗಿರುವ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಯಾವುದೇ ಜಾತಿ, ತತ್ವಗಳಿಗೆ ಭೇದ ಭಾವ ತೋರಿಸದೆ ಎಲ್ಲವನ್ನೂ ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಅಭಿಪ್ರಾಯಪಟ್ಟರು.


 ತುಮಕೂರು :  ದೇಶದ ಅತ್ಯಂತ ಪವಿತ್ರವಾದ ಗ್ರಂಥ ಸಂವಿಧಾನ. ಇದಕ್ಕೆ ಮೂಲ ಕಾರಣಕರ್ತರಾಗಿರುವ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಯಾವುದೇ ಜಾತಿ, ತತ್ವಗಳಿಗೆ ಭೇದ ಭಾವ ತೋರಿಸದೆ ಎಲ್ಲವನ್ನೂ ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ರವರ 132ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

Latest Videos

undefined

ಇದುವರೆಗೂ ಯಾರೇ ಪ್ರಯತ್ನ ಪಟ್ಟರೂ ಸಂವಿಧಾನವನ್ನು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ದೇಶದ ತಳಹದಿಯನ್ನು ಬದಲಾವಣೆ ಮಾಡಲು ಯಾರಾದರೂ ಕೈ ಹಾಕಿದರೆ ಅದರಿಂದ ದೇಶದ ಭದ್ರತೆ, ಅಖಂಡತೆಗೆ ಧಕ್ಕೆ ಬರುತ್ತದೆ ಎಂದು ಹೇಳಿದರು.

ಒಬ್ಬ ವ್ಯಕ್ತಿ, ದೇಶ ಹಾಗೂ ವಿಶ್ವವನ್ನು ಉದ್ಧಾರ ಮಾಡಲು ಶಿಕ್ಷಣವೊಂದೇ ಪರಿಹಾರ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಶಿಕ್ಷಣ ಮುಟ್ಟುವಂತಾಗಬೇಕು ಎಂದು ಸಂವಿಧಾನದಲ್ಲಿ ಬರೆದಿದ್ದಾರೆ. ಇಂದಿನ ಚುನಾವಣಾ ವ್ಯವಸ್ಥೆಯೂ ಸಹ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಬರೆದಿರುವಂತೆಯೇ ನಡೆಯುತ್ತಿದೆ ಎಂದು ಹೇಳಿದರು.

ಅಂಬೇಡ್ಕರ್‌ ಅವರು ಇದ್ದಂತಹ ಪರಿಸ್ಥಿತಿಯಲ್ಲಿ ಅಷ್ಟುಎತ್ತರಕ್ಕೆ ಬೆಳೆದರು ಎಂದರೆ ಅವರೊಬ್ಬ ಅದ್ಭುತ ಚೇತನ. ನಮ್ಮನ್ನು ಯಾರೋ ಆಳುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಪಡೆಯುವುದೇ ದುರ್ಲಭ. ಆದರೂ ಅವರ ತಂದೆ ಮಾಡಿದ ತ್ಯಾಗ, ಧೈರ್ಯ, ಅವರು ಎದುರಿಸಿದ ಪರಿಸ್ಥಿತಿ ಎಲ್ಲವೂ ಭಯಾನಕ. ಅಂತಹ ಪರಿಸ್ಥಿತಿಯಲ್ಲಿ ಅತ್ಯದ್ಭುತ ಚೇತನವಾಗಿ ಅಂಬೇಡ್ಕರ್‌ ಅವರು ಹೊರ ಹೊಮ್ಮಿದ್ದಾರೆ. ನಮ್ಮ ದೇಶದಲ್ಲಿ ಆರ್ಥಿಕ ಸುಭದ್ರತೆ ಇದೆ ಎಂದರೆ ಅದಕ್ಕೆ ರಿಸವ್‌ರ್‍ ಬ್ಯಾಂಕ್‌ ಕಾರಣ. ಈ ರಿಸವ್‌ರ್‍ ಬ್ಯಾಂಕ್‌ ಇಂಡಿಯಾ ಸ್ಥಾಪನೆಯಾಗಲು ಮೂಲ ಕಾರಣಕರ್ತರು ಡಾ. ಅಂಬೇಡ್ಕರ್‌ ಎಂದು ಪಾಟೀಲ್‌ ಹೇಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಅಂಬೇಡ್ಕರ್‌ರವರ ಚಿಂತನೆಯನ್ನು ನಾವೆಲ್ಲೂ ಅರಿತು ಮೈಗೂಡಿಸಿಕೊಳ್ಳಬೇಕು. ಕೇವಲ ಅಂಬೇಡ್ಕರ್‌ ಅವರ ಹೆಸರನ್ನು ಹೇಳಿದರೆ ಸಾಲದು, ಅವರ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಾವು ನೀಡುವ ನಿಜವಾದ ಗೌರವವಾಗಿದೆ. ಅಂಬೇಡ್ಕರ್‌ ಬಗ್ಗೆ ಮತ್ತು ಅವರ ಚಿಂತನೆಗಳ ಹೆಚ್ಚು ಹೆಚ್ಚು ಚರ್ಚೆ ಮಾಡುತ್ತಲೇ ಇರಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೂ ಅವರ ಬಗ್ಗೆ ತಿಳಿಸುವಂತಹ ಕಾರ್ಯವಾಗಲಿದೆ. ಇದರಿಂದ ನಮ್ಮ ಜ್ಞಾನವೂ ವಿಸ್ತರಿಸುತ್ತಾ ಹೋಗುತ್ತೆ ಎಂದ ಅವರು, ಅಂಬೇಡ್ಕರ್‌ ಅವರ ಜ್ಞಾನವನ್ನು ಸಂವಿಧಾನ ಸಾಕ್ಷೀಕರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪವಿಭಾಗಾಧಿಕಾರಿ ಹೋಟೆಲ್‌ ಶಿವಪ್ಪ, ಕೃಷ್ಣಪ್ಪ ಹಾಗೂ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಅಂಬೇಡ್ಕರ್‌ ಅವರು ಯಾವುದೇ ಒಂದು ಜಾತಿ, ಸಮುದಾಯಕ್ಕೆ ಕಾನೂನು ಮಾಡಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲಕ್ಕೆತ್ತುವ ನೀತಿ ನಿಯಮಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಸಂವಿಧಾನದ ವಿರುದ್ಧವಾಗಿ ಯಾವುದೇ ಯೋಜನೆಗಳನ್ನು ಮಾಡಲು ಸಾಧ್ಯವಿಲ್ಲ. ಹಾಗೊಂದು ರೀತಿ ಮಾಡಿದರೆ ಸುಪ್ರೀಂ ಕೋರ್ಚ್‌ ಮತ್ತು ಹೈಕೋರ್ಚ್‌ನಲ್ಲಿ ಅದು ಬಿದ್ದು ಹೋಗುತ್ತದೆ. ನಮ್ಮ ಸಂವಿಧಾನದಲ್ಲಿ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯುವಂತೆ ಬರೆದಿದ್ದಾರೆ.

ವೈ.ಎಸ್‌.ಪಾಟೀಲ ಡೀಸಿ

ಇಡೀ ವಿಶ್ವದಲ್ಲೇ ಮಹಾನ್‌ ಚೇತನ, ಶ್ರೇಷ್ಠ ಸಂಸದೀಯ ಪಟು ಡಾ. ಅಂಬೇಡ್ಕರ್‌ ಅವರು. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ನೀಡಿದ್ದಾರೆ. ಅಂಬೇಡ್ಕರ್‌ ಅವರು ಅರಿಯದ ವಿಚಾರವಿಲ್ಲ, ಬರೆಯದ ವಿಷಯವಿಲ್ಲ. ಅಷ್ಟುವಿಸ್ತೃತರೂಪದ ಬರವಣಿಗೆ ಅಂಬೇಡ್ಕರ್‌ ಅವರಲ್ಲಿತ್ತು. ಇಂತಹ ಸಾಧನೆ ಅಂಬೇಡ್ಕರ್‌ ಅವರಿಗೆ ಮಾತ್ರ ಸಾಧ್ಯವಾಗಿದೆ.

ಡಾ.ಕೆ.ವಿದ್ಯಾಕುಮಾರಿ ಜಿ.ಪಂ. ಸಿಇಒ

click me!